2-3 ಲಕ್ಷ ರೂಗೆ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರು, ವೈರಲ್ ಪೋಸ್ಟ್ ಅಸಲಿಯತ್ತು ಬಹಿರಂಗ!

First Published | Oct 14, 2023, 3:30 PM IST

ರತನ್ ಟಾಟಾ ನೆಚ್ಚಿನ ಹಾಗೂ ಅತೀವ ಇಷ್ಟಪಟ್ಟ ಕಾರುಗಳ ಪೈಕಿ ಟಾಟಾ ನ್ಯಾನೋ ಇದೀಗ 2 ರಿಂದ 3 ಲಕ್ಷ ರೂಪಾಯಿಗೆ ಎಲೆಕ್ಟ್ರಿಕ್ ಕಾರಾಗಿ ಬಿಡುಗಡೆಯಾಗಲಿದೆ ಅನ್ನೋ  ವೈರಲ್ ಪೋಸ್ಟ್ ಹರಿದಾಡುತ್ತಿದೆ. ನಿಜಕ್ಕೂ ನ್ಯಾನೋ ಕಾರು ಇವಿ ಕಾರಾಗಿ ಬಿಡುಗಡೆಯಾಗುತ್ತಾ? ಈ ಪೋಸ್ಟ್ ಅಸಲಿಯತ್ತೇನು? ಇಲ್ಲಿದೆ ವಿವರ.

ರತನ್ ಟಾಟಾ ಅತೀವ ಕಾಳಜಿ ವಹಿಸಿ, ತಾವೇ ಖುದ್ದಾಗಿ ಡಿಸೈನ್ ಸೇರಿದಂತೆ ಹಲವು ವಿಚಾರಗಳನ್ನು ಅಂತಿಮಗೊಳಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಕಾರು ಟಾಟಾ ನ್ಯಾನೋ. 2008ರಲ್ಲಿ ಬಿಡುಗಡೆಯಾದ ನ್ಯಾನೋ ಭಾರತದ ಅತ್ಯಂತ ಅಗ್ಗದ ಕಾರು ಎಂದೇ ಪ್ರಸಿದ್ಧಿಯಾಗಿತ್ತು.
 

2018ರ ವರೆಗೆ ಭಾರತದ ಕಾರು ಮಾರುಕಟ್ಟೆಯಲ್ಲಿ ಮಿಂಚಿದ ಕಾರು ಬಳಿಕ ಸ್ಥಗಿತಗೊಂಡಿತು. ಹಲವು ಬಾರಿ ಟಾಟಾ ನ್ಯಾನೋ ಮತ್ತೆ ಬಿಡುಗಡೆಯಾಗುತ್ತಿದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಇದೀಗ ನ್ಯಾನೋ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗುತ್ತಿದೆ ಅನ್ನೋ ಪೋಸ್ಟ್‌ಗಳು ಹರಿದಾಡುತ್ತಿದೆ.
 

Tap to resize

2 ರಿಂದ 3 ಲಕ್ಷ ರೂಪಾಯಿಗೆ ಟಾಟಾ ಮೋಟಾರ್ ನ್ಯಾನೋ ಇವಿ ಕಾರನ್ನು ಬಿಡುಗಡೆ ಮಾಡುತ್ತಿದೆ ಅನ್ನೋ ಪೋಸ್ಟ್ ಹರಿದಾಡುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ರತನ್ ಟಾಟಾ ಬಳಕೆ ಮಾಡುತ್ತಿರುವ ಟಾಟಾ ನ್ಯಾನೋ ವಿಶೇಷ ಇವಿ ಕಾರಿನ ಉದಾಹರಣೆಯನ್ನು ನೀಡಲಾಗುತ್ತಿದೆ.

ಜಪಾನ್ ಆಟೋಮೇಕರ್ ಟೋಯೋಟಾ  Aygo ಹ್ಯಾಚ್‌ಬ್ಯಾಕ್ ಡಿಸೈನ್ ಮೂಲವಾಗಿಟ್ಟುಕೊಂಡು ನ್ಯಾನೋ ಇವಿ ಕಾರಿನ ಫೋಟೋ ಹರಿಬಿಡಲಾಗಿದೆ. ಆದರೆ ಅಸಲಿ ವಿಚಾರ ಎಂದರೆ, ಸದ್ಯ ಟಾಟಾ ಮೋಟಾರ್ಸ್ ನ್ಯಾನೋ ಕಾರನ್ನು ಇವಿ ಕಾರಾಗಿ ಮಾರುಕಟ್ಟೆಗೆ ಪರಿಚಯಿಸುವ ಯಾವುದೇ ಯೋಜನೆ ಇಲ್ಲ. 
 

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಟಾಟಾ ನ್ಯಾನೋ ಇವಿ ಕಾರಿನ ಪೋಸ್ಟ್ ಸುಳ್ಳು. ಇದು ಟಾಟಾ ಮೋಟಾರ್ ಅಧಿಕೃತ ಮಾಹಿತಿಯಲ್ಲ ಅನ್ನೋದು ಸ್ಪಷ್ಟವಾಗಿದೆ.

ಜನವರಿ 10, 2008ರಲ್ಲಿ ಟಾಟಾ ಮೋಟಾರ್ಸ್ ನ್ಯಾನೋ ಕಾರನ್ನು ಪರಿಚಯಿಸಿತು. ಆರಂಭಿಕ 1 ಲಕ್ಷ ರೂಪಾಯಿ ಬೆಲೆಯಲ್ಲಿ ನ್ಯಾನೋ ಕಾರು ಮಾರುಕಟ್ಟೆಗೆ ಲಗ್ಗೆ ಇಟ್ಟಿತ್ತು.

2017ರ ವೇಳೆಗೆ ಟಾಟಾ ನ್ಯಾನೋ ಕಾರಿನ ಬೆಲೆ 2.15 ಲಕ್ಷ ರೂಪಾಯಿಗೆ ಏರಿಕೆಯಾಗಿತ್ತು. ಆದರೆ 2018ರ ವೇಳೆಗೆ ಟಾಟಾ ನ್ಯಾನೋ ಕಾರು ಬೇಡಿಕೆ ಕೊರತೆಯಿಂದ ಸ್ಥಗಿತಗೊಂಡಿತು.

ಇತ್ತೀಚೆಗೆ ರತನ್ ಟಾಟಾ ನೆಚ್ಚಿನ ಟಾಟಾ ನ್ಯಾನೋ ಕಾರನ್ನು ರತನ್ ಟಾಟಾ ಮ್ಯಾನೇಜರ್ ಶಂತನೂ ಎಲೆಕ್ಟ್ರಿಕ್ ಕಾರಾಗಿ ಪರವರ್ತಿಸಿ ಉಡುಗೊರೆ ನೀಡಿದ್ದರು. ಈ ವೇಳೆ ಟಾಟಾ ನ್ಯಾನೋ ಕಾರು ಮಾರುಕಟ್ಟೆಗೆ ಬರಲಿದೆ ಅನ್ನೋ ಮಾತುಗಳು ಆರಂಭಗೊಂಡಿತ್ತು.

Latest Videos

click me!