ಭಾರತ ಇದೀಗ ಎಲೆಕ್ಟ್ರಿಕ್ ವಾಹನಗಳ ಹಬ್ ಆಗಿ ಬದಲಾಗಿದೆ. ಸ್ಕೂಟರ್, ಬೈಕ್, ಕಾರು, ಮಿನಿ ಟ್ರಕ್, ಬಸ್ ಸೇರಿದಂತೆ ವಿವಿಧ ವಾಹಗಳು ಎಲೆಕ್ಟ್ರಿಕ್ ರೂಪದಲ್ಲಿ ಲಭ್ಯವಿದೆ. ವಿವಿದ ಬ್ರ್ಯಾಂಡ್‌ಗಳೂ ಭಾರತದಲ್ಲಿದೆ. ಇದೀಗ ಕಾರ್ ಗುರು ಇಂಟಲಿಜೆನ್ಸ್ ವರದಿ ಬಹಿರಂಗವಾಗಿದ್ದು, ವಿಶ್ವದಲ್ಲಿ ಎಲೆಕ್ಟ್ರಿಕ್ ಕಾರುಗಳ ಬೆಲೆ ಗಣನೀಯ ಇಳಿಕೆಯನ್ನು ದಾಖಲಿಸಿದೆ.
ಈ ವರದಿ ಪ್ರಕಾರ 2023ರ ಫೆಬ್ರವರಿಯಿಂದ 2024 ಮಾರ್ಚ್ ತಿಂಗಳ ಅವಧಿಯಲ್ಲಿ ಭಾರತದಲ್ಲಿ ಇವಿ ಕಾರುಗಳ ಬೆಲೆ ಶೇಕಡಾ 8.2 ರಷ್ಟು ಕುಸಿತ ಕಂಡಿದೆ. ಇವಿ ಕಾರುಗಳ ಸಂಗ್ರಹ ಶೇಕಡಾ 174ರಷ್ಟು ಹೆಚ್ಚಳವಾಗಿದೆ.
ಎಲೆಕ್ಟ್ರಿಕ್ ಕಾರುಗಳ ಬೆಲೆ ಕಳೆದೊಂದು ವರ್ಷದಲ್ಲಿ ಇಳಿಕೆಯಾಗಿದೆ. ಆದರೆ ಇನ್ನೂ ಕೈಗೆಟುಕುವ ದರದಲ್ಲಿ ಎಲೆಕ್ಟ್ರಿಕ್ ಕಾರುಗಳು ಲಭ್ಯವಾಗುತ್ತಿಲ್ಲ ಅನ್ನೋ ಕೊರಗು ಭಾರತದ ಕಾರು ಪ್ರಿಯರಲ್ಲಿದೆ.
ಇವಿಗೆ ಪರ್ಯಾಯವಾಗಿ ಸಿಎನ್‌ಜಿ ಕಾರುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ಹೈಬ್ರಿಡ್ ವಾಹನಗಳ ಬೇಡಿಕೆ ನಿರೀಕ್ಷಿತ ಮಟ್ಟದಲ್ಲಿ ಏರಿಕೆಯಾಗಿಲ್ಲ. ಇದಕ್ಕೆ ಮತ್ತೆ ಬೆಲೆ ಕಾರಣವಾಗಿದೆ.
ಭಾರತದಲ್ಲಿ ದುಬಾರಿ ಎಲೆಕ್ಟ್ರಿಕ್ ಕಾರುಗಳ ಜೊತೆಗೆ ಕೈಗೆಟುಕುವ ದರದ ಕಾರುಗಳು ಲಭ್ಯವಿದೆ. ಈ ಪೈಕಿ ಟಾಟಾ ಮೋಟಾರ್ಸ್, ಎಂಜಿ ಮೋಟಾರ್ಸ್, ಹ್ಯುಂಡೈ, ಕಿಯಾ ಬ್ರ್ಯಾಂಡ್‌ಗಳು ಭಾರತದಲ್ಲಿ ಅತೀ ಹೆಚ್ಚು ಮಾರುಕಟ್ಟೆ ಹೊಂದಿದೆ.
ಪ್ರಿಮಿಯಂ ಎಲೆಕ್ಟ್ರಿಕ್ ಕಾರುಗಳ ಪೈಕಿ ವಿಶ್ವದಲ್ಲಿ ಕಿಯಾ ಇವಿ9 ಗರಿಷ್ಠ ಮಾರಾಟ ಹೊಂದಿದೆ. ಇನ್ನು ಹಮ್ಮರ್ ಇವಿ, ಹ್ಯಂಡೋ ಕೋನಾ, ಮಿನಿ ಕೂಪರ್ ಇವಿ ಕಾರುಗಳು ಹೆಚ್ಚು ಮಾರಾಟವಾಗುತ್ತಿರುವ ಕಾರುಗಳು ಎಂದು ಕಾರು ಗುರು ವರದಿ ಹೇಳುತ್ತಿದೆ.
ಮರ್ಸಿಡಿಸ್ ಬೆಂಜ್ ಇಕ್ಯೂಸ್, ವೋಗ್ಸ್‌ವ್ಯಾಗನ್ ಐಡಿ, ಫೋರ್ಡ್ ಮಸ್ತಾಂಗ್ ಮ್ಯಾಕ್ ಇ ಕಾರುಗಳು ಅತೀ ಕಡಿಮೆ ಮಾರಾಟ ದಾಖಲೆ ಹೊಂದಿದೆ ಎಂದು ವರದಿ ಹೇಳುತ್ತಿದೆ.