ದಾಖಲೆ ಬರೆದ ಜೊಮೆಟೋ ಸಂಸ್ಥಾಪಕ, ಆಸ್ಟನ್ ಮಾರ್ಟಿನ್ DB12 ಕಾರು ಖರೀದಿಸಿದ ಮೊದಲ ಭಾರತೀಯ!

First Published | Mar 14, 2024, 6:01 PM IST

ಜೊಮೆಟೋ ಸಂಸ್ಥಾಪಕ ದೀಪಿಂದರ್ ಗೋಯಲ್ ಹೊಚ್ಚ ಹೊಸ ಆಸ್ಟನ್ ಮಾರ್ಟಿನ್ DB12 ಸೂಪರ್ ಕಾರು ಖರೀದಿಸಿದ್ದಾರೆ. 4.9 ಕೋಟಿ ರೂ ಎಕ್ಸ್ ಶೋ ರೂಂ ಬೆಲೆಯ ಈ ಕಾರು ಖರೀದಿಸಿದ ಮೊದಲ ಭಾರತೀಯ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾರತದಲ್ಲಿ ಇದುವರೆಗೆ ಯಾರೂ ಖರೀದಿಸದ ಈ ಕಾರಿನ ವಿಶೇಷತೆ ಏನು? 
 

ಆನ್‌ಲೈನ್ ಫುಡ್ ಡೆಲಿವರಿ ಮೂಲಕ ಭಾರತದಲ್ಲಿ ಕ್ರಾಂತಿ ಮಾಡಿರುವ ಜೊಮೆಟೋ ದೇಶದ ಅತೀ ದೊಡ್ಡ ಕಂಪನಿಯಾಗಿ ಬೆಳೆದಿದೆ. ಇದೀಗ ಸಂಸ್ಥಾಪ ದೀಪಿಂದರ್ ಗೋಯೆಲ್ ಅತೀ ದುಬಾರಿ ಆಸ್ಟನ್ ಮಾರ್ಟಿನ್ DB12 ಕಾರು ಖರೀದಿಸಿದ್ದಾರೆ.
 

ಆಸ್ಟನ್ ಮಾರ್ಟಿನ್ DB12 ಕಾರಿನ ಏಕ್ಸ್ ಶೋ ರೂಂ ಬೆಲೆ 4.9 ಕೋಟಿ ರೂಪಾಯಿ. 2023ರ ಸೆಪ್ಟೆಂಬರ್ ತಿಂಗಳಲ್ಲಿ ಈ ಕಾರು ಭಾರತದಲ್ಲಿ ಬಿಡುಗಡೆಯಾಗಿದೆ. ಬೆಂಗಳೂರಿನಲ್ಲಿ DB12 ಕಾರು ಬಿಡುಗಡೆಯಾಗಿತ್ತು.
 

Tap to resize

ಇದು ರೇಸಿಂಗ್ ಸೂಪರ್ ಕಾರು ಎಂದೇ ಗುರುತಿಸಿಕೊಂಡಿದೆ. 100 ಕಿ.ಮೀ ವೇಗವನ್ನು ಕೇವಲ 3.5 ಸೆಕೆಂಡ್‌ನಲ್ಲಿ ಪಡೆದುಕೊಳ್ಳಲಿದೆ. 680PS ಪವರ್ ಹಾಗೂ 800nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  ವಿ8 ಟ್ವಿನ್ ಟರ್ಬೋ ಪವರ್‌ಟ್ರೇನ್‌ ಎಂಜಿನ್ ಹೊಂದಿದೆ.

ಆಸ್ಟನ್ ಮಾರ್ಟಿನ್ ಕಾರು ಮಾತ್ರ ದುಬಾರಿಯಲ್ಲ, ಇದರ ನಿರ್ವಹಣೆ ಕೂಡ ಬಲು ದುಬಾರಿ. ಭಾರತದಲ್ಲಿ ಬೆರೆಳೆಣಿಕೆ ಕಾರುಗಳು ಮಾತ್ರ ಬಿಡುಗಡೆಯಾಗಿದೆ. ಆದರೆ ಆರ್ಟನ್ ಮಾರ್ಟಿನ್ ಭಾರತದಲ್ಲಿ 95 ವರ್ಷಗಳ ಇತಿಹಾಸ ಹೊಂದಿದೆ.

ಜೊಮೆಟಾ ಸಂಸ್ಥಾಪಕ ಹಾಗೂ ಸಿಇಒ ದೀಪಿಂದರ್ ಇದೀಗ ಹಸಿರು ಬಣ್ಣದ ಆ್ಯಸ್ಟನ್ ಮಾರ್ಟಿನ್ DB12 ಕಾರು ಖರೀದಿಸಿದ್ದಾರೆ. ಈ ಕಾರು ಜಿಟಿ ಸೆಗ್ಮೆಂಟ್‌ ಕಾರಿಗಿಂತಲೂ ವಿಶೇಷವಾಗಿದೆ.
 

ಕಳೆದ ಸೆಪ್ಟೆಂಬರ್‌ನಿಂದ ಇಲ್ಲೀವರೆಗೆ ಈ ದುಬಾರಿ ಕಾರನ್ನು ಕೆಲವೇ ಕೆಲವು ಮಂದಿ ಬುಕ್ ಮಾಡಿದ್ದಾರೆ. ಈ ಪೈಕಿ ಮೊದಲು ಬುಕ್ ಮಾಡಿ ಕಾರು ಡೆಲಿವರಿ ಪಡೆದ ಹೆಗ್ಗಳಿಕೆಗೆ ದೀಪಿಂದರ್ ಪಾತ್ರರಾಗಿದ್ದಾರೆ. 
 

ತಮ್ಮ ವಿನೂತನ ಪ್ರಯೋಗ, ಅದ್ಭುತ ಐಡಿಯಾಗಳ ಮೂಲಕ ಜೊಮೆಟೋ ಫುಡ್ ಡೆಲಿವರಿ ಕಂಪನಿ ಕಟ್ಟಿ ಬೆಳೆಸಿದ ದೀಪಿಂದರ್ ಗೋಯಲ್ ಹಲವರಿಗೆ ಸ್ಪೂರ್ತಿಯಾಗಿದ್ದಾರೆ. ದೀಪಿಂದರ್ ಗೋಯಲ್ ಬಳಿ ಪೊರ್ಶೆ 911 ಟರ್ಬೋ ಎಸ್, ಫೆರಾರಿ ರೊಮಾ, ಲ್ಯಾಂಬೋರ್ಗಿನಿ ಉರುಸ್ ಸೇರಿದಂತೆ ಹಲವು ದುಬಾರಿ ಕಾರುಗಳನ್ನು ಹೊಂದಿದ್ದಾರೆ

Latest Videos

click me!