ದೀಪಾವಳಿ ಹಬ್ಬದ ಆಫರ್, ಈ ಕಾರು ಖರೀದಿಸಿದರೆ 5 ಲಕ್ಷ ರೂಪಾಯಿ ಉಳಿತಾಯ!

First Published | Nov 6, 2023, 11:56 AM IST

ದೀಪಾವಳಿ ಹಬ್ಬಕ್ಕೆ ಭಾರತದ ಆಟೋಮೊಬೈಲ್ ಕ್ಷೇತ್ರ ಗ್ರಾಹಕರನ್ನು ಸೆಳೆಯಲು ಹೊಸ ಹೊಸ ಆಫರ್ ಘೋಷಿಸುತ್ತಿದೆ. ಈ ಬಾರಿಯ ಹಬ್ಬಕ್ಕೆ ಕೆಲ ಆಯ್ದ ಕಾರುಗಳ ಮೇಲೆ ಈಗಾಗಲೇ ಬಂಪರ್ ಆಫರ್ ಘೋಷಿಸಲಾಗಿದೆ. ಈ 6 ಕಾರುಗಳನ್ನು ಖರೀದಿಸುವ ಪ್ಲಾನ್ ನಿಮ್ಮದಾಗಿದ್ದರೆ, ಗರಿಷ್ಠ 5 ಲಕ್ಷ ರೂಪಾಯಿ ಉಳಿತಾಯ ಮಾಡಲು ಸಾಧ್ಯವಿದೆ.

ದೀಪಾವಳಿ ಹಬ್ಬಕ್ಕೆ ಕೆಲ ಆಟೋಮೊಬೈಲ್ ಕಂಪನಿಗಳು ಬಂಪರ್ ಆಫರ್ ಘೋಷಿಸಿದೆ. ಈ ಮೂಲಕ ಗ್ರಾಹಕರು ಗರಿಷ್ಠ ಲಾಭ, ಗರಿಷ್ಠ ಉಳಿತಾಯದ ಮೂಲಕ ಕಾರು ಕನಸು ನನಸಾಗಿಸಬಹುದು.

ಟೋಯೋಟಾ ಹಿಲಕ್ಸ್ ಪಿಕ್ ಅಪ್ ಟ್ರಕ್ ಖರೀದಿಸುವ ಗ್ರಾಹಕರಿಗೆ ಬರೋಬ್ಬರಿ 5 ಲಕ್ಷ ರೂಪಾಯಿ ಆಫರ್ ಸಿಗಲಿದೆ. ಹಿಲಕ್ಸ್ ಎಕ್ಸ್ ಶೋ ರೂಂ ಬೆಲೆ 30.40 ಲಕ್ಷ ರೂಪಾಯಿಂದ 37.90 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)

Tap to resize

ಮಹೀಂದ್ರ XUV400 ಎಲೆಕ್ಟ್ರಿಕ್ ಕಾರು ಖರೀದಿಸುವ ಆಲೋಚನೆ ನಿಮ್ಮದಾಗಿದ್ದರೆ, ಈ ದೀಪಾವಳಿ ಹಬ್ಬಕ್ಕೆ 3 ಲಕ್ಷ ರೂಪಾಯಿ ಆಫರ್ ಸಿಗಲಿದೆ.  XUV400 ಎಲೆಕ್ಟ್ರಿಕ್ ಕಾರಿನ ಎಕ್ಸ್ ಶೋ ರೂಂ ಬೆಲೆ 15.99 ಲಕ್ಷ ರೂಪಾಯಿಯಿಂದ 19.19 ಲಕ್ಷ ರೂಪಾಯಿ

ಭಾರತದಲ್ಲಿ ಸಿಟ್ರೊಯೆನ್ ಕಾರು ಸಂಚಲನ ಸೃಷ್ಟಿಸಿದೆ. ಇದೀಗ ಮಾರುಕಟ್ಟೆ ವಿಸ್ತರಿಸಲು ಸಿಟ್ರೊಯೆನ್ ಸಿ5 ಏರ್‌ಕ್ರಾಸ್ ಕಾರು ಖರೀದಿಸುವ ಗ್ರಾಹಕರಿಗೆ 2.5 ಲಕ್ಷ ರೂಪಾಯಿ ಆಫರ್ ಸಿಗಲಿದೆ. ಈ ಕಾರಿನ ಎಕ್ಸ್ ಶೋ ರೂಂ ಬೆಲೆ 36.91 ಲಕ್ಷ ರೂಪಾಯಿಯಿಂದ 37.67 ಲಕ್ಷ ರೂಪಾಯಿ.

ಎಲೆಕ್ಟ್ರಿಕ್ ಕಾರಿನ ಪೈಕಿ ಎಂಜಿ ZS ಕಾರು ಭಾರತದಲ್ಲಿ ಬೇಡಿಕೆ ಪಡೆದುಕೊಂಡಿದೆ. ಈ ಕಾರಿಗೆ 2.3 ಲಕ್ಷ ರೂಪಾಯಿ ಆಫರ್ ಘೋಷಿಸಲಾಗಿದೆ. ಕಾರಿನ ಎಕ್ಸ್ ಶೋ ರೂಂ ಬೆಲೆ 22.88 ಲಕ್ಷ ರೂಪಾಯಿಂದ 26 ಲಕ್ಷ ರೂಪಾಯಿ

ಈ ದೀಪಾವಳಿ ಹಬ್ಬಕ್ಕೆ ಹ್ಯುಂಡೈ ಕೋನಾ ಎಲೆಕ್ಟ್ರಿಕ್ ಕಾರು ಖರೀದಿಸುವ ಗ್ರಾಹಕರು 2 ಲಕ್ಷ ರೂಪಾಯಿ ಉಳಿತಾಯ ಮಾಡಲು ಸಾಧ್ಯವಿದೆ. ಈ ಕಾರಿನ ಎಕ್ಸ್ ಶೋ ರೂಂ ಬೆಲೆ 23.84 ಲಕ್ಷ ರೂಪಾಯಿಯಿಂದ 24.03 ಲಕ್ಷ ರೂಪಾಯಿ.

ಭಾರತದ ಮಾರುಕಟ್ಟೆಯಲ್ಲಿ ಜೀಪ್ ಕಾರು ಬ್ರ್ಯಾಂಡ್ ಭರ್ಜರಿ ಮೋಡಿ ಮಾಡಿದೆ. ಈ ಪೈಕಿ ಜೀಪ್ ಮೆರಿಡಿಯನ್ ಕಾರಿಗೆ ದೀಪಾವಳಿ ಹಬ್ಬದ ಪ್ರಯುಕ್ತ 1.85 ಲಕ್ಷ ರೂಪಾಯಿ ಆಫರ್ ನೀಡಲಾಗಿದೆ. ಈ ಕಾರಿನ ಆರಂಭಿಕ ಬೆಲೆ 33.40 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)

ದೀಪಾವಳಿ ಹಬ್ಬಕ್ಕೆ ಬಹುತೇಕ ಆಟೋಮೊಬೈಲ್ ಕಂಪನಿಗಳು ಆ್ಯಕ್ಸಸರಿ, ಕಡಿಮೆ ಬಡ್ಡಿದರದ ಸಾಲ, ಕಡಿಮೆ ಡೌನ್‌ಪೇಮೆಂಟ್ ಸೇರಿದಂತೆ ಇತರ ಆಫರ್‌ಗಳನ್ನು ಘೋಷಿಸಿದೆ. ಸಮೀಪದ ಡೀಲರ್ ಬಳಿ ಸಂಪರ್ಕಿಸಿ ಆಫರ್ ಖಚಿತಪಡಿಸಿಕೊಳ್ಳಿ.

Latest Videos

click me!