ಲೋನ್ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ?
ನೀವು ಖರೀದಿಸಲು ಇಚ್ಛಿಸಿರುವ ಕಾರಿನ ಮೇಲೆ ಲೋನ್ ಇದೆಯೇ ಎಂದು ತಿಳಿಯಲು ಕೆಳಗಿನ ವಿಧಾನಗಳನ್ನು ಅನುಸರಿಸಿ:
ಆರ್‌ಸಿ ಕಾರ್ಡ್ ಪರಿಶೀಲಿಸಿ: ಕಾರಿನ ಮೂಲ ಆರ್‌ಸಿ ಕಾರ್ಡ್‌ನಲ್ಲಿ 'Hypothecated to' ಎಂದು ಬರೆದು ಯಾವುದಾದರೂ ಬ್ಯಾಂಕ್ ಹೆಸರು ಇದೆಯೇ ಎಂದು ನೋಡಿ.
ವಾಹನ ಪೋರ್ಟಲ್ (Vahan Portal): ಸರ್ಕಾರದ 'ಪರಿವಾಹನ ಸೇವಾ' ಅಥವಾ 'ವಾಹನ' ವೆಬ್‌ಸೈಟ್‌ಗೆ ಭೇಟಿ ನೀಡಿ ಕಾರಿನ ನಂಬರ್ ನಮೂದಿಸುವ ಮೂಲಕ ಆರ್‌ಸಿ ಸ್ಥಿತಿಯನ್ನು (RC Status) ಚೆಕ್ ಮಾಡಿ. ಅಲ್ಲಿ ಹೈಪೋಥಿಕೇಶನ್ ಸಕ್ರಿಯವಾಗಿದೆಯೇ ಅಥವಾ ಇಲ್ಲವೇ ಎಂಬ ಮಾಹಿತಿ ದೊರೆಯುತ್ತದೆ.
ಎಂ-ಪರಿವಾಹನ ಆ್ಯಪ್: ನಿಮ್ಮ ಮೊಬೈಲ್‌ನಲ್ಲಿ ಎಂ-ಪರಿವಾಹನ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ವಾಹನದ ವಿವರಗಳನ್ನು ಪಡೆಯಬಹುದು.