ಮಳೆಗಾಲದಲ್ಲಿ ಕಾರ್ ಓಡಿಸುವಾಗ ಡ್ರೈವರ್‌ಗಳು ಎದುರಿಸೋ ದೊಡ್ಡ ಸಮಸ್ಯೆ ಅಂದ್ರೆ ವಿಂಡ್‌ಶೀಲ್ಡ್ ಮೇಲೆ ನೀರು ನಿಲ್ಲೋದು. ಇದರಿಂದ ಮುಂದೆ ರಸ್ತೆ ಸರಿಯಾಗಿ ಕಾಣಿಸದೆ ಕಿರಿಕಿರಿ ಆಗುತ್ತೆ. ಆದ್ರೆ, ಮನೆಯಲ್ಲಿರೋ ಆಲೂಗಡ್ಡೆಯಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಗೊತ್ತಾ?
ಹಸಿ ಆಲೂಗಡ್ಡೆಯನ್ನು ಎರಡಾಗಿ ಕತ್ತರಿಸಿ. ಅದರ ಒಳಭಾಗವನ್ನು ಕಾರಿನ ವಿಂಡ್‌ಶೀಲ್ಡ್‌ಗೆ ಚೆನ್ನಾಗಿ ಉಜ್ಜಿ. ಆಲೂಗಡ್ಡೆಯಲ್ಲಿರುವ ಸ್ಟಾರ್ಚ್ ಗ್ಲಾಸ್ ಮೇಲೆ ತೆಳುವಾದ ಪದರವಾಗಿ ರೂಪುಗೊಳ್ಳುತ್ತದೆ. ಈ ಪದರವು ನೀರು ಹೆಚ್ಚು ಹೊತ್ತು ನಿಲ್ಲದಂತೆ ತಡೆಯುತ್ತದೆ. ಮಳೆನೀರಿನ ಹನಿಗಳು ಗಾಜಿನ ಮೇಲೆ ಸಂಗ್ರಹವಾಗದೆ ಜಾರಿಹೋಗುತ್ತವೆ. ಇದರಿಂದ ಡ್ರೈವಿಂಗ್ ವೇಳೆ ದಾರಿ ಸ್ಪಷ್ಟವಾಗಿ ಕಾಣಿಸುತ್ತದೆ.
ಈ ಟ್ರಿಕ್ 'ಸರ್ಫೇಸ್ ಟೆನ್ಷನ್' (Surface Tension) ಅಥವಾ ಮೇಲ್ಮೈ ಸೆಳೆತದ ತತ್ವದ ಮೇಲೆ ಕೆಲಸ ಮಾಡುತ್ತದೆ. ಸಾಮಾನ್ಯವಾಗಿ, ಮಳೆಹನಿಗಳು ಗ್ಲಾಸ್ ಮೇಲೆ ಬಿದ್ದಾಗ, ಅವು ಒಂದೆಡೆ ಸೇರಿ ನೀರಿನ ಪದರವನ್ನು ರೂಪಿಸುತ್ತವೆ. ಇದರಿಂದ ರಸ್ತೆ ಸ್ಪಷ್ಟವಾಗಿ ಕಾಣಿಸುವುದಿಲ್ಲ. ಆದರೆ, ಗ್ಲಾಸ್ ಮೇಲೆ ಸ್ಟಾರ್ಚ್ ಪದರ ಇದ್ದಾಗ, ನೀರಿನ ಹನಿಗಳು ದೊಡ್ಡದಾಗಿ ಹರಡದೆ ಸಣ್ಣ ಬಿಂದುಗಳಾಗಿ ಉಳಿಯುತ್ತವೆ. ಗಾಳಿಯ ಒತ್ತಡ ಅಥವಾ ವಾಹನದ ಚಲನೆಯಿಂದ ಅವು ಸುಲಭವಾಗಿ ಕೆಳಗೆ ಜಾರಿಹೋಗುತ್ತವೆ.
23
ಈ ಟ್ರಿಕ್ ಬಳಸುವುದು ಹೇಗೆ?
ಮೊದಲು, ಕಾರಿನ ಗ್ಲಾಸ್‌ಗಳನ್ನು ಕ್ಲೀನ್ ಬಟ್ಟೆಯಿಂದ ಒರೆಸಿ. ನಂತರ ಹಸಿ ಆಲೂಗಡ್ಡೆಯನ್ನು ಎರಡು ತುಂಡು ಮಾಡಿ, ಅದರ ಒಳಭಾಗವನ್ನು ವಿಂಡ್‌ಶೀಲ್ಡ್, ಸೈಡ್ ಮಿರರ್ ಮತ್ತು ಹಿಂದಿನ ಗ್ಲಾಸ್‌ಗೆ ನಿಧಾನವಾಗಿ ಉಜ್ಜಿ. ಕೆಲವು ನಿಮಿಷ ಒಣಗಲು ಬಿಡಿ. ನಂತರ, ಮೈಕ್ರೋಫೈಬರ್ ಬಟ್ಟೆಯಿಂದ ನಿಧಾನವಾಗಿ ಒರೆಸಿದರೆ, ಕಲೆಗಳು ಕಾಣಿಸದೆ ಗ್ಲಾಸ್ ಕ್ಲೀನ್ ಆಗಿರುತ್ತದೆ.
33
ಈ ಟ್ರಿಕ್‌ನಿಂದಾಗುವ ಪ್ರಯೋಜನಗಳು
ಇದು ತುಂಬಾ ಕಡಿಮೆ ಖರ್ಚಿನಲ್ಲಿ ಮನೆಯಲ್ಲೇ ಮಾಡಬಹುದಾದ ಸುಲಭ ಉಪಾಯ. ದುಬಾರಿ ಆ್ಯಂಟಿ-ಫಾಗ್ ಸ್ಪ್ರೇ ಅಥವಾ ಕೆಮಿಕಲ್ ಕೋಟಿಂಗ್‌ಗಳ ಅಗತ್ಯವಿಲ್ಲ. ಮಳೆಗಾಲದಲ್ಲಿ ಗ್ಲಾಸ್ ಮೇಲೆ ನೀರು ನಿಲ್ಲುವ ಸಮಸ್ಯೆಯನ್ನು ಇದು ಕಡಿಮೆ ಮಾಡುತ್ತದೆ. ಆದರೆ, ಇದು ಶಾಶ್ವತ ಪರಿಹಾರವಲ್ಲ. ಇದರ ಪರಿಣಾಮ ಸ್ವಲ್ಪ ಸಮಯ ಮಾತ್ರ ಇರುತ್ತದೆ. ಜೋರು ಮಳೆ ಅಥವಾ ಪ್ರತಿಕೂಲ ಹವಾಮಾನದಲ್ಲಿ ವೈಪರ್‌ಗಳನ್ನು ಬಳಸುವುದು ಕಡ್ಡಾಯ. ಸುರಕ್ಷತೆಗಾಗಿ ಕಾರಿನ ಗ್ಲಾಸ್‌ಗಳನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಿ.