ಅಮೆರಿಕದ ಅಧ್ಯಕ್ಷರೊಂದಿಗೆ 40ಕ್ಕೂ ಹೆಚ್ಚು ವಾಹನಗಳ ಸಾಗುತ್ತದೆ. ಅದರಲ್ಲಿ ಪ್ರಸಿದ್ಧ ‘ದಿ ಬೀಸ್ಟ್’ ಕೂಡ ಒಂದು. ಅಮೆರಿಕದ ಅಧ್ಯಕ್ಷರ ಕಾರನ್ನು ಬೀಸ್ಟ್, ಕ್ಯಾಡಿಲಾಕ್ ಒನ್, ಫಸ್ಟ್ ಕಾರ್ ಎಂದೂ ಕರೆಯುತ್ತಾರೆ. ಸಾಮಾನ್ಯವಾಗಿ ಅಧ್ಯಕ್ಷರು ಈ ವಾಹನದಲ್ಲಿಯೇ ಪ್ರಯಾಣಿಸುತ್ತಾರೆ. ಆದರೆ, ಒಂದು ಕುತೂಹಲಕಾರಿ ವಿಷಯವೆಂದರೆ, ಯಾವ ಕಾರಿನಲ್ಲಿ ಅಧ್ಯಕ್ಷರಿದ್ದಾರೆ ಎಂಬುದು ಯಾರಿಗೂ ತಿಳಿಯದಂತೆ ಎರಡು ಒಂದೇ ರೀತಿಯ ‘ಬೀಸ್ಟ್’ ಕಾರುಗಳನ್ನು ಭದ್ರತಾ ಸಿಬ್ಬಂದಿ ಬಳಸುತ್ತಾರೆ.
ಕ್ಯಾಡಿಲಾಕ್ ಕಾರನ್ನು ವಿಶೇಷವಾಗಿ ಮಾರ್ಪಡಿಸಿ ‘ಬೀಸ್ಟ್’ ಕಾರನ್ನು ತಯಾರಿಸಲಾಗಿದೆ. ಇದು ಬಾಂಬ್ ಮತ್ತು ಗುಂಡು ನಿರೋಧಕವಾಗಿದೆ. ಇದರಲ್ಲಿ ಸ್ವಂತ ಪರಿಸರ ವ್ಯವಸ್ಥೆ ಮತ್ತು ಹರ್ಮೆಟಿಕಲ್ ಸೀಲ್ ಇದೆ. 7,000 ಕೆಜಿ (15,400 ಪೌಂಡ್) ತೂಕದ ಈ ವಾಹನದ ಬೆಲೆ ಸುಮಾರು 1.5 ಮಿಲಿಯನ್ ಅಮೆರಿಕನ್ ಡಾಲರ್.