ಕೇವಲ 7.8 ಲಕ್ಷ ರೂಗೆ ಸ್ಕೋಡಾ ಕೈಲಾಖ್ SUV ಕಾರು ಬಿಡುಗಡೆ, ಬುಕಿಂಗ್ ಆರಂಭ!

First Published | Nov 7, 2024, 2:10 PM IST

ಸ್ಕೋಡಾ ಇದೀಗ ಟಾಟಾ ನೆಕ್ಸಾನ್, ಕಿಯಾ ಸೊನೆಟ್ ಸೇರಿದಂತೆ ಸಬ್ ಕಾಂಪಾಕ್ಟ್ ಎಸ್‌ಯುವಿ ಕಾರಿಗೆ ಪ್ರತಿಸ್ಪರ್ಧಿಯಾಗಿ ಸ್ಕೋಡಾ ಕೈಲಾಖ್ ಕಾರು ಬಿಡುಗಡೆ ಮಾಡಿದೆ. ಇದರ ಬೆಲೆ 7.8 ಲಕ್ಷ ರೂಪಾಯಿ.

ಸ್ಕೋಡಾ ಉತ್ತಮ ಕಾರುಗಳಿಗೆ ಹೆಸರುವಾಸಿ. ಎಂಜಿನ ಪರ್ಫಾಮೆನ್ಸ್, ಸುರಕ್ಷತೆ, ಡಿಸೈನ್, ಡ್ರೈವಿಂಗ್, ಪ್ರಯಾಣ ಹೀಗೆ ಎಲ್ಲದ್ದಕ್ಕೂ ಸ್ಕೋಡಾ ಕಾರುಗಳು ಜನಪ್ರಿಯವಾಗಿದೆ. ಭಾರತದಲ್ಲಿ ಸ್ಕೋಡಾ ಕಾರುಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೀಗ ಸ್ಕೋಡಾ ಇಂಡಿಯಾ ಕೈಗೆಟುಕುವ ದರದಲ್ಲಿ ಹೊಚ್ಚ ಹೊಸ ಕೈಲಾಖ್ ಕಾರು ಬಿಡುಗಡೆ ಮಾಡಿದೆ. ಈ ಕಾರಿನ ಬೆಲೆ 7.8 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
 

ಟಾಟಾ ನೆಕ್ಸಾನ್, ಕಿಯಾ ಸೊನೆಟ್, ಮಾರುತಿ ಬ್ರಿಜ್ಜಾ, ಹ್ಯುಂಡೈ ವೆನ್ಯೂ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಸ್ಕೋಡಾ ಕೈಲಾಖ್ ಕಾರು ಬಿಡುಗಡೆಯಾಗಿದೆ. ಅತ್ಯಾಕರ್ಷಕ ವಿನ್ಯಾಸ, ಎಂಜಿನ್, ಆರಾಮಾದಾಯಕ ಪ್ರಯಾಣ ಸೇರಿದಂತೆ ಹಲವು ಅನುಕೂಲತೆಗಳು ಈ ಕಾರಿನಲ್ಲಿದೆ. ಹೊಚ್ಚ ಹೊಸ ಸ್ಕೋಡಾ ಕೈಲಾಖ್ ಕಾರಿನ ಬುಕಿಂಗ್ ಆರಂಭಗೊಂಡಿದೆ. ಅಧಿಕೃತ ವೆಬ್‌ಸೈಟ್ ಅಥವಾ ಡೀಲರ್ ಬಳಿ ಕಾರು ಬುಕಿಂಗ್ ಮಾಡಿಕೊಳ್ಳಬಹುದು.
 

Tap to resize

ಸ್ಕೋಡಾ ಕೈಲಾಖ್ ಕಾರು 1.0 ಲೀಟರ್, 3 ಸಿಲಿಂಡರ್ ಸ್ಕೋಡಾ TSI ಪೆಟ್ರೋಲ್ ಎಂಜಿನ್ ಹೊಂದಿದೆ. 115 ಹೆಚ್‌ಪಿ ಪವರ್ ಹಾಗೂ 178 ಎನ್‌ಎಂ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಹೀಗಾಗಿ ಸ್ಕೋಡಾ ಕೈಲಾಖ್ ಕಾರು ಉತ್ತಮ ಪರ್ಫಾಮೆನ್ಸ್ ನೀಡಲಿದೆ. ಇನ್ನು ಮಾನ್ಯುಯೆಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಆಯ್ಕೆ ಲಭ್ಯವಿದೆ.  
 

ಕೈಲಾಖ್  3,995 mm ಉದ್ದ, 1,783mm ಅಗಲ, 1619mm ಎತ್ತರ ಹೊಂದಿದೆ. ವ್ಹೀಲ್‌ಬೇಸ್ 2566 mm. ಹೀಗಾಗಿ ಕಾರಿನಲ್ಲಿ ಹೆಚ್ಚು ಸ್ಥಳವಕಾಶವಿದೆ.  ಬೂಟ್ ಸ್ಪೇಸ್ 446 ಲೀಟರ್, ಇದನ್ನು ವಿಸ್ತರಣೆ ಮಾಡಲು ಸಾಧ್ಯವಿದೆ. ರೇರ್ ಸೀಟ್ ಮಡಚಿದರೆ ಬೂಟ್ ಸ್ಪೇಸ್ 1265 ಲೀಟರ್‌ಗೆ ಹೆಚ್ಚಾಗಲಿದೆ.

LED ಹೆಡ್‌ಲ್ಯಾಂಪ್ಸ್, LED DRLs ಹೊಂದಿದೆ. ಇನ್ನು ಮುಂಭಾಗದ ಸ್ಕೋಡಾ ಗ್ರಿಲ್‌ನಲ್ಲಿ ಕೊಂಚ ಬದಲಾವಣೆ ಮಾಡಿ ಮತ್ತಷ್ಟು ಸ್ಪೋರ್ಟೀವ್ ಲುಕ್ ತರಲಾಗಿದೆ. ಗ್ಲಾಸಿ ಬ್ಲಾಕ್ ರಿಬ್ಬಡ್ ಗ್ರಿಲ್ ಬಳಸಲಾಗಿದೆ. 17 ಇಂಚಿನ ಅಲೋಯ್ ವ್ಹೀಲ್ ಹೊಂದಿದೆ. ಇನ್ನು ಎಲ್‌ಇಡಿ ಟೈಲ್ ಲ್ಯಾಂಪ್ ಹೊಂದಿದೆ. ಇದರ ಜೊತೆಗೆ ಸ್ಕೋಡ ಕಾರುಗಳ ಸಾಮಾನ್ಯ ಬಣ್ಣಗಳ ಜೊತೆಗೆ ಆಲೀವ್ ಗೋಲ್ಡ್ ಕಲರ್ ಪರಿಚಯಿಸಿದೆ.
 

10.1 ಇಂಚಿನ ಟಚ್‌ಸ್ಕ್ರೀನ್, 8 ಇಂಚಿನ ಡಿಜಿಟಲ್ MID, 6 ವೇ ಪವರ್ ಎಡ್ಜಸ್ಟೇಬಲ್ ಸೀಟ್, ವೈಯರ್‌ಲೆಸ್ ಚಾರ್ಜರ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, 6 ಏರ್‌ಬ್ಯಾಗ್, ಬ್ರೇಕ್ ಡಿಸ್ಕ್ ವೈಪಿಂಗ್, ಟ್ರಾಕ್ಷನ್ ಕಂಟ್ರೋಲ್, ESC, ಎಬಿಎಸ್ ಸೇರಿದಂತೆ ಹಲವು ಸುರಕ್ಷತಾ ಫೀಚರ್ಸ್ ಈ ಕಾರಿನಲ್ಲಿದೆ. ಬೇಸ್ ಮಾಡೆಲ್ ಬೆಲೆ 7.8 ಲಕ್ಷ ರೂಪಾಯಿಂದ ಆರಂಭಗೊಳ್ಳುತ್ತಿದೆ. ಟಾಪ್ ವೇರಿಯೆಂಟ್ ಬೆಲೆ ಡಿಸೆಂಬರ್‌ನಲ್ಲಿ ಪ್ರಕಟಗೊಳ್ಳಲಿದೆ. 
 

Latest Videos

click me!