ಮಾರುತಿ ಸುಜುಕಿ ಸ್ವಿಫ್ಟ್
ಮಾರುತಿ ಸುಜುಕಿ ದೀರ್ಘಕಾಲದಿಂದ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿದೆ. ಹಾಗಾಗಿ, ಮಾರುತಿ ಸುಜುಕಿ ತನ್ನ ಜನಪ್ರಿಯ ಕಾರು ಸ್ವಿಫ್ಟ್‌ನ ಹೊಸ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮುಂದಾಗಿದೆ. ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಕಾರಿನ ವೈಶಿಷ್ಟ್ಯಗಳು ಮತ್ತು ಬೆಲೆಯ ಬಗ್ಗೆ ತಿಳಿದುಕೊಳ್ಳೋಣ.
ಸ್ವಿಫ್ಟ್ ಕಾರಿನ ವೈಶಿಷ್ಟ್ಯಗಳು
ಮಾರುತಿ ಸುಜುಕಿ ಸ್ವಿಫ್ಟ್‌ನ ಸ್ಟ್ಯಾಂಡರ್ಡ್ ವೈಶಿಷ್ಟ್ಯಗಳು
360 ಡಿಗ್ರಿ ಕ್ಯಾಮೆರಾ, ರಿವರ್ಸ್ ಕ್ಯಾಮೆರಾ, ಪವರ್ ಸ್ಟೀರಿಂಗ್, ಡಿಜಿಟಲ್ ಸ್ಪೀಡೋಮೀಟರ್, ಓಡೋಮೀಟರ್, ಟ್ಯಾಕೋಮೀಟರ್ ಮತ್ತು 10.25 ಇಂಚಿನ ಟಚ್ ಸ್ಕ್ರೀನ್ ಡಿಸ್ಪ್ಲೇ ಇದೆ. ಇದರೊಂದಿಗೆ, ಟ್ಯೂಬ್‌ಲೆಸ್ ಟೈರ್, 19 ಇಂಚಿನ ಮೆಟಲ್ ಅಲಾಯ್ ವೀಲ್, ಟಚ್ ಸ್ಕ್ರೀನ್ ಡಿಸ್ಪ್ಲೇ, ಬ್ಲೂಟೂತ್ ಕನೆಕ್ಟಿವಿಟಿ, GPS ಸಿಸ್ಟಮ್, ಇಂಟರ್ನೆಟ್ ಕನೆಕ್ಟಿವಿಟಿ, ಸ್ಲೀಕ್ ಬಾಡಿ, ಡ್ಯಾಶಿಂಗ್ ಲುಕ್, ಫಾಗ್ ಲೈಟ್, LED ಲೈಟ್ ಲ್ಯಾಂಪ್ ಇತ್ಯಾದಿ ವೈಶಿಷ್ಟ್ಯಗಳಿವೆ.
ಸ್ವಿಫ್ಟ್ ಕಾರಿನ ಎಂಜಿನ್
ಮಾರುತಿ ಸುಜುಕಿ ಸ್ವಿಫ್ಟ್‌ನ ಪವರ್‌ಫುಲ್ ಎಂಜಿನ್
ಉತ್ತಮ ಎಂಜಿನ್ ಕಾರ್ಯಕ್ಷಮತೆಗಾಗಿ, ಈ ಮಾರುತಿ ಸುಜುಕಿ ಸ್ವಿಫ್ಟ್ ಕಾರಿನಲ್ಲಿ ಹೈಬ್ರಿಡ್ ತಂತ್ರಜ್ಞಾನದೊಂದಿಗೆ 1.2 ಲೀಟರ್ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್ ಇದೆ. ಇದು 81 bhp ಪವರ್ ಮತ್ತು 107 Nm ಟಾರ್ಕ್ ಉತ್ಪಾದಿಸುತ್ತದೆ.
ಸ್ವಿಫ್ಟ್ ಕಾರಿನ ಮೈಲೇಜ್
ಮೈಲೇಜ್
ಹೊಸ ಮಾರುತಿ ಸುಜುಕಿ ಸ್ವಿಫ್ಟ್‌ನಲ್ಲಿ ಹೈಬ್ರಿಡ್ ತಂತ್ರಜ್ಞಾನವನ್ನು ಬಳಸಲಾಗಿದೆ, ಇದರ ಸಹಾಯದಿಂದ ಈ ಕಾರು 35 ರಿಂದ 40 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಹೈಬ್ರಿಡ್ ಕಾರಾಗಿರುವ ಕಾರಣ ಮಾಲಿನ್ಯದ ಪ್ರಮಾಣವೂ ತಗ್ಗಲಿದೆ. ಇದೀಗ ಪೆಟ್ರೋಲ್ ಬೆಲೆ ದುಬಾರಿಯಾಗಿರುವ ಕಾರಣ ಹೊಸ ಆವೃತ್ತಿ ಮಾರುತಿ ಸ್ವಿಫ್ಟ್ ಕಾರು ಅತೀ ಕಡಿಮೆ ನಿರ್ವಹಣೆ ವೆಚ್ಚ ನೀಡಲಿದೆ.
ಸ್ವಿಫ್ಟ್ ಕಾರಿನ ಬೆಲೆ
ಬೆಲೆ
ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಕಾರಿನ ಬೆಲೆಯನ್ನು ಕಂಪನಿ ಇನ್ನೂ ಬಹಿರಂಗಪಡಿಸಿಲ್ಲ, ಆದರೆ ವರದಿಗಳ ಪ್ರಕಾರ, ಕಂಪನಿಯು ಈ ಕಾರನ್ನು ಮಾರುಕಟ್ಟೆಯಲ್ಲಿ 6 ಲಕ್ಷ ರೂ. (ಎಕ್ಸ್-ಶೋ ರೂಂ) ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಬೇಸ್ ಮಾಡೆಲ್ ಬೆಲೆಯನ್ನು 6 ಲಕ್ಷ ರೂಪಾಯಿಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಇದು ಹೊಸ ಸ್ವಿಫ್ಟ್ ಕಾರಿನ ಬೇಡಿಕೆ ಮತ್ತಷ್ಟು ಹೆಚ್ಚಿಸುವುದು ಸುಳ್ಳಲ್ಲ.