ಆಕಾಶ್, ಶ್ಲೋಕಾ ಈಗ ಆಂಟಿಲಿಯಾ ಅನ್ನೋ ಐಷಾರಾಮಿ ಮನೆಯಲ್ಲಿ ಫ್ಯಾಮಿಲಿ ಜೊತೆ ಇದ್ದಾರೆ. 27 ಮಹಡಿ, ಮೂರು ಹೆಲಿಪ್ಯಾಡ್, ಒಂಬತ್ತು ಲಿಫ್ಟ್, 50 ಸೀಟಿನ ಥಿಯೇಟರ್, 168 ಕಾರುಗಳ ಪಾರ್ಕಿಂಗ್ ಇರೋ ಭಾರತದ ಅತಿ ದೊಡ್ಡ ಪ್ರೈವೇಟ್ ಮನೆ ಇದು. ಇದ್ರಲ್ಲಿ ಟೆರೇಸ್ ಗಾರ್ಡನ್, ಸ್ವಿಮ್ಮಿಂಗ್ ಪೂಲ್, ಸ್ಪಾ, ಹೆಲ್ತ್ ಸೆಂಟರ್ ರೀತಿಯ ಅನೇಕ ಫೆಸಿಲಿಟಿಗಳಿವೆ. ಐಸ್ ರೂಮ್ ಕೂಡ ಇದೆ. ವಿಶ್ವದ ಅತಿ ಐಷಾರಾಮಿ ಮನೆಗಳಲ್ಲಿ ಒಂದಾಗಿರೋ ಈ ಮನೆ ಬೆಲೆ 15,000 ಕೋಟಿ ರೂ.