ಭಾರತದಲ್ಲಿ ಮಹೀಂದ್ರ ಕಾರುಗಳಿಗೆ ಭಾರಿ ಬೇಡಿಕೆ ಇದೆ. ಅದರಲ್ಲೂ ಥಾರ್, xuv700 ಸೇರಿದಂತೆ ಎಲ್ಲಾ ಮಹೀಂದ್ರ ವಾಹನಗಳು ಹಾಟ್ ಕೇಕ್‌ನಂತ ಸೇಲಾಗುತ್ತಿದೆ. ಇದಕ್ಕೆ ಹೊಚ್ಚ ಹೊಸ ಮಹೀಂದ್ರ ಥಾರ್ ರಾಕ್ಸ್ ಸೇರಿಕೊಂಡಿದೆ.
5 ಡೋರ್ ಮಹೀಂದ್ರ ಥಾರ್ ರಾಕ್ಸ್ ಕಾರು ಬಿಡುಗಡೆಯಾಗಿದೆ. ಇದರ ಬೆಲೆ 12.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದೆ. ಪೆಟ್ರೋಲ್ ಡೀಸೆಲ್ ವೇರಿಯೆಂಟ್ ಜೊತೆಗೆ ಮ್ಯಾನ್ಯುಯೆಲ್ ಹಾಗೂ ಆಟೋಮ್ಯಾಟಿಕ್ ಆಯ್ಕೆ ಲಭ್ಯವಿದೆ.
MX1 RWD ಪೆಟ್ರೋಲ್ ಬೇಸ್ ಮಾಡೆಲ್ ಬೆಲೆ 12.99 ಲಕ್ಷ ರೂ(ಎಕ್ಸ್ ಶೋ ರೂಂ)ಆರಂಭಗೊಳ್ಳುತ್ತಿದೆ. ಪೆಟ್ರೋಲ್ ವೇರಿಯೆಂಟ್‌ನಲ್ಲಿ ಟಾಪ್ ಮಾಡೆಲ್ AX7L RWD ಬೆಲೆ 19.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಡೀಸೆಲ್ ಮಾಡೆಲ್ ರಾಕ್ಸ್ ಕಾರಿನ ಬೆಲೆ 13.99 ಲಕ್ಷ ರೂಪಾಯಿ(ಎಕ್ಸ್ ಶೂ ರೂಂ) ಆರಂಭಗೊಳ್ಳುತ್ತಿದೆ ಟಾಪ್ ಮಾಡೆಲ್ AX7L RWD ಬೆಲೆ 20.49 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಈಗಾಗಲೇ ಬಿಡುಗಡೆಯಾಗಿರುವ ಥಾರ್ ರಾಕ್ಸ್ ಕಾರು ಸೆಪ್ಟೆಂಬರ್ 13ರಿಂದ ಟೆಸ್ಟ್ ಡ್ರೈವ್‌ಗೆ ಲಭ್ಯವಿದೆ. ಅಕ್ಟೋಬರ್ 3 ರಿಂದ ಬುಕಿಂಗ್ ಆರಂಭಗೊಳ್ಳಲಿದೆ. ಬುಕ್ ಮಾಡುವ ಗ್ರಾಹಕರಿಗೆ ದಸರಾ ಹಬ್ಬದ ವೇಳೆ ಕಾರು ಡೆಲಿವರಿ ಆಗಲಿದೆ.
ಈ ಹಿಂದಿನ ಥಾರ್ 3 ಡೋರ್ ಹೊಂದಿತ್ತು. ಈ ವೇಳೆ ಬಹುತೇಕ ಗ್ರಾಹಕರು 5 ಡೋರ್ ಥಾರ್ ಆಗ್ರಹಿಸಿದ್ದರು. ಇದೀಗ ರಾಕ್ಸ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಎಲ್ಇಡಿ ಲೈಟ್ಸ್, 10.25 ಇಂಚಿನ ಇನ್ಫೊಟೈನ್ಮೆಂಟ್ ಸಿಸ್ಟಮ್, 10.25 ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೆ ಹೊಂದಿದೆ.
19 ಇಂಚಿನ ಡ್ಯುಯೆಲ್ ಟೋನ್ ಅಲೋಯ್ ವೀಲ್ ಬಳಸಲಾಗಿದೆ. ಮುಂಭಾಗದಲ್ಲಿ 6 ಸ್ಲಾಟ್ ಗ್ರಿಲ್ ಅಳವಡಿಸಲಾಗಿದೆ. ಸಿಲ್ವರ್ ಫಿನೀಶ್ ಬಂಪರ್, ಸಿ ಶೇಪ್ ಡಿಆರ್‌ಎಲ್ ಹೊಂದಿದೆ.
ಕಪ್ಪು ಬಣ್ಣದ ಡ್ಯಾಶ್‌ಬೋರ್ಡ್, ಲೆಥರ್ ಪ್ಯಾಡಿಂಗ್ ಕಾಪರ್ ಸ್ಟಿಚಿಂಗ್ ಸೀಟ್ ಹೊಂದಿದೆ. ಪೆಟ್ರೋಲ್ ಹಾಗೂ ಡೀಸೆಲ್ 1.5 ಲೀಟರ್ ಎಂಜಿನ್ ಹೊಂದಿದೆ.