ಟಾಟಾ ನೆಕ್ಸಾನ್ ಅತೀ ಹೆಚ್ಚು ಮಾರಾಟವಾಗುತ್ತಿರುವ ಎಸ್‌ಯುವಿ ಕಾರು. ಅತ್ಯಾಧುನಿಕ ಫೀಚರ್ಸ್, ಮೈಲೇಜ್, ಆಕರ್ಷಕ ನೋಟ, ಗರಿಷ್ಠ ಸುರಕ್ಷತೆ ಸೇರದಂತೆ ಹಲವು ಕಾರಣಗಳಿಂದ ಟಾಟಾ ನೆಕ್ಸಾನ್ ಹಲವರ ನೆಚ್ಚಿನ ಕಾರಾಗಿದೆ. ಟಾಟಾ ಮೋಟಾರ್ಸ್‌ನ ಡೀಸೆಲ್ ನೆಕ್ಸಾನ್ ಎಕ್ಸ್ ಶೋ ರೂಂ ಬೆಲೆ ₹10 ಲಕ್ಷ ರೂಪಾಯಿ. ಡೆಲ್ಲಿಯಲ್ಲಿ RTO ₹83,000, ವಿಮೆ ₹43,000. ಆನ್-ರೋಡ್ ಬೆಲೆ ₹11.25 ಲಕ್ಷ. ಕರ್ನಾಟಕದಲ್ಲಿ ತೆರಿಗೆ ಪಾವತಿ ಇತರ ರಾಜ್ಯಕ್ಕಿಂತ ಕೊಂಚ ಹೆಚ್ಚಿದೆ. ಆಯಾ ರಾಜ್ಯದಲ್ಲಿ ಆರ್‌ಟಿಒ ಸೇರಿದಂತೆ ಇತರ ಶುಲ್ಕ ವ್ಯತ್ಯಾಸವಾಗಲಿದೆ.