ದಿನಕ್ಕೆ 1 ಕೋಟಿ ಗಳಿಸುವ ಡೆಲಿವರಿ ಬಾಯ್‌ಗೆ ವೇತನವಿಲ್ಲ, ಆದ್ರೂ 700 ಕೋಟಿ ರೂ ದಾನ ಮಾಡಿದ!

First Published | Sep 28, 2023, 10:45 AM IST

ಇವರು ದಿನಕ್ಕೆ 1 ಕೋಟಿ ರೂ ಗಳಿಸುತ್ತಿದ್ದರೂ ಸ್ವತಃ ಡೆಲಿವರಿ ಬಾಯ್‌ ಎಂದು ಹೇಳಿಕೊಳ್ಳುತ್ತಾರೆ.   ಸಾಂಕ್ರಾಮಿಕ ಸಮಯದಲ್ಲಿ ಇವರು  700 ಕೋಟಿ ರೂ ಮೌಲ್ಯದ ಷೇರುಗಳನ್ನು ದಾನ ಮಾಡಿ ಸುದ್ದಿಯಾಗಿದ್ದರು. 2023ರಲ್ಲಿ ಅವರ ನಿವ್ವಳ ಮೌಲ್ಯ 3,691 ಕೋಟಿ ರೂ ದಾಟಿದೆ.

ದೀಪಿಂದರ್ ಗೋಯಲ್ ಝೊಮ್ಯಾಟೋ ಸಂಸ್ಥಾಪಕ ಮತ್ತು ಸಿಇಒ. ಯಶಸ್ಸನ್ನು ಸಾಧಿಸುವ ಸಲುವಾಗಿ ಅವರು ತಮ್ಮ ಜೀವನದಲ್ಲಿ ಅನೇಕ ವೈಯಕ್ತಿಕ ಮತ್ತು ವೃತ್ತಿಪರ ಅಡೆತಡೆಗಳನ್ನು ನಿವಾರಿಸಿದ ಕಥೆಯು ತುಂಬಾ ಸ್ಪೂರ್ತಿದಾಯಕವಾಗಿದೆ.  ಅವರು ಇದುವರೆಗೆ ಚೆಫ್‌ಕಾರ್ಟ್ ಮತ್ತು ಅನಾಕಾಡೆಮಿ ಸೇರಿದಂತೆ 16 ಸ್ಟಾರ್ಟಪ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅವರ ನಿವ್ವಳ ಮೌಲ್ಯವು 2023ರಲ್ಲಿ 3,691 ಕೋಟಿ ರೂ ದಾಟಿದೆ.

ಸಾಂಕ್ರಾಮಿಕ ಕೋವಿಡ್‌ ಸಮಯದಲ್ಲಿ ದೀಪಿಂದರ್ ಗೋಯಲ್ ಅವರು ತಮ್ಮ ವಿತರಣಾ ಪಾಲುದಾರರ ಶಿಕ್ಷಣಕ್ಕಾಗಿ 700 ಕೋಟಿ ರೂಪಾಯಿ ಮೌಲ್ಯದ ಸ್ಟಾಕ್‌ಗಳನ್ನು ದಾನ  ಮಾಡಿದರು. ಅವರು ಪಂಜಾಬ್‌ನ ಮುಕ್ತಸರ್ ಜಿಲ್ಲೆಯಲ್ಲಿ ಜನಿಸಿದರು. ತರಗತಿಯಲ್ಲಿ ಸಾಮಾನ್ಯ ವಿದ್ಯಾರ್ಥಿಯಾಗಿದ್ದು, ಕಡಿಮೆ ಅಂಕಗಳನ್ನು ತೆಗೆದುಕೊಳ್ಳುತ್ತಿದ್ದರು. 8 ನೇ ತರಗತಿಯಲ್ಲಿ ಪರೀಕ್ಷೆಯ ಮೇಲ್ವಿಚಾರಕರು ಅವರಿಗೆ ಸಹಾಯ ಮಾಡಲು ನಿರ್ಧರಿಸಿದರು. ಅವರು ಅನುತ್ತೀರ್ಣರಾಗುತ್ತಿದ್ದರು ಆದರೆ ಆಶ್ಚರ್ಯ ಎಂಬಂತೆ 3 ನೇ ರ್ಯಾಂಕ್ ಪಡೆದರು. ಇದು ಅವರ ಬದುಕಿನ ಮಹತ್ವದ ತಿರುವು, ಈ ಘಟನೆ ಅವರ ಬದುಕನ್ನೇ ಬದಲಿಸಿತು.

Tap to resize

ಅದರ ನಂತರ, ಅವರು ಶಾಲೆಯಲ್ಲಿ ರ್ಯಾಂಕ್ ಹೋಲ್ಡರ್‌ಗಳಲ್ಲಿ ಒಬ್ಬರಾದರು. ಐಐಟಿಯಲ್ಲಿ ಕಲಿಯಲಿ ಎಂದು ಅವರ ಕುಟುಂಬದವರು ಚಂಡೀಗಢಕ್ಕೆ ಕಳುಹಿಸಿದರು. ಅಲ್ಲೂ ಅವರು ಬುದ್ಧಿವಂತ ವಿದ್ಯಾರ್ಥಿಗಳ ನಡುವೆ ಇರಲು ಸಿದ್ಧರಿರಲಿಲ್ಲ. ಹೀಗಾಗಿ ಮನೆಗೆ ಮರಳಿದರು. ಬಳಿಕ ಐಐಟಿ ದೆಹಲಿಯಲ್ಲಿ ಶಿಕ್ಷಣ ಮುಗಿಸಿದರು.

ದೀಪಿಂದರ್ ಗೋಯಲ್ ಜನ ಸಮಾನ್ಯರಂತೆ ಇರಲು ಬಯಸುತ್ತಾರೆ. ಯಾವಾಗಲೂ ಸಿಂಪಲ್ ಆಗಿಯೇ ಇರುತ್ತಾರೆ. ಅವರು ಜೀವನದಲ್ಲಿ ಒಂದು ದೊಡ್ಡ ವೈಯಕ್ತಿಕ ಸವಾಲನ್ನು ಸಹ ಹೊಂದಿದ್ದಾರೆ ಅದುವೇ ತೊದಲುವಿಕೆ (stuttering). ನಾನು ಇನ್ನೂ ಕೆಲವು ಪದಗಳನ್ನು ಉಚ್ಚಾರ ಮಾಡಲು ಹೋರಾಡುತ್ತಿದ್ದೇನೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.

2021 ರಲ್ಲಿ Zomato ಪಟ್ಟಿ ಮಾಡಿದ ನಂತರ ಗೋಯಲ್ ಅವರ ನಿವ್ವಳ ಮೌಲ್ಯವು 650 ಮಿಲಿಯನ್ ಡಾಲರ್‌ಗಳಿಗೆ (Rs 5345 ಕೋಟಿ) ಏರಿತು. ಆ ಸಮಯದಲ್ಲಿ, ಅವರು Zomato ನಲ್ಲಿ 4.7 ಶೇಕಡಾ ಪಾಲನ್ನು ಹೊಂದಿದ್ದರು. 2023ಕ್ಕೆ ಅವರ  ನಿವ್ವಳ ಮೌಲ್ಯ ಇಳಿತ ಕಂಡಿದೆ. ಅವರು ಸದ್ಯಕ್ಕೆ ಕಂಪನಿಯಿಂದ ಸಂಬಳ ಸ್ವೀಕರಿಸುತ್ತಿಲ್ಲ. ಆದರೆ, ಅವರು 358 ಕೋಟಿ ರೂ.ಗಳನ್ನು ಇಎಸ್‌ಒಪಿಯಾಗಿ ಸ್ವೀಕರಿಸಿದ್ದಾರೆ. 

INC 42 ರ ಪ್ರಕಾರ, FY 22 ರ ಪ್ರಾರಂಭದಿಂದ ಗೋಯಲ್ 1111.5 ಕೋಟಿ ಮೌಲ್ಯದ ESOP ಗಳನ್ನು ಸ್ವೀಕರಿಸಿದ್ದಾರೆ. ಇದು ದಿನಕ್ಕೆ ಸುಮಾರು 1.5 ಕೋಟಿ ರೂ.  ಕಂಪನಿಯ ಮಾರುಕಟ್ಟೆ ಮೌಲ್ಯ 66,874 ಕೋಟಿ ರೂ. ಇದಲ್ಲದೆ ಸಾಮಾಜಿಕ ಜಾಲತಾಣದಲ್ಲಿ ತಾನು ಡೆಲಿವರಿ ಬಾಯ್ ಎಂದೇ ಬರೆದುಕೊಂಡಿದ್ದಾರೆ. ಕಂಪನಿಯನ್ನು ಉತ್ತೇಜಿಸುವ ಸಲುವಾಗಿ  ಆಗಾಗ ದೀಪೇಂದರ್ ತಾವೇ ಆಹಾರವನ್ನು ಗ್ರಾಹಕರಿಗೆ ತಲುಪಿಸುತ್ತಾರೆ.

Latest Videos

click me!