ವಿಶ್ವದ ಅಲ್ಟ್ರಾ ರಿಚ್ ಉದ್ಯಮಿಗಳ ಪಟ್ಟಿ ಬಹಿರಂಗ, ಅಂಬಾನಿ-ಅದಾನಿಗೆ ಎಷ್ಟನೇ ಸ್ಥಾನ?

Published : Feb 27, 2025, 07:16 PM ISTUpdated : Feb 27, 2025, 07:45 PM IST

ವಿಶ್ವದದ ಅಲ್ಟ್ರಾ ರಿಚ್ ಅಥವಾ ಸೂಪರ್ ಬಿಲೇನಿಯರ್ ಪಟ್ಟಿ ಬಿಡುಗಡೆಯಾಗಿದೆ. ಅಂದರೆ ಊಹೆಗೂ ನಿಲಕದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಯಾರಿಗೆ? ಪಟ್ಟಿಯಲ್ಲಿ ಭಾರತದ ಮುಕೇಶ್ ಅಂಬಾನಿ ಹಾಗೂ ಗೌತಮ್ ಅದಾನಿ ಕೂಡ ಸ್ಥಾನ ಪಡೆದಿದ್ದಾರೆ.

PREV
17
ವಿಶ್ವದ ಅಲ್ಟ್ರಾ ರಿಚ್ ಉದ್ಯಮಿಗಳ ಪಟ್ಟಿ ಬಹಿರಂಗ, ಅಂಬಾನಿ-ಅದಾನಿಗೆ ಎಷ್ಟನೇ ಸ್ಥಾನ?

ವಾಲ್ ಸ್ಟ್ರೀಟ್ ಜರ್ನಲ್(WSJ) ಹೊಸ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದೆ. ಇದು ಅಲ್ಟ್ರಾ ರಿಚ್ ಪಟ್ಟಿ.ಕೇವಲ ಶ್ರೀಮಂತ ಆಗಿದ್ದರೆ ಸಾಲದು,  ಸೂಪರ್ ಬಿಲೇನಿಯರ್ ಆಗಿರಬೇಕು. ಅಂದರೆ ಕನಿಷ್ಠ 50 ಬಿಲಿಯನ್ ಅಮೆರಿಕನ್ ಡಾಲರ್ ಆಸ್ತಿ ಹೊಂದಿರಬೇಕು. ವಿಶ್ವದ 24 ಅತೀ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.  ಇದರಲ್ಲೂ ಸೆಂಟಿ ಬಿಲೇನಿಯರ್ ಹಾಗೂ ಸೂಪರ್ ಬಿಲೇನಿಯರ್ ಎಂದು ಎರಡು ವಿಭಾಗ ಮಾಡಲಾಗಿದೆ.

27

ಸೂಪರ್ ಬಿಲೇನಿಯರ್ ಅಥವಾ 50 ಬಿಲಿಯನ್ ಅಮೆರಿಕನ್ ಡಾಲರ್‌ಗಿಂತ ಮೇಲ್ಪಟ್ಟ ಆಸ್ತಿ ಹೊಂದಿದ ಶ್ರೀಮಂತರ ಪಟ್ಟಿಯಲ್ಲಿ ಉದ್ಯಮಿ ಎಲಾನ್ ಮಸ್ಕ್‌‌ ಮೊದಲ ಸ್ಥಾನದಲ್ಲಿದ್ದಾರೆ. ಎಲಾನ್ ಮಸ್ಕ್ ಒಟ್ಟು ಆಸ್ತಿ ಬರೋಬ್ಬರಿ 419.4 ಬಿಲಿಯನ್ ಅಮೆರಿಕನ್ ಡಾಲರ್. ಎಲಾನ್ ಮಸ್ಕ್ ಸೆಂಟಿ ಬಿಲಿನಿಯರ್ ಎಂದು ಗುರುತಿಸಲಾಗಿದೆ.ಕಾರಣ 100 ಬಿಲಿಯನ್ ಅಮೆರಿಕನ್ ಡಾಲರ್‌ಗಿಂತ ಹೆಚ್ಚಿನ ಆಸ್ತಿ ಅಲಾನ್ ಮಸ್ಕ್ ಬಳಿ ಇದೆ.

37

ವಿಶ್ವದ 24 ಸೂಪರ್ ಬಿಲಿನೇಯರ್ ಪಟ್ಟಿಯಲ್ಲಿ ಎಲಾನ್ ಮಸ್ಕ್ ಮೊದಲ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ಮುಕೇಶ್ ಅಂಬಾನಿ ಹಾಗೂ ಗೌತಮ್ ಅದಾನಿ ಕೂಡ ಸ್ಥಾನ ಪಡೆದಿದ್ದಾರೆ. ಇಷ್ಟೇ ಅಲ್ಲ ಭಾರತದಿಂದ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಕೇವಲ ಇಬ್ಬರು ಮಾತ್ರ. ಇವರೇ ಅಂಬಾನಿ ಹಾಗೂ ಅದಾನಿ.

47

ರಿಲಯನ್ಸ್ ಇಂಡಸ್ಟ್ರಿ, ಜಿಯೋ ಸೇರಿದಂತೆ ದೇಶ ವಿದೇಶಗಳಲ್ಲಿ ಸಾಮ್ರಾಜ್ಯ ಕಟ್ಟಿರುವ ಮುಕೇಶ್ ಅಂಬಾನಿ ಈ ಸೂಪರ್ ಬಿಲೇನಿಯರ್ ಪಟ್ಟಿಯಲ್ಲಿ 17 ಸ್ಥಾನ ಪಡೆದಿದ್ದಾರೆ. ಅಂಬಾನಿ ಆಸ್ತಿ ಮೌಲ್ಯ 90.6 ಬಿಲಿಯನ್ ಅಮೆರಿಕನ್ ಡಾಲರ್. ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್ ಅಂಬಾನಿ ಮೊದಲ ಸ್ಥಾನದಲ್ಲಿದ್ದಾರೆ.

57

ಸೂಪರ್ ಬಿಲೇನಿಯರ್ ಪಟ್ಟಿಯಲ್ಲಿ ಉದ್ಯಮಿ ಗೌತಮ್ ಅದಾನಿ 21ನೇ ಸ್ಥಾನ ಪಡೆದಿದ್ದಾರೆ. ಅದಾನಿ ಗ್ರೂಪ್ ಮೂಲಕ ಎನರ್ಜಿ, ಪೋರ್ಟ್, ಏರ್‌ಪೋರ್ಟ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಗೌತಮ್ ಅದಾನಿ, ಒಟ್ಟು ಆಸ್ತಿ 60.6 ಬಿಲಿಯನ್ ಅಮೆರಿಕನ್ ಡಾಲರ್. ಭಾರತದ ಶ್ರೀಮಂತ ಉದ್ಯಮಿ ಹಾಗೂ ಪ್ರಭಾವಿಯಾಗಿ ಗುರುತಿಸಿಕೊಂಡಿದ್ದಾರೆ.

67

ಸೂಪರ್ ಬಿಲೇನಿಯರ್ ಪಟ್ಟಿಯಲ್ಲಿ  ಅಮೆಜಾನ್ ಸಂಸ್ಥಾಪಕ ಜೆಫ್ ಬೇಜೋಸ್ 2ನೇ ಸ್ಥಾನ ಪಡೆದಿದ್ದಾರೆ. ಜೆಫ್ ಆಸ್ತಿ 263.8 ಬಿಲಿಯನ್ ಅಮೆರಿಕನ್ ಡಾಲರ್. LVMH ಕಂಪನಿ ಮಖ್ಯಸ್ಥ ಬೆರ್ನಾರ್ಡ್ ಅರ್ನಾಲ್ಟ್ 238.9 ಬಿಲಿಯನ್ ಅಮೆರಿಕನ್ ಡಾಲರ್ ಆಸ್ತಿಯೊಂದಿಗೆ 3ನೇ ಸ್ಥಾನದಲ್ಲಿದ್ದಾರೆ. 
 

77

ಒರಾಕಲ್‌ನ ಲಾರೆನ್ಸ್ ಎಲಿಸನ್, ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್, ಆಲ್ಫಾಬೆಟ್‌ನ ಸರ್ಗೆ ಬಿನ್, ಮೈಕ್ರೋಸಾಫ್ಟ್‌ನ ಸ್ಟೀವನ್ ಬಾಲ್ಮರ್, ಬೆರ್ಕ್‌ಶೈರ್ ಹಾತ್‌ವೇನ ವಾರೆನ್ ಬಫೆಟ್, ವಾಲ್‌ಮಾರ್ಟ್‌ನ ಜೇಮ್ಸ್ ವಾಲ್ಟನ್ ಸೇರಿದಂತೆ ಹಲವು ಅತೀ ಶ್ರೀಮಂತರು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

Read more Photos on
click me!

Recommended Stories