2023 ರ ಜಗತ್ತಿನ ಅತ್ಯಂತ ಶ್ರೀಮಂತರು ಇವ್ರೇ: ಟಾಪ್ 10 ಪಟ್ಟಿಯಲ್ಲಿ ಭಾರತೀಯರಿಗೂ ಸ್ಥಾನ!

First Published | Oct 6, 2023, 3:53 PM IST

ವಿಶ್ವದ ಟಾಪ್ 10 ಬಿಲಿಯನೇರ್‌ಗಳ ಪಟ್ಟಿಯನ್ನು ಫೋರ್ಬ್ಸ್‌ ಬಿಡುಗಡೆ ಮಾಡಿದ್ದು, ಈ ಪೈಕಿ ಭಾರತೀಯ ಉದ್ಯಮಿಯೊಬ್ಬರು ಸಹ ಸ್ಥಾನ ಪಡೆದುಕೊಂಡಿದ್ದಾರೆ. 

ಅಮೆರಿಕದ ವ್ಯಾಪಾರ ನಿಯತಕಾಲಿಕೆ ಫೋರ್ಬ್ಸ್ ತನ್ನ ವಾರ್ಷಿಕ ಬಿಲಿಯನೇರ್‌ಗಳ ಶ್ರೇಯಾಂಕದ 37 ನೇ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ಪೈಕಿ ವಿಶ್ವದ ಟಾಪ್ 10 ಬಿಲಿಯನೇರ್‌ಗಳ ಪಟ್ಟಿ ಹೆಚ್ಚು ಗಮನ ಸೆಳೆಯುತ್ತದೆ. ಟಾಪ್ 10 ಪಟ್ಟಿಯಲ್ಲಿ ಭಾರತೀಯ ಉದ್ಯಮಿ ಸಹ ಇರುವುದು ಭಾರತೀಯರು ಹೆಮ್ಮೆ ಪಡುವ ವಿಚಾರವಾಗಿದೆ. 

ಫೋರ್ಬ್ಸ್ ಪಟ್ಟಿಯಲ್ಲಿರುವ ಎಲ್ಲ ಬಿಲಿಯನೇರ್‌ಗಳು ಕಳೆದ ವರ್ಷಕ್ಕಿಂತ ಹೆಚ್ಚು ಬಡವರಾಗಿದ್ದಾರೆ, ಅಂದರೆ ಸಾಕಷ್ಟು ಸಂಪತ್ತು ಕಳೆದುಕೊಂಡಿದ್ದಾರೆ ಎಂದು ಬಹಿರಂಗಪಡಿಸುತ್ತದೆ. ಷೇರುಗಳ ಕುಸಿತ ಮತ್ತು ಹೆಚ್ಚುತ್ತಿರುವ ಬಡ್ಡಿದರಗಳು ಇದಕ್ಕೆ ಕೆಲವು ಕಾರಣಗಳಾಗಿವೆ. ಭಾರತದ ಮುಖೇಶ್‌ ಅಂಬಾನಿ ಜತೆಗೆ ಅಮೆಜಾನ್‌ನ ಜೆಫ್ ಬೆಜೋಜ್, ಒರಾಕಲ್‌ನ ಲ್ಯಾರಿ ಎಲಿಸನ್, ವಾರೆನ್ ಬಫೆಟ್, ಬಿಲ್ ಗೇಟ್ಸ್ ಕೂಡ ಟಾಪ್ 10 ಪಟ್ಟಿಯಲ್ಲಿದ್ದಾರೆ.

ಹಾಗಾದ್ರೆ, ಜಾಗತಿಕ ಟಾಪ್ 10 ಪಟ್ಟಿಯಲ್ಲಿರೋ ಶ್ರೀಮಂತರು ಯಾರು ಗೊತ್ತಾ? ಮುಂದೆ ಓದಿ..

Tap to resize

1) ಬರ್ನಾರ್ಡ್‌ ಅರ್ನಾಲ್ಟ್‌
ಫೋರ್ಬ್ಸ್‌ ಪಟ್ಟಿಯಲ್ಲಿ ಫ್ರೆಂಚ್ ಉದ್ಯಮಿ ಬರ್ನಾರ್ಡ್ ಜೀನ್ ಎಟಿಯೆನ್ನೆ ಅರ್ನಾಲ್ಟ್ ನಂ. 1 ಶ್ರೀಮಂತರಾಗಿದ್ದಾರೆ. ಐಷಾರಾಮಿ ಸರಕುಗಳ ದೈತ್ಯ LVMH ನ ಮುಖ್ಯಸ್ಥ ಬರ್ನಾರ್ಡ್ ಅರ್ನಾಲ್ಟ್ ಅವರು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ. 211 ಬಿಲಿಯನ್ ಡಾಲರ್‌ ಮೌಲ್ಯದ ನಿವ್ವಳ ಮೌಲ್ಯವನ್ನು ಹೊಂದಿರುವ ಅರ್ನಾಲ್ಟ್, ವಿಶ್ವದ ಅತಿದೊಡ್ಡ ಐಷಾರಾಮಿ ಸರಕುಗಳ ಬ್ರಾಂಡ್‌ ‘LVMH Moët Hennessy Louis Vuitton’ ಸಂಸ್ಥಾಪಕ ಮತ್ತು CEO. ಅವರು 200 ಬಿಲಿಯನ್‌ ಡಾಲರ್‌ಗೂ ಹೆಚ್ಚು ನಿವ್ವಳ ಮೌಲ್ಯವನ್ನು ಹೊಂದಿರುವ ಪಟ್ಟಿಯಲ್ಲಿ ಏಕೈಕ ಬಿಲಿಯನೇರ್ ಆಗಿದ್ದಾರೆ.

2) ಎಲಾನ್ ಮಸ್ಕ್‌
ಇನ್ನು, ನಂ. 1 ಶ್ರೀಮಂತ ಎನಿಸಿಕೊಂಡಿದ್ದ ಎಲಾನ್ ಮಸ್ಕ್‌ 2ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ಟೆಸ್ಲಾ ಹಾಗೂ ಎಕ್ಸ್‌ (ಈ ಹಿಂದಿನ ಟ್ವಿಟ್ಟರ್‌), ಸ್ಪೇಸ್‌ ಎಕ್ಸ್‌ ಸಿಇಒ ಎಲೋನ್ ಮಸ್ಕ್ ಅವರು 180 ಬಿಲಿಯನ್ ಡಾಲರ್‌ ನಿವ್ವಳ ಮೌಲ್ಯ ಹೊಂದಿದ್ದಾರೆ. 

3) ಜೆಫ್‌ ಬೆಜೋಸ್
ಜೆಫ್‌ ಬೆಜೋಸ್‌ ಅಮೆಜಾನ್‌ ಸಂಸ್ಥಾಪಕರಾಗಿದ್ದು, ಫೋರ್ಬ್ಸ್‌ 2023 ಶ್ರೀಮಂತರ ಪಟ್ಟಿಯಲ್ಲಿ ನಂ. 3 ಶ್ರೀಮಂತ ಎನಿಸಿಕೊಂಡಿದ್ದಾರೆ. ಇವರು 114 ಬಿಲಿಯನ್ ಡಾಲರ್‌ ಆಸ್ತಿ ಮೌಲ್ಯವನ್ನು ಹೊಂದಿದ್ದಾರೆ. 

4) ಲ್ಯಾರಿ ಎಲಿಸನ್ 
ಲ್ಯಾರಿ ಎಲಿಸನ್ ಅವರು ಸಾಫ್ಟ್‌ವೇರ್ ದೈತ್ಯ ಒರಾಕಲ್‌ನ ಮುಖ್ಯಸ್ಥರು, ಮುಖ್ಯ ತಂತ್ರಜ್ಞಾನ ಅಧಿಕಾರಿ ಮತ್ತು ಸಹ ಸಂಸ್ಥಾಪಕರಾಗಿದ್ದಾರೆ. ಈ ಕಂಪನಿಯಲ್ಲಿ ಅವರು ಸುಮಾರು 35% ಪಾಲನ್ನು ಹೊಂದಿದ್ದಾರೆ. ಅಂದ ಹಾಗೆ, ಇವರ ಆಸ್ತಿ  107 ಬಿಲಿಯನ್ ಡಾಲರ್‌ ಆಗಿfದು, 4ನೇ ಅತ್ಯಂತ ಶ್ರೀಮಂತ ಎನಿಸಿಕೊಂಡಿದ್ದಾರೆ. 

5) ವಾರೆನ್ ಬಫೆಟ್
"ಒರಾಕಲ್ ಆಫ್ ಒಮಾಹಾ" ಎಂದು ಕರೆಯಲ್ಪಡುವ ವಾರೆನ್ ಬಫೆಟ್ ಸಾರ್ವಕಾಲಿಕ ಯಶಸ್ವಿ ಹೂಡಿಕೆದಾರರಲ್ಲಿ ಒಬ್ಬರು. ಇವರು 106 ಬಿಲಿಯನ್‌ ಡಾಲರ್‌ ಆಸ್ತಿ ಮೌಲ್ಯ ಹೊಂದಿದ್ದು, ಜಗತ್ತಿನ 5ನೇ ಶ್ರೀಮಂತ ಎನಿಸಿಕೊಂಡಿದ್ದಾರೆ. 

6) ಬಿಲ್‌ ಗೇಟ್ಸ್‌
ಬಿಲ್ ಗೇಟ್ಸ್ ಸಾಫ್ಟ್‌ವೇರ್ ಸಂಸ್ಥೆ ಮೈಕ್ರೋಸಾಫ್ಟ್‌ನಿಂದ ತಮ್ಮ ಸಂಪತ್ತನ್ನು ಶೂನ್ಯ - ಕಾರ್ಬನ್ ಶಕ್ತಿಯಲ್ಲಿ ಹೂಡಿಕೆ ಸೇರಿದಂತೆ ವೈವಿಧ್ಯಮಯ ಹಿಡುವಳಿಗಳಾಗಿ ಪರಿವರ್ತಿಸಿದರು. ಫೊರ್ಬ್ಸ್‌ ಶ್ರೀಮಂತ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದು, 104 ಬಿಲಿಯನ್ ಡಾಲರ್‌ ಆಸ್ತಿ ಮೌಲ್ಯ ಹೊಂದಿದ್ದಾರೆ. 
 

7) ಮೈಕೆಲ್ ಬ್ಲೂಮ್‌ಬರ್ಗ್
ಮೈಕೆಲ್ ಬ್ಲೂಮ್‌ಬರ್ಗ್ 1981 ರಲ್ಲಿ ಹಣಕಾಸು ಮಾಹಿತಿ ಮತ್ತು ಮಾಧ್ಯಮ ಕಂಪನಿ ಬ್ಲೂಮ್‌ಬರ್ಗ್ LP ಅನ್ನು ಸ್ಥಾಪಿಸಿದರು. ಇವರು ಜಗತ್ತಿನ 7ನೇ ಶ್ರೀಮಂತ ಎನಿಸಿಕೊಂಡಿದ್ದು, 94.5 ಬಿಲಿಯನ್ ಡಾಲರ್‌ ಆಸ್ತಿ ಮೌಲ್ಯ ಹೊಂದಿದ್ದಾರೆ. 
 

8)  ಕಾರ್ಲೋಸ್ ಸ್ಲಿಮ್ ಹೆಲು

ಮೆಕ್ಸಿಕೋದ ಅತ್ಯಂತ ಶ್ರೀಮಂತ ವ್ಯಕ್ತಿ, ಕಾರ್ಲೋಸ್ ಸ್ಲಿಮ್ ಹೆಲು ಮತ್ತು ಅವರ ಕುಟುಂಬ ಲ್ಯಾಟಿನ್ ಅಮೆರಿಕದ ಅತಿದೊಡ್ಡ ಮೊಬೈಲ್ ಟೆಲಿಕಾಂ ಸಂಸ್ಥೆಯಾದ ಅಮೇರಿಕಾ ಮೊವಿಲ್ ಅನ್ನು ನಿಯಂತ್ರಿಸುತ್ತಾರೆ. ಇವರ ಆಸ್ತಿ ಮೌಲ್ಯ 93 ಬಿಲಿಯನ್ ಡಾಲರ್ ಆಗಿದ್ದು, ಜಗತ್ತಿನ 8ನೇ ಶ್ರೀಮಂತ ಎನಿಸಿಕೊಂಡಿದ್ದಾರೆ. 

9) ಮುಖೇಶ್ ಅಂಬಾನಿ
ಭಾರತದ ಪ್ರಖ್ಯತ ಉದ್ಯಮಿ ಮುಖೇಶ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ ಅನ್ನು ಮುನ್ನಡೆಸುತ್ತಿದ್ದಾರೆ. ಇದು ಪೆಟ್ರೋಕೆಮಿಕಲ್ಸ್, ತೈಲ ಮತ್ತು ಅನಿಲ, ಟೆಲಿಕಾಂ ಮತ್ತು ಚಿಲ್ಲರೆ ವ್ಯಾಪಾರದಲ್ಲಿ ಆಸಕ್ತಿ ಹೊಂದಿದೆ. ಇವರು ಜಗತ್ತಿನ 9ನೇ ಶ್ರೀಮಂತರಾಗಿದ್ದು, 83.4 ಬಿಲಿಯನ್‌ ಡಾಲರ್ ಆಸ್ತಿ ಮೌಲ್ಯ ಹೊಂದಿದ್ದಾರೆ. 
 

10) ಸ್ಟೀವ್ ಬಾಲ್ಮರ್ 
ಸ್ಟೀವನ್ ಆಂಥೋನಿ ಬಾಲ್ಮರ್ ಅಮೆರಿಕದ ಬಿಲಿಯನೇರ್ ಉದ್ಯಮಿ ಮತ್ತು ಹೂಡಿಕೆದಾರರಾಗಿದ್ದು, ಅವರು 2000 ರಿಂದ 2014 ರವರೆಗೆ ಮೈಕ್ರೋಸಾಫ್ಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಜಗತ್ತಿನ ಟಾಪ್ 10 ಶ್ರೀಮಂತರಾಗಿದ್ದು, 80.7 ಬಿಲಿಯನ್ ಡಾಲರ್‌ ಆಸ್ತಿ ಹೊಂದಿದ್ದಾರೆ. 

Latest Videos

click me!