ವಾಟ್ಸಪ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್ ಚರ್ಚೆಗೆ ಗ್ರಾಸವಾಗಿದೆ. ವೈರಲ್ ಆಗುತ್ತಿರುವ ಪೋಸ್ಟ್‌ನಲ್ಲಿ ಸೆಪ್ಟೆಂಬರ್ ನಿಂದ 500 ರೂಪಾಯಿ ನೋಟುಗಳನ್ನು ರದ್ದುಗೊಳಿಸಲಾಗುತ್ತಿದೆ ಎಂದು ಬರೆಯಲಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೆಪ್ಟೆಂಬರ್ 30, 2025 ರ ನಂತರ ಎಟಿಎಂಗಳಲ್ಲಿ 500 ರೂ. ಮುಖಬೆಲೆ ನೋಟು ತುಂಬಿಸೋದನ್ನು ನಿಲ್ಲಿಸುವಂತೆ ನಿರ್ದೇಶನ ನೀಡಿದೆ ಎಂಬ ಮಾಹಿತಿಯನ್ನು ವೈರಲ್ ಪೋಸ್ಟ್ ಒಳಗೊಂಡಿದೆ.
26
ಈ ಪೋಸ್ಟ್ ಜೊತೆ ಇನ್ಮುಂದೆ ಎಟಿಎಂಗಳಲ್ಲಿ ಕೇವಲ 100 ರೂಪಾಯಿ ಮತ್ತು 200 ರೂಪಾಯಿ ಮುಖಬೆಲೆ ನೋಟುಗಳು ಸಿಗಲಿವೆ ಎಂಬ ಮಾಹಿತಿಯೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಪೋಸ್ಟ್ ವೇಗವಾಗಿ ವೈರಲ್ ಆಗುತ್ತಿರುವ ಬೆನ್ನಲ್ಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಪಷ್ಟನೆ ನೀಡಿದೆ.
36
ಈ ಪೋಸ್ಟ್ ಸುಳ್ಳು!
ಸೆಪ್ಟೆಂಬರ್ 2025ರ ಅಂತ್ಯದ ವೇಳೆಗೆ ಎಟಿಎಂಗಳಿಂದ 500 ರೂಪಾಯಿ ನೋಟುಗಳನ್ನು ನೀಡುವುದನ್ನು ನಿಲ್ಲಿಸುವಂತೆ ಎಲ್ಲಾ ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚನೆ ನೀಡಿದೆ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಈ ಪೋಸ್ಟ್ ಮಾರುಟ್ಟೆಯಲ್ಲಿ ಹಲ್‌ಚಲ್ ಸೃಷ್ಟಿಸಿತ್ತು. ಈ ಪೋಸ್ಟ್ ಸುಳ್ಳು ಎಂದು ಸರ್ಕಾರ ಹೇಳಿದೆ.
500 ರೂ. ಮುಖಬೆಲೆ ಕುರಿತು ಹರಿದಾಡುತ್ತಿರುವ ಪೋಸ್ಟ್ ಸುಳ್ಳು ಮಾಹಿತಿಯನ್ನು ಒಳಗೊಂಡಿದೆ ಎಂದು PIB ಸ್ಪಷ್ಟನೆ ನೀಡಿ ಟ್ವೀಟ್ ಮಾಡಿದೆ. RBI ಬ್ಯಾಂಕ್‌ಗಳಿಗೆ ಈ ರೀತಿಯಲ್ಲಿ ಯಾವುದೇ ನಿರ್ದೇಶನ ನೀಡಿಲ್ಲ. ಈ ನಕಲಿ ಸುದ್ದಿಗಳಿಗೆ ಸಾರ್ವಜನಿಕರು ಗಮನ ಕೊಡಬಾರದು. ಸರ್ಕಾರಿ ಮೂಲಗಳಿಂದ ಸಿಗುವ ಮಾಹಿತಿಯನ್ನು ಮಾತ್ರ ನಂಬಬೇಕೆಂದು ಪಿಐಬಿ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದೆ.
56
500 ರೂಪಾಯಿ ನೋಟುಗಳು ಮಾನ್ಯವಾಗಿರುತ್ತವೆ. ಮೊದಲಿನಂತೆಯೇ ಮುಂದೆಯೂ 500 ರೂ. ನೋಟುಗಳ ಮೂಲಕ ಸಾರ್ವಜನಿಕರು ವ್ಯವಹರಿಸಬಹುದಾಗಿದೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗುವಂತಿಲ್ಲ ಪಿಐಬಿ ವೈರಲ್ ಪೋಸ್ಟ್ ಬಗ್ಗೆ ಸ್ಪಷ್ಟಪಡಿಸಿದೆ.
66
ಆರ್‌ಬಿಐನಿಂದ ನಿರ್ದೇಶನ
ಸೆಪ್ಟೆಂಬರ್ 30, 2025 ರ ವೇಳೆಗೆ ಎಟಿಎಂಗಳಲ್ಲಿ ಶೇ. 75 ರಷ್ಟು ನೋಟುಗಳು 100-200 ರೂ.ಗಳಾಗಿರಬೇಕು ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ದೇಶಿಸಿದೆ. ಈ ಪ್ರಮಾಣ ಮಾರ್ಚ್ 31, 2026 ರ ವೇಳೆಗೆ ಶೇ. 90 ಕ್ಕೆ ಹೆಚ್ಚಾಗುತ್ತದೆ. ಗ್ರಾಹಕರು ಎದುರಿಸುತ್ತಿರುವ ಚಿಲ್ಲರೆ ಸಮಸ್ಯೆಯನ್ನು ನಿವಾರಿಸಲುಮ ಆರ್‌ಬಿಐ ಸೂಚನೆ ನೀಡಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.