ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಟಾಪ್ 5 ಬಿಯರ್ ಬ್ರ್ಯಾಂಡ್‌ಗಳು

First Published | Sep 13, 2024, 8:26 PM IST

ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮದ್ಯ ಮಾರಾಟವು ಪ್ರಮುಖ ಆದಾಯದ ಮೂಲವಾಗಿದೆ. ಆದರೆ ಯಾವ ಬ್ರ್ಯಾಂಡ್‌ನ ಬಿಯರ್ ಹೆಚ್ಚು ಮಾರಾಟವಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಟಾಪ್ 5 ಬಿಯರ್ ಬ್ರ್ಯಾಂಡ್‌ಗಳ ಪಟ್ಟಿ ಇಲ್ಲಿದೆ.

ನಮ್ಮ ದೇಶದಲ್ಲಿ ಅತಿಹೆಚ್ಚು ಆಲ್ಕೋಹಾಲ್ ಪ್ರಮಾಣವಿಲ್ಲದ ಮದ್ಯ ಬಿಯರ್ ಪ್ರಿಯರ ಸಂಖ್ಯೆಯೂ ಸಾಕಷ್ಟಿದೆ. ಅದರಲ್ಲಿ ಬಡ್‌ವೈಸರ್ (Budweiser) ದೇಶದಲ್ಲಿ ಅತಿಹೆಚ್ಚು (ಶೇ.2ರಷ್ಟು) ಮಾರಾಟವಾಗುವ ಬಿಯರ್‌ನಲ್ಲಿ 5ನೇ ಸ್ಥಾನವನ್ನು ಹೊಂದಿದೆ. ಇದೊಂದು ಉತ್ತಮ ಬ್ರ್ಯಾಂಡ್ ಎಂದು ಹಲವು ನಂಬಿದ್ದಾರೆ.

ಯುನೈಟೆಡ್ ಬ್ರೂವರೀಸ್ ಗ್ರೂಪ್‌ನ ಮತ್ತೊಂದು ಬಿಯರ್ ಬ್ರ್ಯಾಂಡ್ ಆಗಿರುವ ಕಲ್ಯಾಣಿ ಬ್ಲ್ಯಾಕ್ ಲೇಬಲ್ (Kalyani black Label) ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚಿನದಾಗಿ ಮಾರಾಟ ಆಗುತ್ತದೆ. ಇದು ಪಶ್ಚಿಮ ಬಂಗಾಳದ ಜೊತೆಗೆ ಕೆಲವು ಪೂರ್ವ ರಾಜ್ಯಗಳಲ್ಲಿ ಈ ಬ್ರ್ಯಾಂಡ್ ಮಾರಾಟ ಆಗುತ್ತದೆ. ಕಲ್ಯಾಣಿ ಬ್ಲ್ಯಾಕ್ ಲೇಬಲ್ ಬಿಯರ್ ಮಾರಾಟದಲ್ಲಿ (ಶೇ.    2.7 ಪರ್ಸೆಂಟ್) 4ನೇ ಸ್ಥಾನವನ್ನು ಹೊಂದಿದೆ.

Tap to resize

ಸ್ಯಾಬ್‌ಮಿಲ್ಲರ್ (SABMiller) ಕಂಪನಿ ಜಾಗತಿಕ ಟಾಫ್‌-5 ಬ್ರೂಯಿಂಗ್ ಕಂಪನಿಗಳಲ್ಲಿ ಒಂದಾಗಿದೆ. ಇದು 150 ಕ್ಕೂ ಹೆಚ್ಚು ಬಿಯರ್‌ಗಳ ಶ್ರೇಣಿಯನ್ನು ಹೊಂದಿದೆ. ಈ ಕಂಪನಿಯು ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ, ಅತ್ಯಂತ ಹೆಚ್ಚು ಕಿಕ್ ಕೊಡುವ ನಾಕ್ ಔಟ್ (Knock Out) ಬ್ರ್ಯಾಂಡ್ ಬಿಯರ್ ಅನ್ನು ಉತ್ಪಾದಿಸಿ ಮಾರಾಟ ಮಾಡುತ್ತಿದೆ. ಬಾಕ್ಸಿಂಗ್ ಚಾಂಪಿಯನ್‌ನಂತೆ ಪೋಸ್ ಕೊಡುವ ಈ ಬಿಯರ್ ಅತಿ ಹೆಚ್ಚು ಮಾರಾಟವಾಗುವ (ಶೇ.8.7 ಪರ್ಸೆಂಟ್) ಬ್ರ್ಯಾಂಡ್‌ನಲ್ಲಿ 3ನೇ ಸ್ಥಾನ ಹೊಂದಿದೆ.

ಸ್ಯಾಬ್‌ಮಿಲ್ಲರ್ ಕಂಪನಿಯ ಮತ್ತೊಂದು ಬ್ರ್ಯಾಂಡ್ ದೇಶದಲ್ಲಿ ಅತಿ ಕಡಿಮೆ ಬೆಲೆಗೆ ಮಾರಾಟವಾಗುವ ಹಾಗೂ ಬಡವರ ಎಣ್ಣೆ ಎಂದು ಹೇವರ್ಡ್ಸ್ (Heywards) ಖ್ಯಾತಿಯಾಗಿದೆ. ಹೇವರ್ಡ್ಸ್ ಬ್ರ್ಯಾಂಡ್‌ನ ಬಿಯರ್ ಅತಿಹೆಚ್ಚು ಮಾರಾಟವಾಗುವ ಬಿಯರ್‌ನಲ್ಲಿ 2ನೇ ಸ್ಥಾನವನ್ನು (ಶೇ.15 ಪರ್ಸೆಂಟ್) ಹೊಂದಿದೆ. ದೇಶದ ರಾಜ್ಯಗಳಲ್ಲಿ ಇದು ಹೆಚ್ಚಾಗಿ ಮಾರಾಟವಾಗುವ ಮದ್ಯದ ಬ್ರ್ಯಾಂಡ್ ಆಗಿದೆ. ಇದನ್ನು ಲೋಕಲ್ ಬ್ರ್ಯಾಂಡ್ ಎಂತಲೂ ಕರೆಯುತ್ತಾರೆ.

ಕಿಂಗ್‌ಫಿಶರ್ (kingfisher) ಎಂಬುದು ಭಾರತದ ಯುನೈಟೆಡ್ ಬ್ರೂವರೀಸ್ ಗ್ರೂಪ್ ಬೆಂಗಳೂರಿನ ಮೂಲದ ಬಿಯರ್ ಆಗಿದೆ. ಈ ಬ್ರ್ಯಾಂಡ್ ಅನ್ನು ಮೊದಲು 1857ರಲ್ಲಿ ಪರಿಚಯಿಸಲಾಯಿತು. ಭಾರತದಲ್ಲಿ 9 ಸಾವಿರ ಕೋಟಿ ರೂ.ಗಿಂತ ಅತಿಹೆಚ್ಚು ಸಾಲ ಮಾಡಿ ದೇಶ ಬಿಟ್ಟು ಹೋಗಿರುವ ಆರ್‌ಸಿಬಿ ಮಾಜಿ ಮಾಲೀಕ ವಿಜಯ್ ಮಲ್ಯ ನಂತರ 1978 ರಲ್ಲಿ ಕಿಂಗ್‌ಫಿಶರ್ ಬ್ರ್ಯಾಂಡ್‌ನ ಪುನಾರಂಭಿಸಿದರು. ಈ ಕಿಂಗ್‌ಫಿಶರ್ ಬ್ರ್ಯಾಂಡ್‌ನ ಬಿಯರ್ ದೇಶದಲ್ಲಿಯೇ ಅತಿಹೆಚ್ಚು (ಶೇ.41 ಪರ್ಸೆಂಟ್‌) ಮಾರಾಟ ಆಗುತ್ತಿರುವ ಬಿಯರ್ ಆಗಿದೆ.

Latest Videos

click me!