ರಾಧಾಕಿಶನ್ ಧಮಾನಿ ಅವರು ಅನುಭವಿ ಸ್ಟಾಕ್ ಮಾರ್ಕೆಟ್ ಹೂಡಿಕೆದಾರರು. ದೇಶದ ಅತಿದೊಡ್ಡ ರಿಟೇಲ್ ಕಿಂಗ್ ಡಿಮಾರ್ಟ್ ಚೈನ್ ಸೂಪರ್ ಮಾರ್ಕೆಟ್‌ನ ಮಾಲೀಕರಾಗಿದ್ದಾರೆ. ಅವರು ರಿಟೇಲ್ ಚೈನ್ ಅವೆನ್ಯೂ ಸೂಪರ್‌ಮಾರ್ಟ್ಸ್ ಲಿಮಿಟೆಡ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದಾರೆ. ಭಾರತದ ಶ್ರೀಮಂತರಲ್ಲಿ ಒಬ್ಬರಾದ ರಾಧಾಕಿಶನ್ ದಮಾನಿ ಅವರ ನಿವ್ವಳ ಮೌಲ್ಯ $ 23 ಬಿಲಿಯನ್. ಅವರನ್ನು ಹೆಚ್ಚಾಗಿ ಭಾರತದ ರಿಟೇಲ್ ಕಿಂಗ್ ಎಂದೇ ಕರೆಯಲಾಗುತ್ತದೆ.
ರಾಧಾಕಿಶನ್ ಧಮಾನಿ ಅವರ ಸಂಪತ್ತನ್ನು ರಕ್ಷಣೆ ಮಾಡುತ್ತಿರುವುದು ಅವರ ಮೂರು ಪುತ್ರಿಯರು. ಅವರೆಂದರೆ, ಮಧು ಚಂದಕ್, ಮಂಜ್ರಿ ಚಂದಕ್ ಮತ್ತು ಜ್ಯೋತಿ ಕಾಬ್ರಾ ಅವರು ಸ್ಥಾಪಿಸಿದ ವ್ಯವಹಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಮಧು ಚಂದಕ್ ಬಾಂಬೆ ಸ್ವದೇಶಿ ಸ್ಟೋರ್ಸ್‌ನಲ್ಲಿ ನಿರ್ದೇಶಕರಾಗಿದ್ದಾರೆ. ಅವರು ಟ್ರಸ್ಟಿಗಳ ಮಂಡಳಿಯಲ್ಲಿ ರಾಧಾಕೃಷ್ಣ ದಮಾನಿ ಅವರ ವಿಚಾರಗಳನ್ನು ಪ್ರತಿನಿಧಿಸುತ್ತಾರೆ. ಅವರು ಡಿ-ಮಾರ್ಟ್‌ನ ಸಿಎಸ್‌ಆರ್ ಚಟುವಟಿಕೆಗಳನ್ನು ನಿರ್ವಹಿಸುತ್ತಾರೆ. ಮಧು ಚಂದಕ್ ಕಾರ್ಡಿಫ್ ವಿಶ್ವವಿದ್ಯಾಲಯದಿಂದ ಹಣಕಾಸು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಮಂಜ್ರಿ ಚಂದಕ್ ಅವರು ಅವೆನ್ಯೂ ಸೂಪರ್‌ಮಾರ್ಟ್ಸ್ ಲಿಮಿಟೆಡ್‌ನ ನಿರ್ದೇಶಕರಾಗಿದ್ದಾರೆ. ಅವರು ಪ್ರಸ್ತುತ ಅವೆನ್ಯೂ ಸೂಪರ್ಮಾರ್ಟ್ಸ್ ಲಿಮಿಟೆಡ್ ಸೇರಿದಂತೆ ಏಳು ಕಂಪನಿಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಮಂಜ್ರಿ ಚಂದಕ್ ದಿನನಿತ್ಯದ ಆಧಾರದ ಮೇಲೆ ವಿಶೇಷವಾಗಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಗ್ರಾಹಕ ವ್ಯವಹಾರಗಳಲ್ಲಿ ಆಸಕ್ತಿ ಹೊಂದಿದ್ದಾರೆ ಮತ್ತು ಗ್ರಾಹಕ ವ್ಯವಹಾರ ಕಾರ್ಯಾಚರಣೆಯಲ್ಲಿ ಅವರು ತಂದೆಯಿಂದ ಮಾರ್ಗದರ್ಶನ ಪಡೆಯುತ್ತಾರೆ.