ನಿಮ್ಮ ಹಣ ಡಬಲ್ ಆಗಬೇಕಾ? ಚಿನ್ನ ಖರೀದಿಸಿ, ಇಲ್ಲಿದೆ ಇಂದಿನ ದರ

Published : Feb 12, 2025, 08:06 AM ISTUpdated : Feb 12, 2025, 08:09 AM IST

ಚಿನ್ನದ ಮೇಲಿನ ಹೂಡಿಕೆ ಒಳ್ಳೆಯ ರಿಟರ್ನ್ ನೀಡುತ್ತದೆ. ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆಗಳ ಮಾಹಿತಿ ಇಲ್ಲಿದೆ. 22 ಕ್ಯಾರಟ್ ಮತ್ತು 24 ಕ್ಯಾರಟ್ ಚಿನ್ನದ ದರಗಳನ್ನು ನಗರವಾರು ನೀಡಲಾಗಿದೆ.

PREV
17
ನಿಮ್ಮ ಹಣ ಡಬಲ್ ಆಗಬೇಕಾ? ಚಿನ್ನ ಖರೀದಿಸಿ, ಇಲ್ಲಿದೆ ಇಂದಿನ ದರ

ತಿಂಗಳ ಸಂಬಳದಲ್ಲಿ ಎಲ್ಲಾ ಖರ್ಚು ವೆಚ್ಚ ತೆಗೆದ ನಂತರವೂ ಹಣ ಉಳಿದಿದ್ದರೆ ಚಿನ್ನ ಖರೀದಿಸಿ. ಚಿನ್ನದ ಮೇಲಿನ ಹೂಡಿಕೆ ಕಡಿಮೆ ಸಮಯದಲ್ಲಿ ಒಳ್ಳೆಯ ರಿಟರ್ನ್ ನೀಡುತ್ತದೆ. ಇದರಿಂದ ಭವಿಷ್ಯಕ್ಕೆ ಒಳ್ಳೆಯದಾಗುತ್ತದೆ. 

27
Gold Rate

ಪ್ರತಿದಿನ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ವ್ಯತ್ಯಾಸ ಆಗುತ್ತಿರುತ್ತದೆ. ಚಿನ್ನದ ಜೊತೆ ಬೆಳ್ಳಿ ಮೇಲಿನ ಹೂಡಿಕೆಯೂ ಸಹ ಏರಿಕೆಯಾಗಿದೆ. ಇದರಿಂದ ಬೆಳ್ಳಿ ಬೆಲೆಯೂ ಸಹ ಏರಿಕೆಯಾಗುತ್ತಿರುತ್ತದೆ. ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.

37

ಭಾರತದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 8,011 ರೂಪಾಯಿ
8 ಗ್ರಾಂ: 64,088 ರೂಪಾಯಿ
10 ಗ್ರಾಂ: 80,110 ರೂಪಾಯಿ
100 ಗ್ರಾಂ: 8,01,100 ರೂಪಾಯಿ

47

ಭಾರತದಲ್ಲಿ 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 8,739 ರೂಪಾಯಿ
8 ಗ್ರಾಂ: 69,912 ರೂಪಾಯಿ
10 ಗ್ರಾಂ: 87,390 ರೂಪಾಯಿ
100 ಗ್ರಾಂ:  8.73,900 ರೂಪಾಯಿ

57

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ 
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 80,110 ರೂಪಾಯಿ, ಮುಂಬೈ: 80,110 ರೂಪಾಯಿ, ದೆಹಲಿ: 80,260 ರೂಪಾಯಿ,  ಕೋಲ್ಕತ್ತಾ: 80,110 ರೂಪಾಯಿ , ಬೆಂಗಳೂರು: 80,110 ರೂಪಾಯಿ, ಹೈದರಾಬಾದ್: 80,110 ರೂಪಾಯಿ

67

ಇಂದಿನ ಬೆಳ್ಳಿ ಬೆಲೆ
ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ರೂಪಾಯಿ ಮೌಲ್ಯದಲ್ಲಿ ಏರಿಕೆ, ಇಳಿಕೆಯಾದಂತೆಯೂ ಚಿನ್ನ ಬೆಳ್ಳಿ ದರ ವ್ಯತ್ಯಾಸವಾಗುತ್ತಿದೆ. ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. 
10 ಗ್ರಾಂ: 994 ರೂಪಾಯಿ
100 ಗ್ರಾಂ: 9,940 ರೂಪಾಯಿ 
1000 ಗ್ರಾಂ: 99,400 ರೂಪಾಯಿ 

77

ಕೆಲವರು ಮಕ್ಕಳ ಮದುವೆಗೆ ಚಿನ್ನ ಖರೀದಿಸಬೇಕೆಂದು ಕಾಸಿಗೆ ಕಾಸು ಸೇರಿಸಿರುತ್ತಾರೆ. ತಾವು ಸೇರಿಸಿರುವ ಹಣಕ್ಕೆ ಹೆಚ್ಚು ಬಂಗಾರ  ಸಿಗಲಿ ಎಂಬ ಆಸೆಯನ್ನು ಹೊಂದಿರುತ್ತಾರೆ. ಹೀಗೆ ಆಗಬೇಕಾದ್ರೆ ಬೆಲೆ ಕಡಿಮೆಯಾಗಿರುವ ಸಂದರ್ಭದಲ್ಲಿ ಚಿನ್ನ ಖರೀದಿಸಬೇಕು. 

Read more Photos on
click me!

Recommended Stories