ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರದ ಬಗ್ಗೆ ನಿಮಗೆಷ್ಟು ಗೊತ್ತು? ಅಂಚೆ ಕಚೇರಿಯಲ್ಲಿ ಓಪನ್‌ ಮಾಡೋದು ಹೇಗೆ ನೋಡಿ..!

Published : Sep 08, 2023, 07:10 PM IST

ಭಾರತದ ಪ್ರತಿ ಹೆಣ್ಣು ಮಗು ಮತ್ತು ಮಹಿಳೆಗೆ ಆರ್ಥಿಕ ಭದ್ರತೆಯನ್ನು ಒದಗಿಸಲು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ 2023 ಯೋಜನೆಯನ್ನು ಕೇಂದ್ರ ಸರ್ಕಾರವು 2023-24ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದೆ.

PREV
19
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರದ ಬಗ್ಗೆ ನಿಮಗೆಷ್ಟು ಗೊತ್ತು? ಅಂಚೆ ಕಚೇರಿಯಲ್ಲಿ ಓಪನ್‌ ಮಾಡೋದು ಹೇಗೆ ನೋಡಿ..!

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಎಂಬ ಯೋಜನೆ ಏಪ್ರಿಲ್ 1, 2023 ರಿಂದ ಅಂಚೆ ಇಲಾಖೆಯ ಮೂಲಕ ಕಾರ್ಯನಿರ್ವಹಿಸುತ್ತಿದೆ. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ, 2023 ಯೋಜನೆಯನ್ನು ಕೇಂದ್ರ ಸರ್ಕಾರವು 2023-24ರ ಕೇಂದ್ರ ಬಜೆಟ್‌ನಲ್ಲಿ ಭಾರತದ ಪ್ರತಿ ಹೆಣ್ಣು ಮಗು ಮತ್ತು ಮಹಿಳೆಗೆ ಆರ್ಥಿಕ ಭದ್ರತೆಯನ್ನು ಒದಗಿಸಲು ಘೋಷಿಸಿದೆ.
 

29

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ 2023
ಈ ಯೋಜನೆಯಡಿಯಲ್ಲಿ, ಒಬ್ಬ ಮಹಿಳೆ ತನ್ನ ಪರವಾಗಿ ಅಥವಾ ಅಪ್ರಾಪ್ತ ಬಾಲಕಿಯ ಪರವಾಗಿ ಗಾರ್ಡಿಯನ್‌ ಆಗಿ ಖಾತೆಯನ್ನು ತೆರೆಯಬಹುದು. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ (MSSC) 7.5% p.a. ಹೆಚ್ಚಿನ ಬಡ್ಡಿ ದರವನ್ನು ನೀಡುತ್ತದೆ. ಹಾಗೂ, ಇದು ತ್ರೈಮಾಸಿಕ ಆಧಾರದ ಮೇಲೆ ಖಾತೆಗೆ ಜಮೆಯಾಗುತ್ತದೆ ಮತ್ತು ಸಂಯೋಜನೆಗೊಳ್ಳುತ್ತದೆ. ನೂರು ರೂಪಾಯಿಗಳ ಗುಣಾಕಾರಗಳಲ್ಲಿ ಯಾವುದೇ ಮೊತ್ತ ಮತ್ತು ಕನಿಷ್ಠ 1000 ರೂ. ಹಾಕಿ ಈ ಖಾತೆಯನ್ನು ಪ್ರಾರಂಭಿಸಲು ಬಳಸಬಹುದು. ಹಾಗೂ, ಒಬ್ಬ ಮಹಿಳೆಯು ಗರಿಷ್ಠ ಮಿತಿ 2,00,000 ರೂ. ಮತ್ತು 3 ತಿಂಗಳ ಸಮಯದ ಅಂತರಕ್ಕೆ ಒಳಪಟ್ಟು ಎಷ್ಟಾದರೂ ಸಂಖ್ಯೆಯ ಖಾತೆಗಳನ್ನು ತೆರೆಯಬಹುದು.

39

ಅಂಚೆ ಕಚೇರಿಯಲ್ಲಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವನ್ನು ಓಪನ್‌ ಮಾಡುವುದು ಹೇಗೆ?
ಹಂತ 1: ಅಂಚೆ ಕಚೇರಿಗೆ ಭೇಟಿ ನೀಡಿ
ಹಂತ 2: ಖಾತೆ ತೆರೆಯುವ ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ಸಲ್ಲಿಸಿ
ಹಂತ 3: KYC ಡಾಕ್ಯುಮೆಂಟ್ (ಆಧಾರ್ ಮತ್ತು PAN ಕಾರ್ಡ್), ಹೊಸ ಖಾತೆದಾರರಿಗೆ KYC ಫಾರ್ಮ್.
ಹಂತ 4: ಹತ್ತಿರದ ಅಂಚೆ ಕಛೇರಿಯಲ್ಲಿ ಠೇವಣಿ ಮೊತ್ತ/ಚೆಕ್ ಜೊತೆಗೆ ಪೇ-ಇನ್-ಸ್ಲಿಪ್.

49

ನಾಮನಿರ್ದೇಶನ (ನಾಮಿನೇಷನ್‌)
ಖಾತೆದಾರರು ಯಾವುದೇ ಸದಸ್ಯರನ್ನು ನಾಮನಿರ್ದೇಶನ ಮಾಡಬಹುದು. ಆ ಮಹಿಳೆಯ ಸಾವಿನ ನಂತರ ನಾಮಿನೇಷನ್‌ ಮಾಡಲಾದ ಸದಸ್ಯರಿಗೆ ಆ ಹಣ ಸಿಗುತ್ತದೆ. 

59

ಬಡ್ಡಿ ದರ
ಈ ಯೋಜನೆಯಡಿಯಲ್ಲಿ ಮಾಡಿದ ಠೇವಣಿಗಳಿಗೆ ವಾರ್ಷಿಕ ಶೇಕಡಾ 7.5 ದರದಲ್ಲಿ ಬಡ್ಡಿ ದೊರೆಯುತ್ತದೆ. ಬಡ್ಡಿಯನ್ನು ತ್ರೈಮಾಸಿಕವಾಗಿ ಒಟ್ಟುಗೂಡಿಸಿ ಖಾತೆಗೆ ಜಮಾ ಮಾಡಲಾಗುತ್ತದೆ.
 

69

ಮೆಚ್ಯುರಿ ಅವಧಿಯ ನಂತರ ಪಾವತಿ
ಈ ಹಣದ ಠೇವಣಿಯು ಡೆಪಾಸಿಟ್‌ ಮಾಡಿದ ದಿನಾಂಕದಿಂದ ಎರಡು ವರ್ಷಗಳ ನಂತರ ಮೆಚ್ಯೂರ್‌ ಆಗುತ್ತದೆ. ಮತ್ತು ಆ ಸಮಯದಲ್ಲಿ ಖಾತೆಗಳ ಕಛೇರಿಗೆ ನಮೂನೆ-2 ರಲ್ಲಿ ಅರ್ಜಿಯನ್ನು ಸಲ್ಲಿಸುವ ಮೂಲಕ ಖಾತೆದಾರರು ಅರ್ಹವಾದ ಬಾಕಿಯನ್ನು ಸ್ವೀಕರಿಸಬಹುದು.

79

ಮೆಚ್ಯೂರಿಟಿ ಮೌಲ್ಯವನ್ನು ನಿರ್ಧರಿಸಲು ಬಳಸಲಾಗುವ ರೂಪಾಯಿಯ ಯಾವುದೇ ಭಾಗವನ್ನು ಹತ್ತಿರದ ರೂಪಾಯಿಗೆ ಪೂರ್ಣಾಂಕಗೊಳಿಸಬೇಕು ಎಂಬುದನ್ನು ಗಮನಿಸಿ. ಅಂದರೆ, ಐವತ್ತು ಪೈಸೆ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತವನ್ನು ಒಂದು ರೂಪಾಯಿ ಎಂದು ಪರಿಗಣಿಸಲಾಗುತ್ತದೆ ಮತ್ತು ಐವತ್ತು ಪೈಸೆಗಿಂತ ಕಡಿಮೆ ಇರುವ ಯಾವುದೇ ಮೊತ್ತವನ್ನು ನಿರ್ಲಕ್ಷಿಸಲಾಗುತ್ತದೆ.
 

89

ಶುಲ್ಕಗಳು
ಅಂಚೆ ಕಛೇರಿಯು ಭೌತಿಕ ಕ್ರಮದಲ್ಲಿ ರಶೀದಿಗಾಗಿ 40 ರೂ. , ಇ-ಮೋಡ್‌ಗೆ 9 ರೂ. ಮತ್ತು 100 ರೂ. ವಹಿವಾಟಿಗೆ 6.5 ಪೈಸೆ ಶುಲ್ಕ ವಿಧಿಸುತ್ತದೆ.

99

ಯಾವ್ಯಾವ ಬ್ಯಾಂಕ್‌ಗಳು ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವನ್ನು ನೀಡುತ್ತವೆ?
ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಹ ಮಹಿಳಾ ಹೂಡಿಕೆದಾರರಿಗೆ ಮಹಿಳಾ ಸಮ್ಮಾನ್ ಉಳಿತಾಯ ಖಾತೆಯನ್ನು ನೀಡುತ್ತಿವೆ.
 

Read more Photos on
click me!

Recommended Stories