ಅಬ್ಬಬ್ಬಾ! ವಿರುಷ್ಕಾ ಜೋಡಿಯ ಒಟ್ಟು ಸಂಪತ್ತು ಇಷ್ಟೊಂದಾ?

Published : May 01, 2025, 03:31 PM ISTUpdated : May 01, 2025, 03:44 PM IST

ಅನುಷ್ಕಾ ಶರ್ಮಾ ಅವರ ಹುಟ್ಟುಹಬ್ಬದಂದು, ಅವರ ಮತ್ತು ಪತಿ ವಿರಾಟ್ ಕೊಹ್ಲಿ ಅವರ ಒಟ್ಟು ಆಸ್ತಿ 1300 ಕೋಟಿಗೂ ಹೆಚ್ಚು ಎಂದು ತಿಳಿದುಬಂದಿದೆ.

PREV
110
ಅಬ್ಬಬ್ಬಾ! ವಿರುಷ್ಕಾ ಜೋಡಿಯ ಒಟ್ಟು ಸಂಪತ್ತು ಇಷ್ಟೊಂದಾ?

ಬಾಲಿವುಡ್ ನಟಿ ಅನುಷ್ಕಾ ಶರ್ಮಾ 37ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ವಿರಾಟ್ ಕೊಹ್ಲಿ ಜೊತೆಗಿನ ಅವರ ಆಸ್ತಿ ವಿವರ ಇಲ್ಲಿದೆ.

210

ಅನುಷ್ಕಾ ಶರ್ಮಾ ಶಾರುಖ್ ಖಾನ್ ಜೊತೆ 'ರಬ್ ನೇ ಬನಾ ದಿ ಜೋಡಿ' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅಲ್ಲಿಂದ ತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ

310

ಅನುಷ್ಕಾ ಶರ್ಮಾ, ಪಿಕೆ, ಏ ದಿಲ್ ಹೈ ಮುಷ್ಕಿಲ್, ಸುಲ್ತಾನ್, ಜಬ್ ತಕ್ ಹೈ ಜಾನ್ ಸೇರಿದಂತೆ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.

410

ಕಳೆದ 17 ವರ್ಷಗಳಲ್ಲಿ ಅನುಷ್ಕಾ ಶರ್ಮಾ ಸಾಕಷ್ಟು ಆಸ್ತಿ ಗಳಿಸಿದ್ದಾರೆ. ವಿರಾಟ್ ಪತ್ನಿ ಅನುಷ್ಕಾ ಅವರ ಆಸ್ತಿ 256 ಕೋಟಿ ಎಂದು ಅಂದಾಜಿಸಲಾಗಿದೆ.

510

ಅನುಷ್ಕಾ ಶರ್ಮಾ 2017 ರಲ್ಲಿ ವಿರಾಟ್ ಕೊಹ್ಲಿ ಅವರನ್ನು ವಿವಾಹವಾದರು. ಅವರಿಗೆ ಒಂದು ಮಗಳು ಮತ್ತು ಒಬ್ಬ ಮಗನಿದ್ದಾನೆ. ಈ ಜೋಡಿಯನ್ನು ಎಲ್ಲರೂ ವಿರುಷ್ಕಾ ಜೋಡಿ ಅಂತ ಕರಿಯಲಾಗುತ್ತೆ.

610

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಭಾರತದಲ್ಲಿ ಮಾತ್ರವಲ್ಲದೇ, ವಿರುಷ್ಕಾ ಜೋಡಿ ಲಂಡನ್‌ನಲ್ಲಿ ಒಂದು ಬಂಗಲೆಯನ್ನು ಹೊಂದಿದ್ದಾರೆ.

710

ವಿರಾಟ್ ಕೊಹ್ಲಿ ಭಾರತದ ಯಶಸ್ವಿ ಕ್ರಿಕೆಟಿಗರಲ್ಲಿ ಒಬ್ಬರು. ಅವರು ಬಿಸಿಸಿಐನಿಂದ ಗಳಿಸುವ ವಾರ್ಷಿಕ ಆದಾಯ ಸುಮಾರು 7 ಕೋಟಿ. ಅವರು ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಲ್ಲಿ 'ಎ+' ಗ್ರೇಡ್ ಹೊಂದಿದ್ದಾರೆ.

810

ವಿರಾಟ್ ಜಾಹೀರಾತಿಗೆ 7 ರಿಂದ 10 ಕೋಟಿ ರೂಪಾಯಿಗಳವರೆಗೆ ಪಡೆಯುತ್ತಾರೆ. ಅವರ ಆಸ್ತಿ 1,053 ಕೋಟಿ ಎಂದು ಅಂದಾಜಿಸಲಾಗಿದೆ. ಐಪಿಎಲ್‌ನಿಂದಲೂ ವಿರಾಟ್ ಕೋಟಿ ಕೋಟಿ ಗಳಿಸುತ್ತಾರೆ.

910

ವಿರುಷ್ಕಾ ದಂಪತಿಗಳು ಗುರುಗ್ರಾಮ್, ಮುಂಬೈ ಮತ್ತು ಅಲಿಘರ್‌ನಲ್ಲಿ ಐಶಾರಾಮಿ ಮನೆಗಳನ್ನು ಹೊಂದಿದ್ದಾರೆ. ಇತ್ತೀಚೆಗೆ ವಿರುಷ್ಕಾ ಜೋಡಿ ಭಾರತದಾಚೆಯೇ ಹೆಚ್ಚು ಕಾಲ ಕಳೆಯುತ್ತಾರೆ.

1010

ಭಾರತದ ಕ್ರಿಕೆಟ್ ದಂತಕಥೆ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಒಟ್ಟು ಆಸ್ತಿ 1300 ಕೋಟಿಗೂ ಹೆಚ್ಚು ಎಂದು ವರದಿಗಳಲ್ಲಿ ಉಲ್ಲೇಖವಾಗಿದೆ.

Read more Photos on
click me!

Recommended Stories