ನೆಟ್‌ಫ್ಲಿಕ್ಸ್ ಸೇರಿ 19 ಉಚಿತ ಒಟಿಟಿ , 120 ಜಿಬಿ ಡೇಟಾ ಫ್ಯಾಮಿಲಿ ಪ್ಲಾನ್ ಪರಿಚಯಿಸಿದ ವಿಐ

Published : Jun 27, 2025, 08:43 PM IST

ನೆಟ್‌ಫ್ಲಿಕ್ಸ್ ಸೇರಿದಂತೆ 19 ಒಟಿಟಿ ಪ್ಲಾಟ್‌ಫಾರ್ಮ್, 120 ಜಿಬಿ ಡೇಟಾ ಸೇರಿದಂತೆ ಹತ್ತು ಹಲವು ಸೌಲಭ್ಯದ ವಿಐ ಮ್ಯಾಕ್ಸ್ ಫ್ಯಾಮಿಲಿ ಪ್ಲಾನ್ ಘೋಷಣೆಯಾಗಿದೆ. ಈ ಪ್ಲಾನ್ ಸೌಲಭ್ಯವೇನು?

PREV
15

ಟೆಲಿಕಾಂ ಕಂಪನಿ ವಿ (Vi) ತನ್ನ ಹೊಸ ವಿ ಮ್ಯಾಕ್ಸ್ ಫ್ಯಾಮಿಲಿ ಪೋಸ್ಟ್‌ಪೇಯ್ಡ್ ಯೋಜನೆ ಘೋಷಿಸಿದೆ. ಅತ್ಯುನ್ನತ ಡೇಟಾ ಪ್ರಯೋಜನ, ನೆಟ್‌ಫ್ಲಿಕ್ಸ್ ಚಂದಾದಾರಿಕೆ ಮತ್ತು ಒಂದೇ ಮಾಸಿಕ ಬಿಲ್‌ನಲ್ಲಿ ಹೆಚ್ಚುವರಿಯಾಗಿ 18 ಒಟಿಟಿ ವೇದಿಕೆಗಳ ಬಳಕೆ ಸೌಲಭ್ಯ ಒಳಗೊಂಡಂತೆ ಸರಿಸಾಟಿಯಿಲ್ಲದ ಒಟಿಟಿ ಅನುಭವ ನೀಡಲಿದೆ. ಇದು ಸ್ಪರ್ಧಾತ್ಮಕ ಬೆಲೆಯಲ್ಲಿ ಉತ್ತಮ ಮೌಲ್ಯವನ್ನು ಒದಗಿಸಲಿದೆ.

ದೇಶದಲ್ಲಿ ಮನರಂಜನೆಯು ಮೊಬೈಲ್‌ ಡೇಟಾ ಬಳಕೆಗೆ ಪ್ರಮುಖ ಚಾಲಕ ಶಕ್ತಿಗಳಲ್ಲಿ ಒಂದಾಗಿದೆ. ಅತ್ಯುತ್ತಮ ದರ್ಜೆಯ ಒಟಿಟಿ ಅನುಭವಕ್ಕಾಗಿ ಹೆಚ್ಚುತ್ತಿರುವ ಬೇಡಿಕೆ ಪೂರೈಸುವ ಮೂಲಕ ವಿ, ತನ್ನ ಹೊಸ ʼವಿ ಮ್ಯಾಕ್ಸ್ ಫ್ಯಾಮಿಲಿ ಪ್ಲ್ಯಾನ್ ₹ 871 ಘೋಷಿಸಿದೆ.

25

ನೆಟ್‌ಫ್ಲಿಕ್ಸ್ ಮೂಲ ಚಂದಾದಾರಿಕೆಯ ಜೊತೆಗೆ, ವಿ ಪೋಸ್ಟ್‌ಪೇಯ್ಡ್ ಬಳಕೆದಾರರು ತಮ್ಮ ಮೊಬೈಲ್ ಅಥವಾ ಟೆಲಿವಿಷನ್‌ನಲ್ಲಿ ಜಾಗತಿಕ ಗುಣಮಟ್ಟದ ಮನರಂಜನೆ ಆನಂದಿಸಲು ಸಾಧ್ಯವಾಗಲಿದೆ. ಈ ಪ್ಲ್ಯಾನ್‌ನಲ್ಲಿ ಇರುವ ಗ್ರಾಹಕರು ನೆಟ್‌ಫ್ಲಿಕ್ಸ್‌ನಿಂದ ವಿವಿಧ ಪ್ರಕಾರಗಳು ಮತ್ತು ವಿಭಾಗಗಳಲ್ಲಿ ವ್ಯಾಪಿಸಿರುವ ವೈವಿಧ್ಯಮಯ ಮನರಂಜನಾ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು. ಇದರಲ್ಲಿ ವಿಶ್ವದಾದ್ಯಂತ ಜನಪ್ರಿಯವಾಗಿರುವ ಜಾಗತಿಕ ಕಾರ್ಯಕ್ರಮಗಳಾದ ಸ್ಕ್ವಿಡ್ ಗೇಮ್, ವೆಡನ್ಸ್‌ಡೆ, ಸ್ಟ್ರೇಂಜರ್ ಥಿಂಗ್ಸ್, ಲಾಪತಾ ಲೇಡೀಸ್, ಪುಷ್ಪಾ 2, ಜವಾನ್, ಛಾವಾ, ಸಿಕಂದರ್ ಸೇರಿದಂತೆ ಇನ್ನೂ ಅನೇಕ ಚಿತ್ರ ಶೀರ್ಷಿಕೆಗಳು, ಸಿನಿಮಾ, ಪ್ರಾದೇಶಿಕ ಚಲನಚಿತ್ರಗಳು ಮತ್ತು ಕಪಿಲ್ ಶರ್ಮಾ ಷೋ, ಟೆಸ್ಟ್, ಜ್ಯುವೆಲ್ ಥೀಫ್, ದಿ ರಾಯಲ್ಸ್, ಖಾಕಿ: ದಿ ಬೆಂಗಾಲ್ ಚಾಪ್ಟರ್, ಬ್ಲ್ಯಾಕ್ ವಾರಂಟ್, ಹೀರಾಮಂಡಿ, ರಾಣಾ ನಾಯ್ಡು ಮುಂತಾದ ಸರಣಿಗಳೂ ಇದರಲ್ಲಿ ಸೇರಿವೆ.

35

ನೆಟ್‌ಫ್ಲಿಕ್ಸ್ ಜೊತೆಗೆ, ಬಳಕೆದಾರರು ಹೆಚ್ಚುವರಿಯಾಗಿ 18 ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿನ ಕಾರ್ಯಕ್ರಮಗಳನ್ನು ಸಹ ವೀಕ್ಷಿಸಬಹುದು. ಇವೆಲ್ಲವೂ ಈ ಯೋಜನೆಯಲ್ಲಿ ಸೇರಿವೆ, ಹೀಗಾಗಿ ಇದು ಸದ್ಯಕ್ಕೆ ಲಭ್ಯವಿರುವ ಅತ್ಯಂತ ಸಮಗ್ರ ಮನರಂಜನೆ ಆಧಾರಿತ ಪೋಸ್ಟ್‌ಪೇಯ್ಡ್ ಯೋಜನೆಯಾಗಿದೆ. ಕೇವಲ ₹ 871 ಬೆಲೆಯ, ವಿ ಮ್ಯಾಕ್ಸ್ ಫ್ಯಾಮಿಲಿ ಪ್ಲ್ಯಾನ್ ಪ್ರಾಥಮಿಕ ಮತ್ತು ದ್ವಿತೀಯ ಹೆಸರಿನ ಎರಡು ಸಂಪರ್ಕ ಸೌಲಭ್ಯಗಳನ್ನು ಒಳಗೊಂಡಿದೆ. ಈ ಪ್ಲ್ಯಾನ್‌ನಡಿ, ಇಬ್ಬರು ಸದಸ್ಯರ ನಡುವೆ 120ಜಿಬಿ ಮಾಸಿಕ ಡೇಟಾ ಹಂಚಿಕೊಳ್ಳುವ ದೇಶಿ ದೂರಸಂಪರ್ಕ ಉದ್ಯಮದಲ್ಲಿಯೇ ಅತ್ಯಧಿಕ ಪ್ರಮಾಣದ ಡೇಟಾ ಕೋಟಾವನ್ನು ವಿ- ನೀಡುತ್ತದೆ.

45

ಪ್ರಾಥಮಿಕ ಸದಸ್ಯರಿಗೆ 70ಜಿಬಿ, ದ್ವಿತೀಯ ಸದಸ್ಯರಿಗೆ 40ಜಿಬಿ ಮತ್ತು ಪರಸ್ಪರ ಹಂಚಿಕೊಳ್ಳುವ 10ಜಿಬಿ ಡೇಟಾ ದೊರೆಯಲಿದೆ. ಈ ಬೆಲೆ ಶ್ರೇಣಿಯಲ್ಲಿನ ಈ ಕೊಡುಗೆಯು ಉದ್ಯಮದಲ್ಲಿನ ಅತಿದೊಡ್ಡ ಡೇಟಾ ಕೊಡುಗೆಯಾಗಿದೆ. ಇದಲ್ಲದೆ, ಅನಿಯಮಿತ ರಾತ್ರಿ ಡೇಟಾ (ಬೆಳಿಗ್ಗೆ 12 ರಿಂದ ಬೆಳಿಗ್ಗೆ 6 ರವರೆಗೆ) ಮತ್ತು 400ಜಿಬಿ ವರೆಗೆ ಮುಂದಿನ ತಿಂಗಳಿಗೆ ಡೇಟಾ ಮುಂದುವರೆಸಿಕೊಂಡು ಹೋಗುವ (ಪ್ರತಿ ಸದಸ್ಯರಿಗೆ 200ಜಿಬಿ) ಸೌಲಭ್ಯ ನೀಡುವ ಏಕೈಕ ದೂರಸಂಪರ್ಕ ಸೇವಾ ಸಂಸ್ಥೆ ವಿ ಆಗಿದೆ. ಇದು ಯಾವುದೇ ಆತಂಕ / ಚಿಂತೆ ಇಲ್ಲದೆ ಡೇಟಾ ಅನುಭವವನ್ನು ಖಚಿತಪಡಿಸುತ್ತದೆ.

55

ಇತ್ತೀಚೆಗೆ ಬೆಂಗಳೂರು, ಮುಂಬೈ, ದೆಹಲಿ-ಎನ್‌ಸಿಆರ್‌, ಪಾಟ್ನಾ ಮತ್ತು ಚಂಡೀಗಢನಲ್ಲಿ ಪರಿಚಯಿಸಲಾದ 5ಜಿ ಹ್ಯಾಂಡ್‌ಸೆಟ್‌ಗಳಲ್ಲಿ ಗ್ರಾಹಕರಿಗೆ ಅನಿಯಮಿತ 5ಜಿ ಡೇಟಾದ ನಿರಂತರ ಕೊಡುಗೆಯು ಮನರಂಜನೆಯ ಅನುಭವವನ್ನು ಮತ್ತಷ್ಟು ಹೆಚ್ಚಿಸಲಿದೆ. ಕಂಪನಿಯು ಈ ವರ್ಷದ ಆಗಸ್ಟ್ ವೇಳೆಗೆ 5ಜಿ ತರಂಗಾಂತರಗಳನ್ನು ಸ್ವಾಧೀನಪಡಿಸಿಕೊಂಡಿರುವ ಎಲ್ಲಾ 17 ಆದ್ಯತಾ ವಲಯಗಳಲ್ಲಿ 5ಜಿ ಅನ್ನು ಜಾರಿಗೆ ತರಲಿದೆ. ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಮನರಂಜನೆ, ಪ್ರಯಾಣ ಮತ್ತು ಮೊಬೈಲ್ ಸುರಕ್ಷತೆ ವಿಷಯಗಳಲ್ಲಿ ತಮ್ಮ ಆದ್ಯತೆಯ ಪ್ರಯೋಜನಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನೀಡುವ ದೇಶಿ ದೂರಸಂಪರ್ಕ ವಲಯದಲ್ಲಿಯೇ ಮೊದಲ ಸೌಲಭ್ಯವಾಗಿರುವ 'ಚಾಯ್ಸ್' ಪ್ರತಿಪಾದನೆಯಡಿಯಲ್ಲಿ, ಈ ಯೋಜನೆಯು ಎರಡು 'ಚಾಯ್ಸ್' ಪ್ರಯೋಜನಗಳನ್ನು ನೀಡುತ್ತದೆ.

Read more Photos on
click me!

Recommended Stories