ತೀರ ಕಡಿಮೆ ಬಜೆಟ್‌ನಲ್ಲಿ ಮನೆಯಿಂದಲೇ ವ್ಯಾಪಾರ ಮಾಡಿ ಹಣ ಮಾಡೋದಿಕ್ಕೆ ಬೆಸ್ಟ್‌ ಐಡಿಯಾಗಳು ಇಲ್ಲಿವೆ!

Published : May 07, 2025, 09:36 PM ISTUpdated : May 08, 2025, 10:53 AM IST

ಕೆಲವರು ಮನೆಯಿಂದಲೇ ಏನಾದರೂ ಉದೈೋಗ ಮಾಡಬೇಕು ಎಂದುಕೊಂಡಿರುತ್ತಾರೆ. ಹಾಗಾದರೆ ನಿಮಗೆ ಮನೆಯಲ್ಲಿ ಕುಳಿತು ವ್ಯಾಪಾರ ಮಾಡಬೇಕೆಂಬ ಆಸೆಯಿದೆಯೇ? ಅದಕ್ಕೆ ಏನಾದರೂ ಉತ್ತಮ ಐಡಿಯಾ ಬೇಕು ಅಲ್ಲವೇ?. ಮನೆಯಿಂದಲೇ ಮಾಡಬಹುದಾದ ಅದ್ಭುತ ವ್ಯಾಪಾರ ಐಡಿಯಾಗಳು ಇಲ್ಲಿವೆ. ಹಾಗಾದರೆ ಆ ಐಡಿಯಾಗಳು ಯಾವುವು?   

PREV
15
ತೀರ ಕಡಿಮೆ ಬಜೆಟ್‌ನಲ್ಲಿ ಮನೆಯಿಂದಲೇ ವ್ಯಾಪಾರ ಮಾಡಿ ಹಣ ಮಾಡೋದಿಕ್ಕೆ ಬೆಸ್ಟ್‌ ಐಡಿಯಾಗಳು ಇಲ್ಲಿವೆ!

ಡಿಜಿಟಲ್ ತಂತ್ರಜ್ಞಾನ ಬಳಸಿ ಇಂದು ಕಡಿಮೆ ಬಂಡವಾಳದಲ್ಲಿ ಮನೆಯಿಂದಲೇ ವ್ಯಾಪಾರ ಆರಂಭಿಸಲು ಇಂದಿನ ಯುವಕರು ಉತ್ಸುಕರಾಗಿದ್ದಾರೆ. ಕೆಲವರು ಈಗಾಗಲೇ ಯಶಸ್ವಿ ವ್ಯಾಪಾರಗಳನ್ನು ನಡೆಸುತ್ತಿದ್ದಾರೆ. ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನುಭವ ಹಂಚಿಕೊಳ್ಳುತ್ತಾರೆ. ಅಂತಹ ಯಶಸ್ವಿ ಉದ್ಯಮಿಗಳ ಯೋಜನೆಗಳು ಇಲ್ಲಿವೆ. 

25

1. ಫ್ರೀಲ್ಯಾನ್ಸ್ ಸೇವೆಗಳು

2025ರಲ್ಲಿ ಫ್ರೀಲ್ಯಾನ್ಸ್ ಸೇವೆಗಳು ಬಹಳ ಜನಪ್ರಿಯವಾಗಿವೆ. ಮನೆಯಿಂದಲೇ, ಕಂಟೆಂಟ್ ರೈಟಿಂಗ್, ಗ್ರಾಫಿಕ್ ಡಿಸೈನ್, ವೆಬ್ ಡೆವಲಪ್‌ಮೆಂಟ್, ಡಿಜಿಟಲ್ ಮಾರ್ಕೆಟಿಂಗ್, ವರ್ಚುವಲ್ ಅಸಿಸ್ಟೆನ್ಸ್ ಸೇವೆಗಳು ಬೇಡಿಕೆಯಲ್ಲಿವೆ.

35

2. ತರಬೇತಿ ಮತ್ತು ಸಲಹಾ ಸೇವೆಗಳು

ನೀವು ಬೋಧನಾ ಪ್ರತಿಭೆಯುಳ್ಳವರಾಗಿದ್ದರೆ, ಆನ್‌ಲೈನ್‌ನಲ್ಲಿ ವೃತ್ತಿ, ಜೀವನ ತರಬೇತಿ, ವ್ಯಾಪಾರ ಸಲಹೆ, ಆರೋಗ್ಯ, ಫಿಟ್‌ನೆಸ್, ಪೌಷ್ಟಿಕಾಂಶ ತರಬೇತಿ ಸೇವೆಗಳನ್ನು ಆರಂಭಿಸಬಹುದು.

3. ವಿಷಯ ಸೃಷ್ಟಿ
ನೀವು ಉತ್ತಮ ಸೃಷ್ಟಿಕರ್ತರಾಗಿದ್ದರೆ, YouTube ಚಾನೆಲ್, ಪಾಡ್‌ಕ್ಯಾಸ್ಟಿಂಗ್, ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್, ಬ್ಲಾಗಿಂಗ್ ಮೂಲಕ‌ ಕೂಡ ನಾವು ಆದಾಯ ಗಳಿಸಬಹುದು.

45

4. ಮನೆ ಆಧಾರಿತ ಆಹಾರ ವ್ಯಾಪಾರ

ಆನ್‌ಲೈನ್ ಆಹಾರಕ್ಕೆ ಬೇಡಿಕೆ ಹೆಚ್ಚುತ್ತಿದೆ. ಕ್ಲೌಡ್ ಕಿಚನ್, ಟಿಫನ್ ಸೇವೆಗಳು, ಮನೆಯಲ್ಲಿ ತಯಾರಿಸಿದ ಉಪ್ಪಿನಕಾಯಿ, ತಿಂಡಿಗಳು, ಬೇಕರಿ ವಸ್ತುಗಳು, ಅಡುಗೆ ತರಗತಿಗಳು ಅಥವಾ ಪಾಕವಿಧಾನ ಇ-ಪುಸ್ತಕಗಳಂತಹ ಆನ್‌ಲೈನ್ ಸೇವೆಗಳನ್ನು ನೀಡಬಹುದು.

5. ಆನ್‌ಲೈನ್ ಶಿಕ್ಷಣ

ಈಗ ಆನ್‌ಲೈನ್‌ನಲ್ಲಿಯೇ ಬೋಧನಾ ಸೇವೆಗಳನ್ನು ನೀಡಲಾಗುತ್ತಿದೆ. ಆನ್‌ಲೈನ್‌ನಲ್ಲಿ ಪಾಠ ಮಾಡುವುದು, ಕೋಡಿಂಗ್, ಸಂಗೀತ, ಭಾಷಾ ಬೋಧನೆಯಂತಹ ಕೋರ್ಸ್‌ಗಳನ್ನು ಮುಂಚಿತವಾಗಿ ತಯಾರಿಸಿ ಆನ್‌ಲೈನ್‌ನಲ್ಲಿ ಮಾರಾಟ ಮಾಡಬಹುದು. 

55

6. ಆನ್‌ಲೈನ್ ಮಾರಾಟ

Shopify, Amazon, Meesho, Flipkart ನಂತಹ ಆನ್‌ಲೈನ್ ವೇದಿಕೆಗಳನ್ನು ಬಳಸಿಕೊಂಡು ಮನೆಯಿಂದಲೇ ವ್ಯಾಪಾರ ಮಾಡಬಹುದು. ಟೀ ಶರ್ಟ್‌ಗಳನ್ನು ಮುದ್ರಿಸುವುದು, ವಿನ್ಯಾಸಗೊಳಿಸುವುದು ಮತ್ತು ಆನ್‌ಲೈನ್‌ನಲ್ಲಿ ಮಾರಾಟ ಮಾಡಬಹುದು. ಕರಕುಶಲ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಬಹುದು.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories