ಕರ್ನಾಟಕದ ಟಾಪ್ 5 ಆಗರ್ಭ ಶ್ರೀಮಂತರು ಯಾರು ಗೊತ್ತಾ?

Published : Jan 20, 2025, 02:07 PM ISTUpdated : Jan 20, 2025, 02:22 PM IST

ಕರ್ನಾಟಕದ ಅತ್ಯಂತ ಶ್ರೀಮಂತ ವ್ಯಕ್ತಿಗಳು ಯಾರು ಅನ್ನೋದು ನಿಮಗೆ ಗೊತ್ತಿದ್ಯಾ? ಇಲ್ಲ ಅಂದ್ರೆ ಈ ಮಾಹಿತಿ ನಿಮಗೆ ಖಂಡಿತವಾಗಿಯೂ ಸಹಾಯ ಮಾಡುತ್ತೆ. ಇಲ್ಲಿದೆ ನೋಡಿ ಕರ್ನಾಟಕದ ಟಾಪ್ 5 ಶ್ರೀಮಂತರ ಲಿಸ್ಟ್.   

PREV
16
ಕರ್ನಾಟಕದ ಟಾಪ್ 5 ಆಗರ್ಭ ಶ್ರೀಮಂತರು ಯಾರು ಗೊತ್ತಾ?

ಭಾರತದ ಸಿಲಿಕಾನ್ ವ್ಯಾಲಿ ಬೆಂಗಳೂರು ಸ್ಟಾರ್ಟ್ ಅಪ್ ಗಳ ಭದ್ರಕೋಟೆಯಾಗುತ್ತಿದೆ. ಐಟಿ ಕಂಪನಿಗಳು, ಮಲ್ಟಿ ನ್ಯಾಷನಲ್ ಕಂಪನಿಗಳು ಸೇರಿ ಹಲವಾರು ಕಂಪನಿಗಳಿಗೆ ನೆಲೆ ನೀಡಿದ ತಾಣ ಬೆಂಗಳೂರು. ದೇಶದ ಅನೇಕ ದೊಡ್ಡ ಕೈಗಾರಿಕೋದ್ಯಮಿಗಳು ಈ ಟೆಕ್ ಸಿಟಿಯಲ್ಲಿ ವಾಸಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ವಾಸಿಸುವ ಟಾಪ್ 5 ಶ್ರೀಮಂತ ವ್ಯಕ್ತಿಗಳು (Top 5 richest personalities) ಯಾರು ಅನ್ನೋದನ್ನು ನೋಡೋಣ. 
 

26

1.ಅಜಿಮ್ ಪ್ರೇಮ್‍ಜಿ (Azim Premji)
ಹುರುನ್ ಇಂಡಿಯಾ ರಿಚ್ ಲಿಸ್ಟ್ 2024 ರ ಅಂಕಿ ಅಂಶಗಳ ಪ್ರಕಾರ, ವಿಪ್ರೋ ಮಾಜಿ ಅಧ್ಯಕ್ಷ ಅಜೀಂ ಪ್ರೇಮ್‍ಜಿ ಅವರ ಸಂಪತ್ತು ಬರೋಬ್ಬರಿ 1,90,700 ಕೋಟಿ ರೂ. ಆಗಿದೆ. ಅಜಿಮ್ ಪ್ರೇಮ್ಜಿ ಕರ್ನಾಟಕದ ಅತ್ಯಂತ ಶ್ರೀಮಂತ ವ್ಯಕ್ತಿ. ಇವರು ಕೊಡುಗೈ ದಾನಿ ಕೂಡ ಆಗಿದ್ದು, ತಮ್ಮ ಸಂಸ್ಥೆಯ ಮೂಲಕ ಹಲವಾರು ರೀತಿಯಲ್ಲಿ ಶಿಕ್ಷಣ ಸೇರಿ ಹಲವು ಸಂಸ್ಥೆಗಳಿಗೆ ದೇಣಿಗೆ ಕೂಡ ನೀಡುತ್ತಿದ್ದಾರೆ. 

36

2.ಇರ್ಫಾನ್ ರಜಾಕ್ (Irfan Razack)
ಪ್ರೆಸ್ಟೀಜ್ ಎಸ್ಟೇಟ್ಸ್ ಪ್ರಾಜೆಕ್ಟ್ಸ್ನ ವ್ಯವಸ್ಥಾಪಕ ನಿರ್ದೇಶಕ ಇರ್ಫಾನ್ ರಜಾಕ್ ಅವರ ಆಸ್ತಿ 43,600 ಕೋಟಿ ರೂ ಆಗಿದೆ. ಇವರು ಬೆಂಗಳೂರಿನಲ್ಲಿ ನೆಲೆಸಿರುವ ಭಾರತದ ಬಿಲೇನಿಯರ್ ಉದ್ಯಮಿ. ಫೋರ್ಬ್ಸ್ ಭಾರತದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಇರ್ಫಾನ್ ರಜಾಕ್ ಹೆಸರು 49ನೇ ಸ್ಥಾನದಲ್ಲಿದೆ. 

46

3. ನಿತಿನ್ ಕಾಮತ್ (Nithin Kamath)
ಜೆರೋಧಾ ಸಿಇಒ ನಿತಿನ್ ಕಾಮತ್ ಕೂಡ 41,000 ಕೋಟಿ ರೂ.ಗಳ ಸಂಪತ್ತಿನೊಂದಿಗೆ ಕರ್ನಾಟಕದ ಶ್ರೀಮಂತ ವ್ಯಕ್ತಿಗಳ ಲಿಸ್ಟ್ ನಲ್ಲಿ 3 ಸ್ಥಾನದಲ್ಲಿದ್ದಾರೆ. ನಿಖಿಲ್ ಕಾಮತ್ 2010ರಲ್ಲಿ ತಮ್ಮ ಸಹೋದರನ ಜೊತೆ ಸೇರಿ ಡಿಸ್ಕೌಂಟ್ ಬ್ರೋಕರೇಜ್ ಝೆರೋದಾವನ್ನು ಸ್ಥಾಪಿಸಿದರು. ಇಂದು ಈ ಸಂಸ್ಥೆಯ ಮೂಲಕ ನಿತಿನ್ ಕಾಮತ್ ಕರ್ನಾಟಕದ ಆಗರ್ಭ ಶ್ರಿಮಂತರ ಪಟ್ಟಿಗೆ ಸೇರಿದ್ದಾರೆ. 

56

4. ಸೇನಾಪತಿ ಗೋಪಾಲಕೃಷ್ಣನ್ (Kris Gopalakrishnan)
ಇನ್ಫೋಸಿಸ್ ಸಹ ಸಂಸ್ಥಾಪಕ ಎಸ್ ಗೋಪಾಲಕೃಷ್ಣನ್ 38,500 ಕೋಟಿ ರೂ.ಗಳ ಸಂಪತ್ತಿನೊಂದಿಗೆ ಕರ್ನಾಟಕದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇವರು ಭಾರತೀಯ ಉದ್ಯಮಿ ಮತ್ತು ಸ್ಟಾರ್ಟ್ಅಪ್ ಆಕ್ಸಿಲರೇಟರ್ ಆಕ್ಸಿಲರ್ ವೆಂಚರ್ಸ್ನ ಅಧ್ಯಕ್ಷರು ಕೂಡ ಆಗಿದ್ದಾರೆ. 

66

5. ಎನ್.ಆರ್ ನಾರಾಯಣ ಮೂರ್ತಿ (N.R Narayana Murthy)
ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಅವರ ಆಸ್ತಿ 36,600 ಕೋಟಿ ರೂ. ಆಗಿದ್ದು, ಇವರು ಕರ್ನಾಟಕದ ಶ್ರೀಮಂತರ ಲಿಸ್ಟ್ ನಲ್ಲಿ ಐದನೇ ಸ್ಥಾನವನ್ನು ಪಡೆದಿದ್ದಾರೆ. ಸುಮಾರು ಇಪ್ಪತ್ತು ವರ್ಷಗಳ ಕಾಲ ಆ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ನಿರ್ವಹಿಸಿದ ಇವರು, ಈಗ ಇನ್ಫೋಸಿಸ್ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ, ಹಾಗು ಹಿತಚಿಂತಕ ಅಧಿಕಾರಿಯಾಗಿದ್ದಾರೆ.

Read more Photos on
click me!

Recommended Stories