ಕಳೆದ ವರ್ಷ ವಿಶ್ವದ 50ರ ಪಟ್ಟಿಯಲ್ಲಿ ಒಬ್ಬರಾಗಿದ್ದ ಎಲೋನ್ ಮಸ್ಕ್ ಇಂದು ವಿಶ್ವದ ಮೊದಲ ಸಿರಿವಂತ ಎಂಬ ಪಟ್ಟಕ್ಕೆ ಏರಿದ್ದು ರೋಚಕ.
ಟೆಸ್ಲಾ ಹಾಗೂ ಸ್ಪೇಸ್ ಎಕ್ಸ್ ಕಂಪನಿಗೆ ಸಂಬಂಧಿಸಿದಂತೆ ಮಸ್ಕ್ ತೆಗೆದುಕೊಂಡು ಕೆಲವು ನಿರ್ದಾರಗಳು ಇವರ ಆಸ್ತಿ ಮೌಲ್ಯ ಹೆಚ್ಚುವಂತೆ ಮಾಡಿದೆ.
ಮಾರುಕಟ್ಟೆಯಲ್ಲಿ ಟೆಸ್ಲಾ ಶೇರುಗಳ ಮೌಲ್ಯ ದಿಢೀರ್ ಏರಿಕೆಯಾದ ಪರಿಣಾಮ ಮಸ್ಕ್ ಅಮೇಜಾನ್ ಮಾಲೀಕ ಜೆಫ್ ಬೆಜೋಜ್ ಅವರನ್ನು ಹಿಂದಿಕ್ಕೆ ನಂ.1 ಸಿರಿವಂತ ಸ್ಥಾನಕ್ಕೆ ಏರಿದ್ದಾರೆ.
ಜೆಫ್ ಬೆಜೋಜ್ 2017ರಿಂದಲೂ ಸಿರಿವಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರು. ಇದೀಗ 45 ವಯಸ್ಸಿನ ಎಲಾನ್ ಈ ಸ್ಥಾನವನ್ನು ಏರಿದ್ದಾರೆ. ಜೀವನದಲ್ಲಿ ಗುರಿ ಇದ್ದರೆ ಸಾಕು, ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಟೆಸ್ಲಾ ಕಂಪನಿಯ ಶೇರು ಮಾರುಕಟ್ಟೆಯಲ್ಲಿ ದಿಢೀರ್ ಸದ್ದು ಮಾಡಲು ಆರಂಭಿಸಿದ್ದರಿಂದ ಮಸ್ಕ್ ಆಸ್ತಿ ಮೌಲ್ಯ 185 ಬಿಲಿಯನ್ ಡಾಲರ್‌ನಷ್ಟಾಗಿದೆ.
ಎಲೆಕ್ಟ್ಕಿಕ್ ಕಾರುಗಳು, ಭವಿಷ್ಯದ ದೃಷ್ಟಿಯನ್ನುಕೊಂಡು ಕಾರುಗಳ ರಚನೆ, ಉತ್ಪಾದನೆಗೆ ಸಂಬಂಧಿಸಿದಂತೆ ಮಸ್ಕ್ ತೆಗೆದುಕೊಂಡ ನಿರ್ಧಾರಗಳು ಅವರನ್ನು ಈ ಮಟ್ಟಕ್ಕೆ ಕೊಂಡೋಯ್ದಿದೆ.
ಕೊರೋನಾ ಸೋಂಕಿನಿಂದ ಎಲ್ಲರ ಆಸ್ತಿ ಮೌಲ್ಯ ಕುಸಿದಿದೆ. ಆದರೆ, ಮಸ್ಕ್ ಮಾತ್ರ 2020ರಲ್ಲಿ ತಮ್ಮ ನಿವ್ವಳ ಆಸ್ತಿಯ ಮೌಲ್ಯವನ್ನು 100.3 ಶತಕೋಟಿ ಸೇರಿಸಿದ್ದಾರೆ.
ಸ್ಪೇಸ್ ಸಾಧನಗಳನ್ನು ತರಯಾರಿಸು ಸ್ಪೇಸ್ ಎಕ್ಸ್ ಮುಖ್ಯಸ್ಥರೂ ಹೌದು ಮಸ್ಕ್.. ಕೈಯಲ್ಲಿ ಸ್ವಲ್ಪ ಹಣವಿದ್ದರೂ ಸಿಕ್ಕರೂ ಫಾರಿನ್ ಟ್ರಿಪ್ ಹೋದ ಹಾಗೆ ಸ್ಪೇಸ್ ಟೂರ್ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟವರು ಇವರು.
ಅಮೇಜಾನ್ ಮುಖ್ಯಸ್ಥ ಜೆಫ್ ಬೆಜೋಜ್ ಆಸ್ತಿ ಮೌಲ್ಯ 184 ಬಿಲಿಯನ್ ಡಾಲರ್‌ನಷ್ಟಿದೆ. ಇದೀಗ ಅವರನ್ನು ಹಿಂದಿಕ್ಕಿದ ಸ್ಪೆಸ್ ಎಕ್ಸ್ ಮುಖ್ಯಸ್ಥ ಎಲನ್ ಮಸ್ಕ್ ವಿಶ್ವದ ಸಿರಿವಂತರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ.
ಎಲೆನ್ ಮಸ್ಕ್ ಆಸ್ತಿ ಮೌಲ್ಯ ತಿಂಗಳಿಗೆ ಸರಾಸರಿ 11.6 ಬಿಲಿಯನ್ ಡಾಲರ್‌ನಷ್ಟು ಹೆಚ್ಚಾಗುತ್ತಿರುವುದು ಮಾತ್ರ ಆಶ್ಚರ್ಯ. ಮಾರ್ಚ್ 2021ರಲ್ಲಿ ವಿಶ್ವದ ಸಿರಿವಂತನಾಗುವ ನಿರೀಕ್ಷೆ ಇತ್ತು. ಆದರೆ, ಜನವರಿಯಲ್ಲಿಯೇ ಆ ಗುರಿ ಮುಟ್ಟಿವಲ್ಲಿ ಇವರು ಯಶಸ್ವಿಯಾಗಿದ್ದಾರೆ.