ಹಣಕಾಸು ವರ್ಷ ಆರಂಭಗೊಳ್ಳುತ್ತಿದೆ. ಈಗಾಗಲೇ ಕೇಂದ್ರ ಹಣಕಾಸು ಇಲಾಖೆ ಆರ್‌ಬಿಐ ಸೂಚನೆಯಂತೆ ಎಲ್ಲಾ ಬ್ಯಾಂಕ್ ಹಾಗೂ ಉಳಿತಾಯ ಖಾತೆ ಯೋಜನೆಗಳಿಗೆ ಅಧಿಸೂಚನೆ ಹೊರಡಿಸಿದೆ. ಮುಂದಿನ ಏಪ್ರಿಲ್ ನಿಂದ ಜೂನ್ ವರಿಗೆ ಕ್ವಾರ್ಟರ್‌ನಲ್ಲಿ ಸಣ್ಣ ಉಳಿತಾಯ ಖಾಚೆಗಳ ಬಡ್ಡಿದರ, ಶುಲ್ಕ ಸೇರಿದಂತೆ ಇತರ ಮಾಹಿತಿಗಳನ್ನು ಈ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಿದೆ. ಈ ಹಿನ್ನಲೆಯಲ್ಲಿ ಎಪ್ರಿಲ್ 1 ರಿಂದ ಪೋಸ್ಟ್ ಆಫೀಸ್‌ನಲ್ಲಿನ 11 ಜನಪ್ರಿಯ ಉಳಿತಾಯ ಯೋಜನೆಗಳ ಬಡ್ಡಿ ದರ ವಿವರ ಇಲ್ಲಿದೆ.
ಉಳಿತಾಯ ಯೋಜನೆ, ಸುರಕ್ಷಿತ ಹೂಡಿಕೆಗೆ ಪೋಸ್ಟ್ ಅಫೀಸ್‌ಗೆ ಮೊದಲ ಸ್ಥಾನ. ಜನರು ಯಾವುದೇ ಆತಂಕವಿಲ್ಲದೆ ಪೋಸ್ಟ್ ಅಫೀಸ್ ಮೂಲಕ ಹೂಡಿಕೆ ಮಾಡಬದುದು. ಅತೀ ಸಣ್ಣ ಮೊತ್ತದಿಂದ ಹೂಡಿಕೆ ಆರಂಭಿಸುವ ಅವಕಾಶವನ್ನು ಪೋಸ್ಟ್ ಅಫೀಸ್ ನೀಡಲಿದೆ.ಈ ಪೈಕಿ ಸುಕನ್ಯ ಸಮೃದ್ಧಿ, ಪಿಪಿಎಫ್, ಕೆವಿಪಿ ಸೇರಿದಂತೆ ಹಲವು ಯೋಜನೆಗಳು ಪ್ರಮುಖ. ಇದೀಗ ಏಪ್ರಿಲ್ 1 ರಿಂದ ಈ ಯೋಜನೆಗಳ ಬಡ್ಡಿ ದರದಲ್ಲಿ ಬದಲಾವಣೆ ಇದೆಯಾ?
ಪೋಸ್ಟ್ ಆಫೀಸ್ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಲ್ಲಿ ಕೇಂದ್ರ ಸರ್ಕಾರ ಯಾವುದೇ ಬದಲಾವಣೆ ಮಾಡಿಲ್ಲ. ಹೀಗಾಗಿ ಸಣ್ಣ ಉಳಿತಾಯ ಯೋಜನೆಗಳ ಯಥಾ ಪ್ರಕಾರ ಇರಲಿದೆ. ಇನ್ನು ಸುಕನ್ಯ ಸಮೃದ್ಧಿ ಯೋಜನೆ ಬಡ್ಡಿ ದರ 5ನೇ ಕ್ವಾರ್ಟರ್‌ನಲ್ಲೂ ಬದಲಾವಣೆ ಮಾಡಿಲ್ಲ.
ಪೋಸ್ಟ್ ಆಫೀಸ್ ಉಳಿತಾ ಯೋಜನೆಯ ಬಡ್ಡಿ ದರ ಶೇಕಡಾ 4 (ವಾರ್ಷಿಕ)
1 ವರ್ಷದ ಹೂಡಿಕೆ ಬಡ್ಡಿದರ ಶೇಕಡಾ 6.9 ವಾರ್ಷಿಕ ಬಡ್ಡಿ₹10,000ಕ್ಕ ₹708 ರೂ( ಕ್ವಾರ್ಟರ್ಲಿ)
2 ವರ್ಷದ ಹೂಡಿಕೆ ಬಡ್ಡಿದರ ಶೇಕಡಾ 7.0 ವಾರ್ಷಿಕ ಬಡ್ಡಿ₹10,000ಕ್ಕ ₹719 ರೂ( ಕ್ವಾರ್ಟರ್ಲಿ)
3 ವರ್ಷದ ಹೂಡಿಕೆ ಬಡ್ಡಿದರ ಶೇಕಡಾ 7.1 ವಾರ್ಷಿಕ ಬಡ್ಡಿ₹10,000ಕ್ಕ ₹719ರೂ( ಕ್ವಾರ್ಟರ್ಲಿ)
5 ವರ್ಷದ ಹೂಡಿಕೆ ಬಡ್ಡಿದರ ಶೇಕಡಾ 7.5ವಾರ್ಷಿಕ ಬಡ್ಡಿ₹10,000ಕ್ಕ ₹771 ರೂ( ಕ್ವಾರ್ಟರ್ಲಿ)
5 ವರ್ಷದ ರಿಕರಿಂಕ್ ಡೆಪಾಸಿಟ್(ಆರ್‌ಡಿ ಯೋಜನೆ) ಬಡ್ಡಿದರ ಶೇಕಡಾ 6.7 (ಕ್ವಾರ್ಟರ್ಲಿ)
ಹಿರಿಯ ನಾಗರೀಕರ ಉಳಿತಾಯ ಯೋಜನೆ ಬಡ್ಡಿ ಬದರ ಶೇಕಡಾ 8.2) ಕ್ವಾರ್ಟರ್ಲಿ ಬಡ್ಡಿದರ 10,000 ರೂಗೆ 205 ರೂ)
ತಿಂಗಳ ಆದಾಯ ಖಾತೆ ಬಡ್ಡಿದರ ಶೇಕಡಾ 7.4 ( ತಿಂಗಳ ಬಡ್ಡಿರ ದರ 10,000 ರೂಗೆ 62)
ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್(VIII) ಬಡ್ಡಿದರ ಶೇಕಡಾ 7.7 (10,000 ರೂ ಮೆಚ್ಯುರಿಟಿ ವ್ಯಾಲ್ಯೂ 14,490 ರೂ)
ಪಬ್ಲಿಕ್ ಪ್ರೊವಿಡೆಂಟ್ ಫಂಡ್ ಯೋಜನೆ ಬಡ್ಡಿದರ ಶೇಕಡಾ 7.1 ವಾರ್ಷಿಕ
ಕಿಸಾನ್ ವಿಕಾಸ್ ಪತ್ರ ಬಡ್ಡಿದರ ಶೇಕಡಾ 7.5 (ಮೆಚ್ಯೂರಿಟಿ ಅವಧಿ 115 ತಿಂಗಳು( ವಾರ್ಷಿಕ)
ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ ಬಡ್ಡಿದರ ಶೇಕಡಾ 7.5( ಮೆಚ್ಯೂರಿಟಿ ಮೊತ್ತ 10,000 ರೂಗೆ 11,602) ಕ್ವಾರ್ಟರ್ಲಿ
ಸುಕನ್ಯ ಸಮೃದ್ಧಿ ಖಾತೆ ಯೋದನೆ ಬಡ್ಡಿದರ ಶೇಕಡಾ 8.2 (ವಾರ್ಷಿಕ)
ಸೂಚನೆ: ಹತ್ತಿರದ ಪೋಸ್ಟ್ ಅಫೀಸ್ ಶಾಖೆಯಲ್ಲಿ ಬಡ್ಡಿದರ ಕುರಿತು ಹೆಚ್ಚಿನ ಮಾಹಿತಿ ಖಚಿತಪಡಿಸಿಕೊಳ್ಳಿ