ಇತ್ತೀಚಿಗೆ ಅಂಬಾನಿ ಬಿಸಿನೆಸ್ ಬಡವಾಯ್ತಾ ಅನ್ನೋ ಪ್ರಶ್ನೆ ಎದುರಾಗಿದೆ. ಯಾಕೆಂದರೆ, ಅಂಬಾನಿ ಒಡೆತನದ ಕಂಪೆನಿಯ ಉದ್ಯೋಗಿಗಳಿಗೆ ಮೂರು ತಿಂಗಳಿಂದ ಸ್ಯಾಲರೀನೆ ಕೊಟ್ಟಿಲ್ಲ ಅನ್ನೋ ಸುದ್ದಿ ಈ ಹಿಂದೆ ಕೇಳಿಬಂದಿತ್ತು. ಸದ್ಯ, ಸಂಸ್ಥೆಯ ಪ್ರಮುಖ ಸ್ಥಾನದಲ್ಲಿರುವ ಅಧಿಕಾರಿಯೊಬ್ಬರು ರಾಜೀನಾಮೆ ನೀಡಿರೋದ್ರಿಂದ ಈ ವಿವಾದ ನಿಜ ಎನ್ನಲಾಗ್ತಿದೆ.
ಭಾರತದ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಮೊದಲ ಸ್ಥಾನದಲ್ಲಿದ್ದಾರೆ. ಅಂಬಾನಿ ಕುಟುಂಬದ ಜೀವನಶೈಲಿ ಎಲ್ಲರನ್ನೂ ಬೆರಗುಗೊಳಿಸುವಂತಿರುತ್ತದೆ. ಅದ್ಧೂರಿ ಕಾರ್ಯಕ್ರಮಗಳು, ಕಾಸ್ಟ್ಲೀ ಕಾರುಗಳು, ಲಕ್ಷ ಲಕ್ಷ ವ್ಯಯಿಸಿ ತಯಾರಿಸುವ ಉಡುಗೆಗಳು, ಹ್ಯಾಂಡ್ ಬ್ಯಾಗ್ಸ್‌ಗೆ ಎಲ್ಲರಲ್ಲೂ ಅಚ್ಚರಿ ಮೂಡಿಸುತ್ತದೆ.
ಹಲವಾರು ಶಿಕ್ಷಣ ಸಂಸ್ಥೆಗಳು, ಟಿವಿ ಮಾಧ್ಯಮಗಳು, ಬ್ರ್ಯಾಂಡ್‌ಗಳು ಅಂಬಾನಿ ಒಡೆತನದಲ್ಲಿವೆ. ತಿಂಗಳೊಂದಕ್ಕೆ ಕೋಟಿ ಕೋಟಿ ವ್ಯವಹಾರ ನಡೆಸುತ್ತವೆ.
ಆದ್ರೆ ಇತ್ತೀಚಿಗೆ ಅಂಬಾನಿ ಬಿಸಿನೆಸ್ ಬಡವಾಯ್ತಾ ಅನ್ನೋ ಪ್ರಶ್ನೆ ಎದುರಾಗಿದೆ. ಯಾಕೆಂದರೆ, ಮುಕೇಶ್ ಅಂಬಾನಿ, ಇಶಾ ಅಂಬಾನಿ ಸ್ಟಾರ್ಟ್‌ಅಪ್‌ಗೆ ಮತ್ತೆ ಸಂಬಳ ನೀಡಲು ಸಾಧ್ಯವಾಗಿಲ್ಲ. ಅಂಬಾನಿ ಒಡೆತನದ ಕಂಪೆನಿಯ ಮಾಜಿ ಉದ್ಯೋಗಿಗಳಿಗೆ ಮೂರು ತಿಂಗಳಿಂದ ಸ್ಯಾಲರೀನೆ ಕೊಟ್ಟಿಲ್ಲ.
ಮುಕೇಶ್ ಅಂಬಾನಿ ಮತ್ತು ಇಶಾ ಅಂಬಾನಿ ಕ್ವಿಕ್-ಗ್ರೋಸರಿ ಡೆಲಿವರಿ ಪ್ರೊವೈಡರ್ ಡಂಜೊ, ಮಾಜಿ ಉದ್ಯೋಗಿಗಳಿಗೆ ಸ್ಯಾಲರಿ ಪಾವತಿಸಿಲ್ಲ. ಮಾಜಿ ಉದ್ಯೋಗಿಗಳ ಸಂಬಳ ಕೊಡುವುದನ್ನು ಮತ್ತೆ ವಿಳಂಬಗೊಳಿಸಲಾಗಿದೆ. ವರದಿಯ ಪ್ರಕಾರ, ಕಂಪನಿಯು ವಿಳಂಬದ ಬಗ್ಗೆ ತಿಳಿಸಲು ಮಾಜಿ ಉದ್ಯೋಗಿಗಳಿಗೆ ಕಂಪೆನಿ ಮೇಲ್ ಕಳುಹಿಸಿದೆ. ಈಗ ಅಕ್ಟೋಬರ್ ತಿಂಗಳಿನಲ್ಲಿ ಸಂಬಳವನ್ನು ಪಾವತಿಸುವುದಾಗಿ ಡಂಜೊ ಹೇಳಿಕೊಂಡಿದೆ.
ಮಾತ್ರವಲ್ಲ ಮುಕೇಶ್ ಅಂಬಾನಿ ಬೆಂಬಲಿತ ಸಂಸ್ಥೆಯಿಂದ ಪ್ರಮುಖ ನಾಯಕತ್ವದ ಸದಸ್ಯರಲ್ಲಿ ಒಬ್ಬರು ಮತ್ತು ಸಹ-ಸಂಸ್ಥಾಪಕರಾದ ದಲ್ವಿರ್ ಸೂರಿ ನಿರ್ಗಮಿಸಿದ್ದಾರೆ. ಹೀಗಾಗಿ ಅಂಬಾನಿ ಒಡೆತನದ ಸಂಸ್ಥೆ ನಗದು ಕೊರತೆಯನ್ನು ಅನುಭವಿಸುತ್ತಿದೆ ಎಂಬುದು ಸ್ಪಷ್ಟವಾಗಿದೆ.
ಡಂಜೊ ಮರ್ಚೆಂಟ್ ಸರ್ವಿಸಸ್ (ಡಿಎಂಎಸ್) ನಂತಹ ಹೊಸ ವ್ಯವಹಾರಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಡಂಜೊ ಸಹ-ಸಂಸ್ಥಾಪಕ ದಲ್ವಿರ್ ಸೂರಿ, ಸಂಸ್ಥೆಯಿಂದ ನಿರ್ಗಮಿಸಿದ್ದಾರೆ ಎಂದು ಸಿಇಒ ಕಬೀರ್ ಬಿಸ್ವಾಸ್ ಘೋಷಿಸಿದರು.
ಡಲ್ವಿರ್, ಡಂಜೊದಲ್ಲಿ ಪ್ರತಿಯೊಂದು ಹೊಸ ವ್ಯವಹಾರವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ ಸ್ಥಾಪಕ ತಂಡದ ಒಬ್ಬ ವ್ಯಕ್ತಿಗೆ ಅವರು ಶೂನ್ಯವಾಗಿದ್ದಾರೆ,' ಎಂದು ಬಿಸ್ವಾಸ್ ಎಲ್ಲಾ ಡಂಜೊ ಉದ್ಯೋಗಿಗಳಿಗೆ ಕಳುಹಿಸಿದ ಇಮೇಲ್‌ನಲ್ಲಿ ತಿಳಿಸಿದ್ದಾರೆ.
ಮುಕೇಶ್ ಅಂಬಾನಿಯವರ ಸಂಸ್ಥೆಯಾದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ನಿಂದ ಬೆಂಬಲಿತವಾಗಿರುವ ಕೆಲವೇ ಸ್ಟಾರ್ಟ್‌ಅಪ್‌ಗಳಲ್ಲಿ Dunzo ಒಂದಾಗಿದೆ. ಪ್ರಸ್ತುತ ಆರ್ಥಿಕ ಬಿಕ್ಕಟ್ಟಿನ ಸಮಸ್ಯೆಯನ್ನು ಎದುರಿಸುತ್ತಿದೆ. ವರದಿಗಳ ಪ್ರಕಾರ, ಡಂಜೊ ತನ್ನ ಉದ್ಯೋಗಿಗಳ ಸಂಬಳವನ್ನು ಪಾವತಿಸಲು ಹೆಣಗಾಡುತ್ತಿದೆ.
ಈ ವರ್ಷ ಜುಲೈ 20ರ ವರೆಗೆ ತನ್ನ ಅರ್ಧದಷ್ಟು ಉದ್ಯೋಗಿಗಳ ಸಂಬಳವನ್ನು ವಿಳಂಬಗೊಳಿಸಿದೆ. ವೆಚ್ಚ ಕಡಿತದ ಕ್ರಮಗಳ ಭಾಗವಾಗಿ, ಉನ್ನತ ಆಡಳಿತವು ವರ್ಷದ ಮೊದಲಾರ್ಧದಲ್ಲಿ 400 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಪ್ರಸ್ತುತ ಮಾರುಕಟ್ಟೆ ಬಂಡವಾಳದ ಪ್ರಕಾರ, Dunzo ಸುಮಾರು USD 800 ಮಿಲಿಯನ್ (Rs 6660 ಕೋಟಿ) ಮೌಲ್ಯದ್ದಾಗಿದೆ. ಅಂಬಾನಿ ಒಡೆತನ ಮತ್ತೊಮ್ಮೆ USD 30 ಮಿಲಿಯನ್ (Rs 249 ಕೋಟಿ) ಹಣವನ್ನು ಹಾಕಿ, ಸಂಸ್ಥೆಯಲ್ಲಿ ತನ್ನ ಪಾಲನ್ನು 25.8 ಪ್ರತಿಶತಕ್ಕೆ ಹೆಚ್ಚಿಸುವ ಸಾಧ್ಯತೆಯಿದೆ.