ಬರೀ 250 ರೂಪಾಯಿಯ ಒಳಗೆ ಸಿಗುವ ಐದು ಷೇರುಗಳಿವು, ಡಿವಿಡೆಂಡ್‌ಗೂ ಬೆಸ್ಟ್‌, ಗ್ರೋತ್‌ಗೂ ಬೆಸ್ಟ್‌!

First Published | Aug 29, 2023, 9:34 AM IST

ಅದೃಷ್ಟಲಕ್ಷ್ಮಿಯಾರಿಗೆ ಯಾವಾಗ ಒಲಿದು ಬರುತ್ತಾಳೆ ಎನ್ನುವುದನ್ನು ಹೇಳಲು ಅಸಾಧ್ಯ. ಹಣವನ್ನು ದುಪ್ಪಟ್ಟು ಮಾಡಲು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಾರೆ. ನಾವು ನಿಮಗೆ 250 ರೂ. ಒಳಗೆ ಹೂಡಿಕೆ ಮಾಡಬಹುದಾದ ಅತ್ತುತ್ತಮ ಷೇರುಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಬ್ಯಾಂಕ್ ಆಫ್ ಬರೋಡಾ ಸಾರ್ವಜನಿಕ ವಲಯದ ಬ್ಯಾಂಕ್ ಆಗಿದೆ. ಗುಜರಾತಿನ ವಡೋದರದಲ್ಲಿ ಪ್ರಧಾನ ಕಛೇರಿ ಇದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಂತರ ಇದು ಭಾರತದಲ್ಲಿ ಎರಡನೇ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್. ನೀವು ಈ ಬ್ಯಾಂಕ್‌ನಲ್ಲಿ 201 ರೂ.ಗಳ ಒಂದು ಷೇರು ಪಡೆದು ಹೂಡಿಕೆ ಮಾಡಬಹುದು. ಇದು ಮೂರು ವರ್ಷಗಳಲ್ಲಿ 319% ಲಾಭ ನೀಡಲಿದೆ.

ಕೋಲ್ ಇಂಡಿಯಾ ಲಿಮಿಟೆಡ್ ಭಾರತ ಸರ್ಕಾರದ ಕಲ್ಲಿದ್ದಲು ಸಚಿವಾಲಯದ ಮಾಲೀಕತ್ವದ ಅಡಿಯಲ್ಲಿ ಭಾರತೀಯ ಕೇಂದ್ರ ಸಾರ್ವಜನಿಕ ವಲಯದ ಉದ್ಯಮವಾಗಿದೆ. ಇದು ವಿಶ್ವದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಕಲ್ಲಿದ್ದಲು ಉತ್ಪಾದಕವಾಗಿದೆ. ನೀವು ಇಲ್ಲಿ 235 ರೂ.ಗಳ ಒಂದು ಷೇರು ಪಡೆದು ಹೂಡಿಕೆ ಮಾಡಬಹುದು. ಇದು ಮೂರು ವರ್ಷಗಳಲ್ಲಿ 81% ಲಾಭ ನೀಡಲಿದೆ.

Tap to resize

ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಶನ್ ಇದು ಒಂದು ವಿದ್ಯುತ್ ಉದ್ಯಮ. ಇದು ವಿದ್ಯುತ್ ಸಚಿವಾಲಯ ಮತ್ತು ಭಾರತ ಸರ್ಕಾರದ ಮಾಲೀಕತ್ವದ ಅಡಿಯಲ್ಲಿ ಭಾರತೀಯ ಕೇಂದ್ರ ಸಾರ್ವಜನಿಕ ವಲಯದ ಉದ್ಯಮವಾಗಿದೆ. ನೀವು ಇಲ್ಲಿ 218 ರೂ.ಗಳ ಒಂದು ಷೇರು ಪಡೆದು ಹೂಡಿಕೆ ಮಾಡಬಹುದು. ಇದು ಮೂರು ವರ್ಷಗಳಲ್ಲಿ 153% ಲಾಭ ನೀಡಲಿದೆ.

ಟಾಟಾ ಪವರ್ ಭಾರತದ ಅತಿದೊಡ್ಡ ವಿದ್ಯುತ್ ಉತ್ಪಾದನಾ ಕಂಪನಿಯಾಗಿದ್ದು, ಭಾರತದಾದ್ಯಂತ ಇರುವ ತನ್ನ ವಿವಿಧ ಸ್ಥಾವರಗಳಿಂದ ನಿರಂತರ ವಿದ್ಯುತ್ ಪೂರೈಕೆಯನ್ನು ಒದಗಿಸುತ್ತದೆ. ನೀವು ಈ ಕಂಪನಿಯಲ್ಲಿ 239 ರೂ.ಗಳ ಒಂದು ಷೇರು ಪಡೆದು ಹೂಡಿಕೆ ಮಾಡಬಹುದು. ಇದು ಮೂರು ವರ್ಷಗಳಲ್ಲಿ 380% ಲಾಭ ನೀಡಲಿದೆ.

ವೇದಾಂತ ಲಿಮಿಟೆಡ್ ಭಾರತೀಯ ಬಹುರಾಷ್ಟ್ರೀಯ ಗಣಿಗಾರಿಕೆ ಕಂಪನಿಯಾಗಿದ್ದು, ಮುಂಬೈನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ. ಗೋವಾ, ಕರ್ನಾಟಕ, ರಾಜಸ್ಥಾನ ಮತ್ತು ಒಡಿಶಾದಲ್ಲಿ ಕಬ್ಬಿಣದ ಅದಿರು, ಚಿನ್ನ ಮತ್ತು ಅಲ್ಯೂಮಿನಿಯಂ ಗಣಿಗಳಲ್ಲಿ ಅದರ ಮುಖ್ಯ ಕಾರ್ಯಾಚರಣೆಗಳನ್ನು ಹೊಂದಿದೆ. ನೀವು ಇಲ್ಲಿ 243 ರೂ.ಗಳ ಒಂದು ಷೇರು ಪಡೆದು ಹೂಡಿಕೆ ಮಾಡಬಹುದು. ಇದು ಮೂರು ವರ್ಷಗಳಲ್ಲಿ 98% ಲಾಭ ನೀಡಲಿದೆ.

Latest Videos

click me!