ಇದೇ ಮೊದಲ ಬಾರಿಗೆ ಅತೀ ದುಬಾರಿಯಾದ ಬೆಳ್ಳಿ, ಚಿನ್ನಕ್ಕಿಂತ ವೇಗದಲ್ಲಿ ಸಾಗುತ್ತಿದೆ ಸಿಲ್ವರ್

Published : Dec 12, 2025, 04:23 PM IST

ಇದೇ ಮೊದಲ ಬಾರಿಗೆ ಅತೀ ದುಬಾರಿಯಾದ ಬೆಳ್ಳಿ, ಚಿನ್ನಕ್ಕಿಂತ ವೇಗದಲ್ಲಿ ಸಾಗುತ್ತಿದೆ ಸಿಲ್ವರ್ , ಡಿಸೆಂಬರ್ 12ರಂದು ಬೆಳ್ಳಿ ಬೆಲೆ ಐತಿಹಾಸಿಕ ಗಡಿ ದಾಟಿದೆ. ಇಂದು ಬೆಳ್ಳಿ ಬೆಲೆ ಎಷ್ಟಾಗಿದೆ. ದುಬಾರಿ ಬೆಲೆಯಿಂದ ಹೂಡಿಕೆಯಲ್ಲಿ ಇದೆಯಾ ಆತಂಕ?

PREV
16
ಚಿನ್ನದ ಜೊತೆ ಬೆಳ್ಳಿ ಓಟ

ಒಂದೆಡೆ ಚಿನ್ನದ ಬೆಲೆ ದುಬಾರಿಯಾಗುತ್ತಿದೆ. ಚಿನ್ನ ಖರೀದಿ ಜನಸಾಮಾನ್ಯರಿಗೆ ಸಾಧ್ಯವಾಗದ ಪರಿಸ್ಥಿತಿಗೆ ತಲುಪಿದೆ. ಹೀಗಾಗಿ ಜನಸಾಮಾನ್ಯರು ಬೆಳ್ಳಿಯತ್ತ ಮನಸ್ಸು ಮಾಡುತ್ತಿರುವಾಗಲೇ ಮತ್ತೊಂದು ಶಾಕ್ ಎದುರಾಗಿದೆ. ಇದೀಗ ಬೆಳ್ಳಿ ಬೆಲೆ ದಾಖಲೆ ಬರೆದಿದೆ. ಇದೇ ಮೊದಲ ಬಾರಿಗೆ ಬೆಳ್ಳಿ ಹಲವು ಗಡಿ, ದಾಖಲೆ ಮುರಿದಿದೆ.

26
2 ಲಕ್ಷ ರೂಪಾಯಿ ಗಡಿ ದಾಟಿದ ಬೆಳ್ಳಿ

MCX ಮಾರುಕಟ್ಟೆಯಲ್ಲಿ ಇಂದು (ಡಿ.12) ಬೆಳ್ಳಿ ಬೆಲೆ ಕೆಜಿಗೆ 2 ಲಕ್ಷ ರೂಪಾಯಿ ದಾಟಿದೆ. ಹೌದು ಇಂದಿನ ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆ 2,00,362 ರೂಪಾಯಿ ತಲುಪಿದೆ. ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆ ಕಾಣುತ್ತಿದೆ. ಚಿನ್ನಕ್ಕೆ ಹೋಲಿಸಿದರೆ ಬೆಳ್ಳಿ ಬೆಲೆ ಏರಿಕೆ ಅತೀ ವೇಗದಲ್ಲಿ ಸಾಗುತ್ತಿದೆ.

36
1,420 ರೂಪಾಯಿ ಏರಿಕೆ

ಡಿಸೆಂಬರ್ 11ರಂದು ಎಂಸಿಎಕ್ಸ್ ಮಾರುಕಟ್ಟೆಯಲ್ಲಿ ಬೆಳ್ಳಿ ಬೆಲೆ 1,98,942 ರೂಪಾಯಿಯಲ್ಲಿ ಅಂತ್ಯಗೊಂಡಿತ್ತು. ಆದರೆ ಡಿಸೆಂಬರ್ 12ರಂದು ಮಾರುಕಟ್ಟೆ ಆರಂಭಗೊಳ್ಳುತ್ತಿದ್ದಂತೆ 1,420 ರೂಪಾಯಿ ಏರಿಕೆ ಕಂಡಿದೆ. ಈ ಮೂಲಕ ಬೆಳ್ಳಿ ಇತಿಹಾಸದಲ್ಲೇ ಮೊದಲ ಬಾರಿಗೆ 2 ಲಕ್ಷ ರೂಪಾಯಿ ಗಡಿ ದಾಟಿದೆ.

46
ಬೆಳ್ಳಿ ಬೆಲೆ ಏರಿಕೆಗೆ ಕಾರಣವೇನು?

ಭಾರತದ ಜ್ಯುವೆಲ್ಲರಿ ಅಸೋಸಿಯೇಶನ್ IBJA ಅಧ್ಯಕ್ಷ ಅಕಾಶ್ ಕಾಂಬೋಜ್ ಬೆಳ್ಳಿ ಬೆಲೆ ಏರಿಕೆ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಬೆಳ್ಳಿ ಬೆಲೆ ಏರಿಕಿಗೆ ಹಲವು ಕಾರಣಗಳಿದೆ. ಪ್ರಮುಖವಾಗಿ ಕೈಗಾರಿಕೆ ಉತ್ಪಾದನೆ ಟ್ರೆಂಡ್, ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿತ ಸೇರಿದಂತೆ ಕೆಲ ಪ್ರಮುಖ ಕಾರಣಗಳಿವೆ ಎಂದಿದ್ದಾರೆ.

56
ಮತ್ತಷ್ಟು ಏರಿಕೆಯಾಗಲಿದೆ ಬೆಳ್ಳಿ

ಬೆಳ್ಳಿ ಬೆಲೆ ಮತ್ತಷ್ಟು ಏರಿಕೆಯಾಗಲಿದೆ. ಕಾರಣ ಸೋಲಾರ್ ಎನರ್ಜಿ, ಎಲೆಕ್ಟ್ರಿಕ್ ವಾಹನ, ಸೆಮಿಕಂಡಕ್ಟರ್ ಸೇರಿದಂತೆ ಹಲವು ಉತ್ಪಾದನೆಗಳ ಕಾರಣ ಬೆಳ್ಳಿ ಬೇಡಿಕೆ ಹೆಚ್ಚಾಗಿದೆ. ಈ ಕ್ಷೇತ್ರಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ವಿಸ್ತರಣೆಗೊಳ್ಳಲಿದೆ. ಇದರಿಂದ ಬೆಳ್ಳಿ ಬೆಲೆ ಮತ್ತಷ್ಟು ದುಬಾರಿಯಾಗಲಿದೆ ಎಂದು ಏಕ್ಸಿಸ್ ಮ್ಯೂಚ್ಯುವಲ್ ಫಂಡ್ ವರದಿ ನೀಡಿದೆ.

ಮತ್ತಷ್ಟು ಏರಿಕೆಯಾಗಲಿದೆ ಬೆಳ್ಳಿ

66
ಹೂಡಿಕೆಗೂ ಉತ್ತಮ

ಬೆಳ್ಳಿ ಮೇಲೆ ಹೂಡಿಕೆ ಮಾಡುವುದು ಉತ್ತಮ. ಬೆಳ್ಳಿ ಬೆಲೆ ದಾಖಲೆ ಬರೆಯುವ ಮೊದಲೇ ಹಲವು ಹೂಡಿಕೆ ತಜ್ಞರು ಬೆಳ್ಳಿ ಮೇಲಿನ ಹೂಡಿಕೆ ಉತ್ತಮ ರಿಟರ್ನ್ಸ್ ನೀಡಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೀಗ ಬೆಳ್ಳಿ ಬೆಲೆ ಏರಿಕೆಯಾಗುತ್ತಿದ್ದಂತೆ ಮತ್ತೊಮ್ಮೆ ಬೆಳ್ಳಿ ಮೇಲಿನ ಹೂಡಿಕೆ ಚರ್ಚೆಯಾಗುತ್ತಿದೆ.

ಹೂಡಿಕೆಗೂ ಉತ್ತಮ

Read more Photos on
click me!

Recommended Stories