ಮತ್ತೆ ಜಿಗಿದ ಬೆಳ್ಳಿ: ಒಂದೇ ದಿನ ₹40000 ಏರಿಕೆ!

Published : Feb 05, 2026, 08:34 AM IST

ಕುಸಿತ ಕಂಡಿದ್ದ ಬೆಳ್ಳಿ ಬೆಲೆ ಮಂಗಳವಾರ 40,000 ರೂ.ಗಳಷ್ಟು ಭಾರೀ ಏರಿಕೆ ಕಂಡಿದೆ. ಇದರೊಂದಿಗೆ ಚಿನ್ನದ ದರವೂ ಗಣನೀಯವಾಗಿ ಹೆಚ್ಚಾಗಿದ್ದು, ಬಜೆಟ್ ನಂತರ ಮಾರುಕಟ್ಟೆಯಲ್ಲಿ ಉಂಟಾದ ಈ ಏರಿಳಿತ ಹೂಡಿಕೆದಾರರಲ್ಲಿ ಸಂಚಲನ ಮೂಡಿಸಿದೆ.

PREV
15

ಮಂಗಳವಾರ ಒಮ್ಮೆಲೆ 20,000 ರು. ಕುಸಿದು ಗ್ರಾಹಕರಿಗೆ ಸಂತಸ ತಂದಿದ್ದ ಬೆಳ್ಳಿ ಬೆಲೆ ಬುಧವಾರ ಅದರ ಎರಡು ಪಟ್ಟು, ಅಂದರೆ 40,000 ರು. ಏರಿಕೆಯಾಗಿದೆ. ಇದರೊಂದಿಗೆ ಬೆಂಗಳೂರಿನಲ್ಲಿ 1 ಕೆ.ಜಿ. ಬೆಳ್ಳಿ ಬೆಲೆ 3,20,000 ರು.ಗೆ ತಲುಪಿದೆ.

25

ಅತ್ತ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 5,050 ರು ಏರಿಕೆಯಾಗಿದ್ದು, 1,46,150 ರು.ಗೆ ತಲುಪಿದೆ. ಇನ್ನು 24 ಕ್ಯಾರಟ್‌ ಚಿನ್ನದ ಬೆಲೆಯಲ್ಲಿ 5,510 ರು. ಹೆಚ್ಚಳವಾಗಿ 1,59,440 ರು. ಆಗಿದೆ. ಮುಂಬೈನಲ್ಲಿ 1 ಕೆ.ಜಿ. ಬೆಳ್ಳಿ ಬೆಲೆ 2,98,000 ರು. ಆಗಿದ್ದರೆ, 10 ಗ್ರಾಂ ಚಿನ್ನದ ದರ 1,65,000 ರು. ಆಗಿದೆ.

35

ಕೇಂದ್ರ ಬಜೆಟ್ ಮಂಡನೆಯಾದ ಕೇವಲ 24 ಗಂಟೆಗಳಲ್ಲಿ ಹೂಡಿಕೆದಾರರು ಹಾಗೂ ಆಭರಣ ಕೊಳ್ಳುವವರಿಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಿತ್ತು. ದೇಶೀಯ ಫ್ಯೂಚರ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳು ಇಂದು ದಿಢೀರ್ ಕುಸಿತ ಕಂಡಿದ್ದವು. ಆದರೆ, ಈಗ ಮತ್ತೆ ಏರಿಕೆಯ ಹಾದಿ ಹಿಡಿದಿದೆ.

45

ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್ (MCX) ನಲ್ಲಿ ಮಂಗಳವಾರ ವಹಿವಾಟು ಆರಂಭವಾಗುತ್ತಿದ್ದಂತೆಯೇ ಬೆಲೆಗಳಲ್ಲಿ ಗಣನೀಯ ವ್ಯತ್ಯಾಸ ಕಂಡುಬಂದಿದೆ.

55

ಸೋಮವಾರ ಬೆಳಗ್ಗೆ MCXನಲ್ಲಿ ಎಕ್ಸ್‌ಪೈರಿ ಗೋಲ್ಡ್ ಫ್ಯೂಚರ್ಸ್ ಪ್ರತಿ 10 ಗ್ರಾಂಗೆ 1,39,868 ರೂಪಾಯಿಗಳಲ್ಲಿ ಆರಂಭವಾಯಿತು. 10 ಗಂಟೆಯ ವೇಳೆಗೆ ಸುಮಾರು 6,900 ರೂಪಾಯಿಗಳಷ್ಟು ಕುಸಿದು 1,35,589 ರೂಪಾಯಿಗಳಿಗೆ ತಲುಪಿದೆ. ಬೆಳ್ಳಯ ಬೆಲೆಯಲ್ಲಿಯೂ ಹಠಾತ್ ಇಳಿಕೆ ಕಂಡುಬಂದಿತ್ತು, ಪ್ರತಿ ಕೆಜಿಗೆ ಸುಮಾರು 16,700 ರೂಪಾಯಿಗಳಷ್ಟು ಬೆಲೆ ಇಳಿಕೆಯಾಗಿ 2,48,875 ರೂಪಾಯಿಗಳಲ್ಲಿ ವಹಿವಾಟು ನಡೆಸುತ್ತಿತ್ತು.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Photos on
click me!

Recommended Stories