Gold Mining: ಕರ್ನಾಟಕದ ಆರು ಜಿಲ್ಲೆಗಳಲ್ಲಿ ಚಿನ್ನದ ನಿಕ್ಷೇಪಗಳನ್ನು ಹುಡುಕಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಪ್ರದೇಶಗಳಲ್ಲಿ ಚಿನ್ನದ ನಿಕ್ಷೇಪಗಳು ಪತ್ತೆಯಾದರೆ, ಕರ್ನಾಟಕ ಚಿನ್ನದ ಉತ್ಪಾದನೆಯಲ್ಲಿ ಮತ್ತಷ್ಟು ಮುಂಚೂಣಿಯಲ್ಲಿರಲಿದೆ. ಈ ಯೋಜನೆಯ ಅನ್ವೇಷಣೆಯು ಈಗಾಗಲೇ ಆರಂಭವಾಗಿದ್ದು, ಶೀಘ್ರದಲ್ಲೇ ವರದಿಗಳು ಬರಲಿವೆ.
ಕರ್ನಾಟಕ ಚಿನ್ನ ಉತ್ಪಾದನೆಯ ಪ್ರಮುಖ ರಾಜ್ಯವಾಗಿದೆ. ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ 20 ಕಿ.ಮೀ. ದೂರದಲ್ಲಿರುವ ಹಟ್ಟಿಯಲ್ಲಿ ಚಿನ್ನದ ಗಣಿಗಾರಿಕೆ ನಡೆಯುತ್ತಿದೆ. ಕೋಲಾರದ ಕೆಜಿಎಫ್‌ನಲ್ಲಿ ಚಿನ್ನದ ಗಣಿಗಾರಿಕೆ ಸ್ಥಗಿತಗೊಂಡಿದೆ. ಇದೀಗ ಮತ್ತೆ ರಾಜ್ಯದ ಆರು ಜಿಲ್ಲಗಳಲ್ಲಿ ಚಿನ್ನದ ಹುಡುಕಾಟಕ್ಕೆ ಕೇಂದ್ರ ಸರ್ಕಾರಕ್ಕೆ ಮುಂದಾಗಿದೆ. ಒಂದು ವೇಳೆ ಈ ಪ್ರದೇಶದಲ್ಲಿ ಚಿನ್ನದ ನಿಕ್ಷೇಪಗಳು ಪತ್ತೆಯಾದ್ರೆ ಕರುನಾಡು ಚಿನ್ನದ ಬೀಡು ಆಗೋದು ಪಕ್ಕಾ.
27
ಈಗಾಗಲೇ ಆರು ಜಿಲ್ಲೆಗಳ ನಿರ್ದಿಷ್ಟ ಪ್ರದೇಶಗಳಲ್ಲಿ ಖನಿಜಾನ್ವೇಷಣೆ ಆರಂಭಗೊಂಡಿದೆ. ಕೇಂದ್ರ ಸರ್ಕಾರ ಆದೇಶದ ಮೇಲೆ ಅನ್ವೇಷಣಾ ಸಂಸ್ಥೆಗಳು ಕರ್ನಾಟಕದಲ್ಲಿ ಸಂಶೋಧನೆಯನ್ನು ನಡೆಸುತ್ತಿದ್ದು, ಶೀಘ್ರದಲ್ಲಿಯೇ ವರದಿಯನ್ನು ಸಲ್ಲಿಸಲಿವೆ ಎಂದು ವರದಿಯಾಗಿದೆ. ಈ ವರದಿಯಲ್ಲಿ ಚಿನ್ನದ ನಿಕ್ಷೇಪ ಎಷ್ಟಿರಲಿದೆ? ಈ ಪ್ರದೇಶದಲ್ಲಿ ಚಿನ್ನದ ಗಣಿಗಾರಿಕೆ ನಡೆಸಬಹುದಾ ಎಂಬಿತ್ಯಾದಿ ಅಂಶಗಳು ಇರಲಿವೆ.
37
2016-17ನೇ ಸಾಲಿನಿಂದ 2024-25ರವೆರೆಗೆ ರಾಜ್ಯದ 34 ಖನಿಜಾನ್ವೇಷಣೆಗೆ ಎನ್‌ಎಂಇಟಿ ಅನುಮೋದನೆಯನ್ನು ನೀಡಿದೆ. 34ರಲ್ಲಿ 23 ಖನಿಜಾನ್ವೇಷಣೆಗಳು ಪೂರ್ಣಗೊಂಡಿವೆ. ಇನ್ನುಳಿದ 11 ಭಾಗದಲ್ಲಿ ಖನಿಜಗಳ ಸಂಶೋಧನೆ ನಡೆಯುತ್ತಿದೆ. 4 ಪ್ರದೇಶದಲ್ಲಿ ಅನ್ಷೇಷಣೆಗಾಗಿ 7.15 ಕೋಟಿಯ ಅನುಮೋದನೆಯನ್ನು ನೀಡಲಾಗಿದೆ. ಎನ್‌ಎಂಇಟಿ ಮಾರ್ಗದರ್ಶನದಲ್ಲಿಯೇ ಈ ಅನ್ವೇಷಣೆ ನಡೆಯುತ್ತಿದೆ.
ಈಗಾಗಲೇ ಗುರುತಿಸಲಾಗಿರುವ ಪ್ರದೇಶದಲ್ಲಿ ಹೆಚ್ಚುವರಿಯಾಗಿ ಖನಿಜಾನ್ವೇಷಣೆಯನ್ನು ನಡೆಸಲಾಗುತ್ತಿದೆ. ಕೇಂದ್ರಕ್ಕೆ ಸಲ್ಲಿಕೆಯಾಗುವ ಮೊದಲ ವರದಿಯಲ್ಲಿ ಖನಿಜಗಳ ಲಭ್ಯತೆಯ ಅಂದಾಜು ಮಾಹಿತಿಯನ್ನು ಹೊಂದಿರುತ್ತದೆ. ಯಾವ ಪ್ರದೇಶದಲ್ಲಿ ಅತ್ಯಧಿಕ ಚಿನ್ನದ ಲಭ್ಯತೆ ಇದೆ ಎಂಬುದನ್ನು ಎರಡನೇ ವರದಿಯಲ್ಲಿ ಸಲ್ಲಿಕೆ ಮಾಡಲಾಗುತ್ತದೆ. 2024-25ನೇ ಸಾಲಿನಲ್ಲಿ ಖನಿಜಾನ್ವಷೇಣೆ ನಡೆಸಿರುವ ಹಾಗೂ ಅನುಮೋದನೆಗೊಂಡಿರುವ ಪಟ್ಟಿಯಲ್ಲಿ ಕರ್ನಾಟಕದ ಏಳು ಜಿಲ್ಲೆಗಳ ಹೆಸರುಗಳಿವೆ.
ಮಂಡ್ಯ (ಯಡಿಯೂರು): ಚಿನ್ನ, ತಾಮ್ರ, ಅಲ್ಯುಮಿನಿಯಂ, ಬೇಸ್ ಮೆಟಲ್
ಚಿಕ್ಕಮಗಳೂರು (ಕಳಶಾಪುರ): ಚಿನ್ನ
ಹಾಸನ: (ರಾಮಪುರ-ಗೊಲ್ಲರಹಟ್ಟಿ): ನಿ-ಕ್ರೋಮೈಟ್ ಮತ್ತು ಪ್ಲಾಟಿನಂ ಗುಂಪಿಗೆ ಸೇರುವ ಇತರೆ ಲೋಹಗಳು
ಬಳ್ಳಾರಿ (ಸಿರಿಗೆರೆ): ಚಿನ್ನ
ಹಾವೇರಿ (ನಾಗವಂದ್ ಮತ್ತು ಕಾಕೋಳ್): ಚಿನ್ನ
ದಾವಣಗೆರೆ (ಕುದುರೆಕೊಂಡ-ಹಲ್ಲವನಗಳ್ಳಿ): ಚಿನ್ನ
77
Gold Mining
ಚಿನ್ನದ ಪರಿಶೀಲನೆ ಅಥವಾ ಅನ್ವೇಷಣೆಯನ್ನು ನಡೆಸುತ್ತಿರುವ ಸಂಸ್ಥೆಗಳು
ಜಿಯೋ ಮೈರೆನ್ ಸಲ್ಯೂಷನ್
ಮೈನಿಂಗ್ ಟೆಕ್ ಕನ್ಸಲ್ವೆನ್ಸಿ ಸರ್ವಿಸಸ್ ಲಿಮಿಟೆಡ್
ಇಓಮೆನ್ ಲ್ಯಾಬೊರೇಟರೀಸ್
ಅಧಿಸೂಚಿತ ಅನ್ವೇಷಣಾ ಸಂಸ್ಥೆ ಎಮ್‌ಇಸಿಎಲ್