ಕಡಿಮೆ ಸಂಬಳ ಪಡೆಯೋರು ಹಣ ಉಳಿಸೋಕೆ ಆಗ್ತಿಲ್ವಾ? ಈ ಟಿಪ್ಸ್ ಫಾಲೋ ಮಾಡಿ!

Published : Dec 30, 2024, 06:32 PM IST

How to Save Money: ಎಷ್ಟೇ ದುಡಿದರೂ ಹಣ ಉಳಿತಾಯ ಮಾಡಲು ಆಗುತ್ತಿಲ್ಲ. ಬಂದಷ್ಟು ಹಣ ಖರ್ಚಿಗೇ ಸರಿಹೋಗ್ತಿದೆ, ಹಣ ಉಳಿಸೋದು ಕಷ್ಟ ಎಂದು ಜನರು ಬೇಸರದಿಂದ ಹೇಳುತ್ತಾರೆ. ಅಂಥವರಿಗೆ ಹಣ ಉಳಿಸಲು ಇಲ್ಲಿದೆ ಸುಲಭ ಟಿಪ್ಸ್. ಇದನ್ನ ಫಾಲೋ ಮಾಡುವ ಮೂಲಕ ಹಣ ಉಳಿತಾಯ ಮಾಡಬಹುದು.

PREV
16
ಕಡಿಮೆ ಸಂಬಳ ಪಡೆಯೋರು ಹಣ ಉಳಿಸೋಕೆ ಆಗ್ತಿಲ್ವಾ? ಈ ಟಿಪ್ಸ್ ಫಾಲೋ ಮಾಡಿ!

ಇತ್ತಿಚಿನ ದಿನಗಳಲ್ಲಿ ಬೆಲೆ ಏರಿಕೆ, ಹಣದುಬ್ಬರದಿಂದಾಗಿ ಸಾಮಾನ್ಯ ಜನರು ಉಳಿತಾಯ ಮಾಡುವುದು ಕಷ್ಟವಾಗಿದೆ. ಸಂಪಾದಿಸುವ ಹಣದಲ್ಲಿ ಸ್ವಲ್ಪವಾದರೂ ಉಳಿಸಬೇಕು ಅಂತ ಎಲ್ಲರೂ ಬಯಸುತ್ತಾರೆ. ಆದರೆ ದುಡಿದ ಹಣವೆಲ್ಲ ಜೀವನ ಅಗತ್ಯ ಪೂರೈಸಲು ಸರಿಹೋಗುತ್ತದೆ. ಹಣ ಉಳಿತಾಯ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಾರೆ. ಹಾಗಾದರೆ ಹಣ ಉಳಿತಾಯ ಮಾಡುವುದು ಹೇಗೆ ಎಂಬುದು ಇಲ್ಲಿ ತಿಳಿಯೋಣ..

26

ನೀವು ಒಂದು ಕಂಪನಿ, ಸ್ವ ಉದ್ಯೋಗ, ಕೂಲಿ ಏನೇ ಕೆಲಸ ಮಾಡುತ್ತಿರುತ್ತಿರಿ. ಬಂದ ಹಣ ಖರ್ಚಿಗೇ ಸರಿಹೋಗುವುದರಿಂದ ಹಣ ಉಳಿತಾಯ ಕಷ್ಟವಾಗಿದೆ. ನಿಮ್ಮ ಸಂಬಳಕ್ಕೆ ತಕ್ಕಂತೆ ಒಂದು ಫಾರ್ಮುಲಾ ರೂಪಿಸಿಕೊಳ್ಳಿ. ಖರ್ಚಿನ ಸಂಪೂರ್ಣ ಲೆಕ್ಕ ಇಟ್ಟುಕೊಳ್ಳಿ. ಹೀಗೆ ಮಾಡುವುದರಿಂದ ಅನಾವಶ್ಯಕ ಖರ್ಚು ತಪ್ಪಿಸಿ ಹಣ ಉಳಿಸಬಹುದು.

36
ಹಣ

ಹೀಗೊಂದು ಫಾರ್ಮುಲಾ ರೂಪಿಸಿಕೊಂಡರೆ ಕಡಿಮೆ ಸಂಬಳ ಪಡೆಯುವವರೂ ಹಣ ಉಳಿಸಬಹುದು. ಹೇಗೆ ಅಂತ ಈ ಸಲಹೆಗಳು ತಿಳಿಸುತ್ತವೆ. 20,000 ರೂ. ಸಂಬಳ ಪಡೆಯುವವರು ಹೇಗೆ ಹಣ ಉಳಿಸಬಹುದು?

 

46
ಹಣ ಉಳಿತಾಯ

ಮನೆ ಬಾಡಿಗೆ, ಊಟಕ್ಕೆ ಎಷ್ಟು ಖರ್ಚಾಗುತ್ತದೆ ಎಂದು ಪಟ್ಟಿ ಮಾಡಿ. ಇದರ ಜೊತೆಗೆ ನಿಮ್ಮ ಇತರ ಖರ್ಚುಗಳನ್ನೂ ಗಮನಿಸಿ. ಒಟ್ಟು 20 ಸಾವಿರ ಸಂಬಳ ಇದ್ದರೆ, ಪ್ರತಿ ತಿಂಗಳು ನಿಗದಿತ ಮೊತ್ತ ಉಳಿಸಬಹುದು.

56

ಪ್ರತಿ ತಿಂಗಳು 10 ಸಾವಿರ ಉಳಿಸಬೇಕೆಂದರೆ, ಅನಾವಶ್ಯಕ ಶಾಪಿಂಗ್ ಮಾಡಬೇಡಿ. ಬೇಡದಿದ್ದರೂ ಅಂಗಡಿಗೆ ಹೋಗಿ ಸಾವಿರಾರು ರೂಪಾಯಿ ಖರ್ಚು ಮಾಡುತ್ತೇವೆ. ಹೀಗಾಗಿ ನಿಮಗೆ ಯಾವುದರ ಅಗತ್ಯವಿದೆಯೋ ಅಂಥ ವಸ್ತುಗಳನ್ನು ಮಾತ್ರ ಖರೀದಿಸಿ. ಸಿನಿಮಾ, ಸಿಗರೇಟು, ದುಶ್ಚಟಗಳನ್ನ ತಪ್ಪಿಸಿ.

 

66
ಹಣ ಉಳಿತಾಯ

ಉಳಿತಾಯ ಖಾತೆಯಲ್ಲಿ ಹಣವಿದ್ದರೆ ಅಲ್ಲೇ ಬಿಡುವ ಬದಲು ಸ್ವಲ್ಪ ಹಣ ತೆಗೆದಿಟ್ಟು ಉಳಿದ ಹಣವನ್ನು  ಮ್ಯೂಚುಯಲ್ ಫಂಡ್ ಅಥವಾ SIP ಮತ್ತು ಬಾಂಡ್‌ಗಳಲ್ಲಿ ಹೂಡಿಕೆ ಮಾಡಬಹುದು.. ಹೀಗೆ ಮಾಡುವುದರಿಂದ ವರ್ಷಕ್ಕೆ ಸುಮಾರು ಒಂದು ಲಕ್ಷ ಉಳಿಸಬಹುದು.

Read more Photos on
click me!

Recommended Stories