ಅನಿಲ್ ಅಂಬಾನಿಗೆ ಶಾಕ್, 2,796 ಕೋಟಿ ರೂಪಾಯಿ ಅಕ್ರಮ ಕುರಿತು ಸಿಬಿಐ ಚಾರ್ಜ್‌ಶೀಟ್ ಸಲ್ಲಿಕೆ, ಮುಕೇಶ್ ಅಂಬಾನಿ ಸಹೋದರ ಅನಿಲ್ ಅಂಬಾನಿ ಹಾಗೂ ಯೆಸ್ ಬ್ಯಾಂಕ್ ಸಿಇಒ ರಾಣಾ ಕಪೂರ್ ವಿರುದ್ದ ಸಿಬಿಐ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.
ಉದ್ಯಮಿ ಮುಕೇಶ್ ಅಂಬಾನಿ ಆಸ್ತಿ ಏರಿಕೆಯಾಗುತ್ತಲೇ ಹೋದರೆ, ಇತ್ತ ಸಹೋದರ ಅನಿಲ್ ಅಂಬಾನಿ ಸಂಕಷ್ಟದಿಂದ ಹೊರಬರಲು ಒದ್ದಾಡುತ್ತಿದ್ದಾರೆ. ಅಕ್ರಮ ಹಣ ವರ್ಗಾವಣೆ, ಉದ್ಯಮದಲ್ಲಿನ ನಷ್ಟ ಸೇರಿದಂತೆ ಹಲವು ಕಾರಣಗಳಿಂದ ಅನಿಲ್ ಅಂಬಾನಿಗೆ ನಿದ್ದೆ ಇಲ್ಲದಾಗಿದೆ. ಇದೀಗ ಸೆಂಟ್ರಲ್ ಬ್ಯೂರ್ ಆಫ್ ಇನ್ವೆಸ್ಟಿಗೇಶನ್ (ಸಿಬಿಐ) ಅನಿಲ್ ಅಂಬಾನಿಗೆ ಶಾಕ್ ಕೊಟ್ಟಿದೆ. ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಕಂಪನಿ ಹಾಗೂ ಯೆಸ್ ಬ್ಯಾಂಕ್ ನಡುವೆ ನಡೆದಿರುವ 2,796 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಸಿಬಿಐ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.
25
ಅನಿಲ್ ಅಂಬಾನಿ ಹಾಗೂ ಒಡೆತನದ ಕಂಪನಿ ವಿರುದ್ದ ಚಾರ್ಜ್‌ಶೀಟ್
ಅನಿಲ್ ಅಂಬಾನಿ ಹಾಗೂ ಒಡೆತನದ ಕಂಪನಿ ವಿರುದ್ದ ಚಾರ್ಜ್‌ಶೀಟ್
ಅನಿಲ್ ಧೀರೂಬಾಯಿ ಅಂಬಾನಿ ಕಂಪನಿ, ರಿಲನಯ್ಸ್ ಕಮರ್ಷಿಲ್ ಫಿನಾನ್ಸ್ ಲಿಮಿಟೆಡ್ (RCFL), ರಿಲಯನ್ಸ್ ಹೋಮ್ ಫಿನಾನ್ಸ್ ಲಿಮಿಟೆಡ್ (RHFL) ಹಾಗೂ ಯೆಸ್ ಬ್ಯಾಂಕ್ ನಡುವೆ ನಡೆದಿರುವ ಅಕ್ರಮಗಳ ಕುರಿತು ಸಿಬಿಐ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ಯೆಸ್ ಮಾಜಿ ಸಿಇಒ ರಾಣಾ ಕಪೂರ್ ವಿರುದ್ಧೂ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.
35
ಯಾರ ವಿರುದ್ದ ಚಾರ್ಜ್ ಶೀಟ್
ಯಾರ ವಿರುದ್ದ ಚಾರ್ಜ್ ಶೀಟ್
ಅನಿಲ್ ಅಂಬಾನಿ ಕಂಪನಿ ಹಾಗೂ ಯೆಸ್ ಬ್ಯಾಂಕ್ ನಡುವೆ ನಡೆದಿರುವ ಅಕ್ರಮ ಹಾಗೂ ಅಕ್ರಮ ಹಣ ವರ್ಗಾವಣೆಯಿಂದ ಯೆಸ್ ಬ್ಯಾಂಕ್‌ಗೆ 2796 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಅನಿಲ್ ಧಿರೂಬಾಯಿ ಕಂಪನೀಸ್, RCFL ಹಾಗೂ RHFL ಕಂಪನಿಗಳ ಚೇರ್ಮೆನ್ ಅನಿಲ್ ಅಂಬಾನಿ, ಯೆಸ್ ಮಾಜಿ ಸಿಇಒ ರಾಣಾ ಕಪೂರ್, ಪತ್ನಿ ಬಿಂದೂ ಕಪೂರ್, ಪುತ್ರಿಯರಾದ ರಾಧಾ ಕಪೂರ್, ರೋಶ್ನಿ ಕಪೂರ್ ವಿರುದ್ದೂ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.
ಸಿಬಿಐ ಭ್ರಷ್ಟಾಚಾರಾ ನಿಯಂತ್ರಣ ಕಾಯ್ದೆ ಅಡಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. 2022ರಲ್ಲಿ ಸಿಬಿಐ ರಿಲಯನ್ಸ್ ಫೈನಾನ್ಸ್ ಲಿಮಿಟೆಡ್ ಹಾಗೂ ಯೆಸ್ ಬ್ಯಾಂಕ್ ವಿರುದ್ದ ಎರಡೂ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿತ್ತು. ಸಾರ್ವಜನಿಕ ಹಣವನ್ನು ಯೆಸ್ ಬ್ಯಾಂಕ್ ಅಕ್ರಮವಾಗಿ ಅನಿಲ್ ಅಂಬಾನಿ ಕಂಪನಿಗಳಿಗೆ ವರ್ಗಾವಣೆ ಮಾಡಿರುವುದು ಸೇರಿದಂತೆ ಹಲವು ಅಕ್ರಮ ಕುರಿತು ಸಿಬಿಐ ತನ್ನ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.
55
ಅನಿಲ್ ಅಂಬಾನಿಗೆ ಪ್ರತಿ ದಿನ ಕೋರ್ಟ್, ವಿಚಾರಣೆ ಸಂಕಷ್ಟ
ಅನಿಲ್ ಅಂಬಾನಿಗೆ ಪ್ರತಿ ದಿನ ಕೋರ್ಟ್, ವಿಚಾರಣೆ ಸಂಕಷ್ಟ
ಅನಿಲ್ ಅಂಬಾನಿಗೆ ದಿನದಿಂದ ದಿನಕ್ಕೆ ಸಂಕಷ್ಟಗಳು ಹೆಚ್ಚಾಗುತ್ತಿದೆ. ಇತ್ತೀಚೆಗೆ ಬ್ಯಾಂಕ್ ಆಫ್ ಬರೋಡಾ ಕೂಡ ಅನಿಲ್ ಅಂಬಾನಿ ವಿರುದ್ಧ ವಂಚನೆ ಆರೋಪ ಮಾಡಿತ್ತು. ಇತ್ತ ಇಡಿ ಅಧಿಕಾರಿಗಳು ಅನಿಲ್ ಅಂಬಾನಿ ವಿಚಾರಣೆ ನಡೆಸುತ್ತಿದ್ದಾರೆ. ಅನಿಲ್ ಅಂಬಾನಿ ಇದೀಗ ಪ್ರತಿ ದಿನ ವಿಚಾರಣೆ, ಕೋರ್ಟ್ ಸೇರಿದಂತೆ ಹಲವು ಸಂಕಷ್ಟಕ್ಕೆ ಸಿಲುಕಿದ್ದಾರೆ.