ಜಿಯೋ ಗ್ರಾಹಕರಿಗೆ ವರ್ಷವಿಡಿ ಅನ್‌ಲಿಮಿಟೆಡ್ 5ಜಿ ಗಿಫ್ಟ್ ವೋಚರ್ ಕೊಡುಗೆ, ಕೇವಲ 601 ರೂ!

First Published | Dec 26, 2024, 1:31 PM IST

ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ. ರಿಲಯನ್ಸ್ ಜಿಯೋ ಹೊಸದಾಗಿ ವರ್ಷಪೂರ್ತಿ ಅನ್‌ಲಿಮಿಟೆಡ್ 5ಜಿ ಡೇಟಾ ಬಳಸಲು ಅದ್ಭುತ ಯೋಜನೆಯನ್ನು ಪರಿಚಯಿಸಿದೆ. ಇದರಲ್ಲಿ ವಿಶೇಷವೆಂದರೆ ಈ ಡೇಟಾ ಯೋಜನೆಯನ್ನು ನಿಮ್ಮ ಸ್ನೇಹಿತರು ಅಥವಾ ಕುಟುಂಬ ಸದಸ್ಯರಿಗೆ ಉಡುಗೊರೆಯಾಗಿ ನೀಡಬಹುದು. 5ಜಿ ಡೇಟಾ ಗಿಫ್ಟ್ ವೋಚರ್ ಬಗ್ಗೆ ಹೆಚ್ಚಿನ ವಿವರಗಳು ಇಲ್ಲಿವೆ. 

ಜಿಯೋ ತನ್ನ ಬಳಕೆದಾರರಿಗೆ ಅನ್‌ಲಿಮಿಟೆಡ್ 5ಜಿ ಡೇಟಾವನ್ನು ಒದಗಿಸಲು ಉತ್ತಮ ಕೊಡುಗೆಯನ್ನು ತಂದಿದೆ. ಹೊಸ ವರ್ಷದ ಸಂದರ್ಭದಲ್ಲಿ ಈ ಕೊಡುಗೆ ಬಳಕೆದಾರರನ್ನು ಆಕರ್ಷಿಸುತ್ತದೆ ಎಂದು ಜಿಯೋ ನಿರೀಕ್ಷಿಸುತ್ತಿದೆ. ಈ ಆಫರ್‌ನಲ್ಲಿ ನೀವು ವರ್ಷಪೂರ್ತಿ ಅನ್‌ಲಿಮಿಟೆಡ್ 5ಜಿ ಡೇಟಾವನ್ನು ಆನಂದಿಸಲು ರೂ 601 ಪಾವತಿಸಿ ‘ಜಿಯೋ ಟ್ರೂ 5ಜಿ ಗಿಫ್ಟ್ ವೋಚರ್’ ಪಡೆಯಬೇಕು. ಇದನ್ನು ಸಕ್ರಿಯಗೊಳಿಸಿದರೆ ವರ್ಷಪೂರ್ತಿ 5ಜಿ ಸೇವೆಗಳನ್ನು ಪಡೆಯಬಹುದು. 

ನೀವು ರೂ.601ಪಾವತಿಸಿ 5ಜಿ ಅಪ್‌ಗ್ರೇಡ್ ಗಿಫ್ಟ್ ವೋಚರ್ ಖರೀದಿಸಬೇಕು ಮೈ ಜಿಯೋ ಆ್ಯಪ್ ಮೂಲಕ ಇದನ್ನು ಸಕ್ರಿಯಗೊಳಿಸಿದರೆ ಹಲವು ಪ್ರಯೋಜನ ಸಿಗಲಿದೆ. ಈ ಯೋಜನೆಯಲ್ಲಿರುವ ವಿಶೇಷವೆಂದರೆ 4ಜಿ ಬಳಕೆದಾರರು ಸಹ ಇದನ್ನು ಬಳಸಬಹುದು. ಅಂದರೆ ಈಗಾಗಲೇ 4ಜಿ ಸೇವೆಗಳನ್ನು ಪಡೆಯುತ್ತಿರುವ ಜಿಯೋ ಬಳಕೆದಾರರು 5ಜಿ ಸೇವೆಗಳನ್ನು ಪಡೆಯಲು ಈ ವೋಚರ್ ಮೂಲಕ ಅಪ್‌ಗ್ರೇಡ್ ಮಾಡಬಹುದು. 

Tap to resize

ಆದರೆ ಈ 5ಜಿ ಡೇಟಾ ವೋಚರ್‌ಅನ್ನು ಬಳಸಬೇಕಾದರೆ ಈಗಾಗಲೇ ಕನಿಷ್ಠ 1.5 ಜಿಬಿ 4ಜಿ ಡೇಟಾಗೆ ಮಾಸಿಕ ಅಥವಾ ತ್ರೈಮಾಸಿಕ ಯೋಜನೆಯಲ್ಲಿ ರೀಚಾರ್ಜ್ ಮಾಡಿಸಿರಬೇಕು. ಇನ್ನೊಂದು ವಿಷಯವೆಂದರೆ ದಿನಕ್ಕೆ 1 ಜಿಬಿ ಡೇಟಾ ಯೋಜನೆಯಲ್ಲಿರುವವರಿಗೆ, 1899 ರೂಪಾಯಿ ವಾರ್ಷಿಕ ರೀಚಾರ್ಜ್ ಯೋಜನೆಯಲ್ಲಿರುವವರಿಗೆ ಈ ವೋಚರ್ ಕೆಲಸ ಮಾಡುವುದಿಲ್ಲ. ಅಂದರೆ ದಿನಕ್ಕೆ 1 ಜಿಬಿ ಡೇಟಾ ಬಳಸುವವರು  ಟ್ರು 5ಜಿ ಸೇವೆಗಳು ಪಡೆಯಲು ಸಾಧ್ಯವಾಗುವುದಿಲ್ಲ.

ಜಿಯೋ ಟ್ರೂ 5ಜಿ ಅಪರಿಮಿತ ಡೇಟಾ ಗಿಫ್ಟ್ ವೋಚರ್

ಬಳಕೆದಾರರು ಜಿಯೋ ಟ್ರೂ 5ಜಿ ಗಿಫ್ಟ್ ವೋಚರ್‌ಅನ್ನು ತಮಗಾಗಿ ಮಾತ್ರವಲ್ಲದೆ ಸ್ನೇಹಿತರು, ಸಂಬಂಧಿಕರಿಗೆ ಉಡುಗೊರೆಯಾಗಿ ನೀಡಬಹುದು. ಮೈ ಜಿಯೋ ಆ್ಯಪ್ ಮೂಲಕ ಈ ವೋಚರ್‌ಅನ್ನು ಬೇರೆಯವರಿಗೆ ಉಡುಗೊರೆಯಾಗಿ ನೀಡಬಹುದು. ಆದರೆ ನೀವು ಈ ಉಡುಗೊರೆ ನೀಡಲು ಬಯಸುವವರು ಈ ವೋಚರ್‌ಅನ್ನು ಬಳಸಿ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರಬೇಕು ಎಂಬುದನ್ನು ಮರೆಯಬೇಡಿ. ಅಂದರೆ ಅವರು ಕನಿಷ್ಠ ಮೂಲ ಯೋಜನೆಯಲ್ಲಿದ್ದಾರೆಯೇ ಎಂದು ಪರಿಶೀಲಿಸಿ ಈ ಗಿಫ್ಟ್ ವೋಚರ್ ನೀಡಿ. 

ಜಿಯೋ ಅಪರಿಮಿತ 5ಜಿ ಡೇಟಾ ವೋಚರ್ ರೂ.199, ರೂ.239, ರೂ.299, ರೂ.319, ರೂ.329, ರೂ.579, ರೂ.666, ರೂ.769 ರೂ.899 ರೀಚಾರ್ಜ್ ಯೋಜನೆಗಳಲ್ಲಿರುವವರಿಗೆ ಕೆಲಸ ಮಾಡುತ್ತದೆ. ಬಳಕೆದಾರರ ಮೂಲ ಯೋಜನೆಯನ್ನು ಆಧರಿಸಿ 5ಜಿ ಡೇಟಾ ವೋಚರ್‌ನ ಸಿಂಧುತ್ವವಿರುತ್ತದೆ. ಗರಿಷ್ಠ 30 ದಿನಗಳವರೆಗೆ ವ್ಯಾಲಿಟಿಡಿ ಇರಲಿದೆ

5ಜಿ ಡೇಟಾ ವೋಚರ್ ಸಕ್ರಿಯಗೊಂಡ ನಂತರ ಬಳಕೆದಾರರು 3ಜಿಬಿ ದೈನಿಕ 4ಜಿ ಡೇಟಾ ಜೊತೆಗೆ, ಅಪರಿಮಿತ 5ಜಿ ಡೇಟಾವನ್ನು ಸಹ ಪಡೆಯುತ್ತಾರೆ. ಇದಲ್ಲದೆ ಜಿಯೋ ರೂ.51 (1 ತಿಂಗಳು), ರೂ.101 (2 ತಿಂಗಳುಗಳು), ರೂ.151 (3 ತಿಂಗಳುಗಳು) ಬೆಲೆಯಲ್ಲಿ 5ಜಿ ವೋಚರ್ ಯೋಜನೆಗಳನ್ನು ಸಹ ನೀಡುತ್ತಿದೆ.

Latest Videos

click me!