ಜಿಯೋ ಧಮಾಕ, ₹349ಕ್ಕೆ 5ಜಿ ಡೇಟಾ, ಮನೆ ವೈಫೈ,ಕ್ಲೌಡ್ ಸ್ಟೋರೇಜ್ ಸೇರಿ 2600 ರೂ ಪ್ರಯೋಜನ

Published : Aug 21, 2025, 07:52 PM IST

ಜಿಯೋ ಧಮಾಕ ಆಫರ್ ನೀಡಿದೆ. ಕೇವಲ 349 ರೂ ರೀಚಾರ್ಜ್ ಮಾಡಿದರೆ ಸಾಕು, ಬರೋಬ್ಬರಿ 2,600 ರೂಪಾಯಿ ಪ್ರಯೋಜನ ನೀಡಿದೆ. 5ಜಿ ಡೇಟಾ, ಜಿಯೋ ಹಾಟ್‌ಸ್ಟಾರ್, ಹೋಮ್ ವೈಫೈ, ಕ್ಲೌಡ್ ಸ್ಟೋರೇಜ್ ಸೇರಿಂತೆ ಹತ್ತು ಹಲವು ಉಚಿತ ಆಫರ್ ನೀಡಿದೆ.

PREV
15

ರೀಚಾರ್ಜ್ ಪ್ಲಾನ್ ದರ ಏರಿಕೆ ಮಾಡಲಾಗಿದೆ ಅನ್ನೋ ಕೂಗು, ಆಕ್ರೋಶಗಳು ಕೇಳಿಬರುತ್ತಿದ್ದಂತೆ ಜಿಯೋ ಇದೀಗ ಗ್ರಾಹಕರಿಗಾಗಿ ಸೂಪರ್ ಧಮಾಕಾ ಪ್ಲಾನ್ ಘೋಷಿಸಿದೆ. ಕೇವಲ 349 ರೂಪಾಯಿ ರೀಚಾರ್ಜ್ ಮಾಡಿದರೆ ಸಾಕು, ಬರೋಬ್ಬರಿ 2,600 ರೂಪಾಯಿ ಪ್ರಯೋಜನ ನೀಡುತ್ತಿದೆ. ಹಬ್ಬದ ಸೀಸನ್, ಕುಟುಂಬದ ಜೊತೆ ಉತ್ತಮ ಸಮಯ ಕಳೆಯಲು, ಕ್ರಿಕೆಟ್, ನಿಮ್ಮ ಫೋಟೋ, ವಿಡಿಯೋ, ಜಿಮೇಲ್ ಸೇರಿದಂತೆ ಕ್ಲೌಡ್ ಸ್ಟೋರೇಜ್‌ಗೂ ಈ ಪ್ಲಾನ್ ಸಹಕಾರಿಯಾಗಿದೆ.

25

ಜಿಯೋ ಟ್ರೂ 5ಜಿ ಕಡೆಯಿಂದ ಹೊಸ ಪ್ಲಾನ್ ಗಳನ್ನು ಪರಿಚಯಿಸಲಾಗಿದೆ. ಹಬ್ಬದ ಋತುವಿಗೆ ನಿಜವಾಗಿಯೂ ಹಬ್ಬದ ವಾತಾವರಣವನ್ನು ಸೃಷ್ಟಿಸುವಂಥ ಅನುಕೂಲಗಳನ್ನು ಇದರಿಂದ ಪ್ರಿಪೇಯ್ಡ್ ಗ್ರಾಹಕರು ಪಡೆಯಲಿದ್ದಾರೆ. ಜಿಯೋದಿಂದ ಹೊಸದಾಗಿ ಅನಿಯಮಿತವಾಗಿ ಪ್ಲಾನ್ ಗಳನ್ನು ಘೋಷಣೆ ಮಾಡಲಾಗಿದೆ. ಆರಂಭಿಕ ಪ್ಯಾಕ್ 349 ರೂಪಾಯಿಯನ್ನು ಆಯ್ಕೆ ಮಾಡಿಕೊಂಡರೆ ಗ್ರಾಹಕರಿಗೆ 2600 ರೂಪಾಯಿ ಮೌಲ್ಯದ ಅನುಕೂಲಗಳು ದೊರೆಯಲಿವೆ.

35

ಭಾರತದ ಅತ್ಯುತ್ತಮ ನೆಟ್ ವರ್ಕ್ ಎನಿಸಿರುವ ಜಿಯೋ ಅತ್ಯುತ್ತಮವಾದ ಪ್ಲಾನ್ ಗಳನ್ನು ನೀಡುವುದನ್ನು ಮುಂದುವರಿಸಿದ್ದು, ತನ್ನ ಗ್ರಾಹಕರಿಗೆ ಇದರ ಮೂಲಕ ಉತ್ತಮವಾದ ಅನುಭವವನ್ನು ದೊರಕಿಸುತ್ತಿದೆ. ಹೀಗೆ ಮಾಡುತ್ತಿರುವುದರಿಂದ ದೂರಸಂಪರ್ಕ ಕ್ಷೇತ್ರದಲ್ಲಿ ಸುಸ್ಥಿರತೆ ಬಲಪಡಿಸುವ ತನ್ನ ಬದ್ಧತೆಯನ್ನು ಸಹ ಕಾಪಾಡಿಕೊಂಡುಬಂದಿದೆ.

45

ಈ ಹೊಸ ಟ್ರೂ 5ಜಿ ಪ್ಲಾನ್ ಆರಂಭಿಕ ಪ್ಯಾಕ್ 349ರೊಂದಿಗೆ ಸಿಗುವ ಅನುಕೂಲಗಳು ಹೀಗಿವೆ:

* ಅನಿಯಮಿತವಾದ 5ಜಿ ಡೇಟಾ 349 ರೂಪಾಯಿ ಮೌಲ್ಯದ್ದು ದೊರೆಯಲಿದೆ.

* ಜಿಯೋ ಹಾಟ್ ಸ್ಟಾರ್ ನಲ್ಲಿ 90 ದಿನಗಳ ಅವಧಿಗೆ 299 ರೂಪಾಯಿ ಮೌಲ್ಯದಲ್ಲಿ ಉಚಿತ ಕ್ರಿಕೆಟ್ ಸಿಗಲಿದೆ.

* 50 ದಿನಗಳ ಅವಧಿಗೆ 1111 ರೂಪಾಯಿ ಮೌಲ್ಯದ ಉಚಿತ ಜಿಯೋ ಹೋಮ್ ವೈಫೈ ಸಿಗುತ್ತದೆ.

* 900 ರೂಪಾಯಿ ಮೌಲ್ಯದ 50 ಜಿಬಿ ಉಚಿತ ಕ್ಲೌಡ್ ಸ್ಟೋರೇಜ್ ಜಿಯೋಎಐ ಕ್ಲೌಡ್ ನಿಂದ ದೊರೆಯುತ್ತದೆ.

55

349 ರೂಪಾಯಿಯ ಈ ಪ್ಲಾನ್ ನಲ್ಲಿ ಅನಿಯಮಿತವಾದ ಧ್ವನಿ ಕರೆ, ದಿನಕ್ಕೆ ನೂರು ಎಸ್ಸೆಮ್ಮೆಸ್, ಪ್ರತಿ ದಿನ ಎರಡು ಜಿಬಿ ಡೇಟಾ ( ಒಟ್ಟಾರೆ ಐವತ್ತಾರು ಜಿಬಿ), ಇದರ ಜೊತೆಗೆ ಇಪ್ಪತ್ತೆಂಟು ದಿನಗಳ ವ್ಯಾಲಿಡಿಟಿ ಇರುತ್ತದೆ. ಹೈ ಸ್ಪೀಡ್ ಡೇಟಾ ಸಂಪೂರ್ಣವಾಗಿ ಬಳಕೆಯಾದ ನಂತರ ಅನಿಯಮಿತವಾದ ಡೇಟಾ 64 ಕೆಬಿಪಿಎಸ್ ವೇಗದಲ್ಲಿ ಸಿಗುತ್ತದೆ. ಅರ್ಹ ಗ್ರಾಹಕರಿಗೆ ಅನಿಯಮಿತವಾದ 5ಜಿ ಡೇಟಾ ಸಿಗುತ್ತದೆ. ಜಿಯೋ ಅನ್ ಲಿಮಿಟೆಡ್ ಆಫರ್ ಅಡಿಯಲ್ಲಿ ಜಿಯೋಹಾಟ್ ಸ್ತಾಟರ್ ಮೊಬೈಲ್/ಟಿವಿ ಸಬ್ ಸ್ಕ್ರಿಪ್ಷನ್ ತೊಂಬತ್ತು ದಿನಗಳ ಅವಧಿಗೆ ಸಿಗುತ್ತದೆ.

Read more Photos on
click me!

Recommended Stories