ಜಿಯೋ ಪ್ಲಾನ್‌ನಲ್ಲಿ ಮಹತ್ವದ ಬದಲಾವಣೆ, ಹಿಂದಿನಂತೆ ರೀಚಾರ್ಜ್ ಮಾಡಿ ನಿರಾಳರಾದರೆ ಆಪತ್ತು

Published : Feb 13, 2025, 07:27 PM ISTUpdated : Feb 13, 2025, 07:52 PM IST

ಜಿಯೋ ತನ್ನ ಎರಡು ರೀಚಾರ್ಜ್ ಪ್ಲಾನ್‌ನಲ್ಲಿ ಬದಲಾವಣೆ ಮಾಡಿದೆ.ಇದೀಗ ಹಿಂದಿನಂತೆ ರೀಚಾರ್ಜ್ ಮಾಡಿ ಒಂದಷ್ಟು ದಿನ ನಿರಾಳಾಗಿರಬಹುದು ಎಂದರೆ ಸಮಸ್ಯೆ ಎದುರಾಗಲಿದೆ. ಜಿಯೋ ಪ್ಲಾನ್‌ನಲ್ಲಿ ಬದಲಾವಣೆ ಏನು?   

PREV
15
ಜಿಯೋ ಪ್ಲಾನ್‌ನಲ್ಲಿ ಮಹತ್ವದ ಬದಲಾವಣೆ, ಹಿಂದಿನಂತೆ ರೀಚಾರ್ಜ್ ಮಾಡಿ ನಿರಾಳರಾದರೆ ಆಪತ್ತು

ರಿಲಯನ್ಸ್ ಜಿಯೋ ಇತ್ತೀಚೆಗೆ ಒಂದಷ್ಟು ಹೊಸ ಪ್ಲಾನ್ ಜಾರಿಗೊಳಿಸಿದೆ. ಅತೀ ಕಡಿಮೆ ದರಲ್ಲಿ ರೀಚಾರ್ಜ್ ಪ್ಲಾನ್‌ಗಳನ್ನು ರಿಲಯನ್ಸ್ ಜಿಯೋ ನೀಡುತ್ತದೆ. ಕೆಲ ಪ್ಲಾನ್‌ಗಳನ್ನು ಹೊಸ ರೂಪದಲ್ಲಿ ಜಾರಿಗೊಳಿಸಿದೆ. ಈ ಪೈಕಿ ಇದೀಗ ಜಿಯೋ ತನ್ನ 2 ಪ್ಲಾನ್‌ಗಳಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.  ಇರುವ ಪ್ಲಾನ್‌ಗಳ ಬೆಲೆಯಲ್ಲಿ ಬದಲಾವಣೆ ಮಾಡಿಲ್ಲ. ಪ್ಲಾನ್ ಸ್ವರೂಪ ಬದಲಾಗಿದೆ.

25

ಜಿಯೋ ಆ್ಯಡ್ ಆನ್ ಡೇಟಾ ಪ್ಲಾನ್ ಇದೀಗ ಬದಲಾಗಿದೆ.ಜಿಯೋ ಗ್ರಾಹಕರಿಗೆ ಹೆಚ್ಚುವರಿ ಡೇಟಾಗೆ ಜಿಯೋ 69 ರೂಪಾಯಿ ಹಾಗೂ 139 ರೂಪಾಯಿ ರೀಚಾರ್ಜ್ ಪ್ಲಾನ್ ಜಾರಿಯಲ್ಲಿದೆ. ಈ ಹಿಂದೆ ಇದರಲ್ಲಿ ಯಾವ ಪ್ಲಾನ್ ರೀಚಾರ್ಜ್ ಮಾಡಿದರೆ, ಮೂಲ ರೀಚಾರ್ಜ್‌ನಲ್ಲಿರುವ ವ್ಯಾಲಿಡಿಟಿ ವರೆಗೆ ಹೆಚ್ಚುವರಿ ಡೇಟಾ ಪ್ಲಾನ್ ಇರಲಿದೆ.
 

35

ಉದಾಹರಣೆಗೆ ಮೂಲ ರೀಚಾರ್ಜ್ ಪ್ಲಾನ್ ಇನ್ನು 28 ದಿನ ಬಾಕಿದ್ದರೆ, ಆದರೆ ಹೆಚ್ಚುವರಿ ಡೇಟಾಗೆ 69 ರೂಪಾಯಿ ಅಥವಾ 139 ರೂಪಾಯಿ ರೀಚಾರ್ಜ್ ಮಾಡಿಕೊಂಡರೆ, ಹೆಚ್ಚುವರಿ ಡೇಟಾ ವ್ಯಾಲಿಟಿಡಿ ಕೂಡ 28 ದಿನ ಇರುತ್ತಿತ್ತು. ಮೂಲ ಪ್ಲಾನ್ ವ್ಯಾಲಿಟಿಡಿ ದಿನಕ್ಕೆ ಹೆಚ್ಚುವರಿ ಡೇಟಾ ಪ್ಲಾನ್ ವ್ಯಾಲಿಟಿಡಿ ಹೊಂದಿಕೊಳ್ಳುತ್ತಿತ್ತು.

45

ಬದಲಾದ ಪ್ಲಾನ್ ಪ್ರಕಾರ 69 ರೂಪಾಯಿ ಹಾಗೂ 139 ರೂಪಾಯಿ ಹೆಚ್ಚುವರಿ ಡೇಟಾ ಅವಧಿ ಕೇವಲ 7 ದಿನ ಮಾತ್ರ. ಮೂಲ ಪ್ಲಾನ್ ವ್ಯಾಲಿಟಿಡಿ ಎಷ್ಟೇ ದಿನ ಬಾಕಿದ್ದರೂ ಹೆಚ್ಚುವರಿ ಡೇಟಾ ವ್ಯಾಲಿಟಿಡಿ ಅವಧಿ ಕೇವಲ 7 ದಿನ ಮಾತ್ರ. ಹೀಗಾಗಿ 7 ದಿನದ ಬಳಿಕ ಹೆಚ್ಚುವರಿ ಡೇಟಾ ಪ್ಲಾನ್ ಬಳಸಿಕೊಳ್ಳಲು ಸಾಧ್ಯವಿಲ್ಲ. 

55

ಜಿಯೋ 69 ರೂಪಾಯಿ ಹೆಚ್ಚುವರಿ ಡೇಟಾ ಪ್ಲಾನ್‌ನಲ್ಲಿ ಗ್ರಾಹಕರಿಗೆ 6ಜಿಬಿ ಹೈಸ್ಪೀಡ್ ಡೇಟಾ ಲಭ್ಯವಾಗಲಿದೆ. ಇನ್ನು 12ಜಿಬಿ ಡೇಟಾ ಪ್ಲಾನ್‌ನಲ್ಲಿ ಗ್ರಾಹಕರಿಗೆ 12 ಜಿಬಿ ಹೈಸ್ಪೀಡ್ ಡೇಟಾ ಲಭ್ಯವಾಗಲಿದೆ. ಹೆಚ್ಚುವರಿ ಡೇಟಾ ಪ್ಲಾನ್ ಮೂಲಕ ವಾಯ್ಸ್ ಕಾಲ್, ಎಸ್ಎಂಎಸ್ ಸೇರಿದಂತೆ ಇತರ ಯಾವುದೇ ಸೌಲಭ್ಯಗಳಿರುವುದಿಲ್ಲ. ಕೇವಲ ಡೇಟಾ ಬಳಕೆಗೆ ಮಾತ್ರ.

Read more Photos on
click me!

Recommended Stories