ಬಹುದೊಡ್ಡ ಮೈಲಿಗಲ್ಲು ಸಾಧಿಸಿದ ರಿಲಯನ್ಸ್; ರಾಷ್ಟ್ರ ನಿರ್ಮಾಣದ ಪುರಾವೆ ಎಂದ ಅಂಬಾನಿ

Published : Jun 10, 2025, 02:36 PM IST

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಗ್ಲೋಬಲ್ ಟೆಕ್ ಟಾಪ್ 30 ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಕಂಪನಿಯಾಗಿದೆ. 10 ಲಕ್ಷ ಕೋಟಿ ರೂಪಾಯಿ ನಿವ್ವಳ ಮೌಲ್ಯ ದಾಟಿದ ಮೊದಲ ಭಾರತೀಯ ಕಂಪನಿಯೂ ಹೌದು. ಜಿಯೋದ 191 ಮಿಲಿಯನ್ ಬಳಕೆದಾರರೊಂದಿಗೆ ವಿಶ್ವದ ಅತಿದೊಡ್ಡ ಡೇಟಾ ಕಂಪನಿಯಾಗಿದೆ.

PREV
16

ಭಾರತದ ನಂಬರ್ ಒನ್ ಶ್ರೀಮಂತ ವ್ಯಕ್ತಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯ ಮಾಲೀಕ ಮುಕೇಶ್ ಅಂಬಾನಿ ಹೆಸರಿಗೆ ಮತ್ತೊಂದು ಸಾಧನೆ ಸೇರ್ಪಡೆಯಾಗಿದೆ. ಈ ಸಾಧನೆ ರಿಲಯನ್ಸ್ ಇಂಡಸ್ಟ್ರಿಸ್ ಲಿಮಿಟೆಡ್ ಕೃತಕ ಬುದ್ಧಿಮತ್ತೆ ಕ್ಷೇತ್ರ ಮತ್ತು ತಂತ್ರಜ್ಞಾನ ವಲಯದಲ್ಲಿ ವೇಗವಾಗಿ ಬೆಳವಣಿಗೆಯಾಗುತ್ತಿರೋದನ್ನು ತೋರಿಸುತ್ತಿದೆ.

26

ಪ್ರಸಿದ್ಧ ವಿಶ್ಲೇಷಕ ಮೇರಿ ಮೀಕರ್ ಸಂಗ್ರಹಿಸಿದ ಗ್ಲೋಬಲ್ ಟೆಕ್ ಟಾಪ್ 30 ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸ್ಥಾನ ಪಡೆದುಕೊಂಡಿದೆ. ಈ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಕಂಪನಿಯಾಗಿದೆ. ಈ ಶ್ರೇಯಾಂಕವು ವರ್ಷಗಳ ನಾವೀನ್ಯತೆ, ನಾಯಕತ್ವ ಮತ್ತು ರಾಷ್ಟ್ರ ನಿರ್ಮಾಣದ ಪುರಾವೆ ಎಂದು ರಿಲಯನ್ಸ್ ಹೇಳಿಕೆ ಬಿಡುಗಡೆ ಮಾಡಿದೆ.

36

ಈ ಪಟ್ಟಿಯಲ್ಲಿ ಮೈಕ್ರೋಸಾಫ್ಟ್, ಎನ್ವಿಡಿಯಾ, ಆಪಲ್, ಅಮೆಜಾನ್ ಮತ್ತು ಆಲ್ಫಾಬೆಟ್ ಅಂತಹ ದೈತ್ಯ ಕಂಪನಿಗಳು ಐದು ಸ್ಥಾನದಲ್ಲಿವೆ. ಈ ಐದು ಕಂಪನಿಗಳು ಅಮೆರಿಕದಲ್ಲಿ ತಮ್ಮ ಪ್ರಧಾನ ಕಚೇರಿಯನ್ನು ಹೊಂದಿವೆ. ನಂತರದ ಸ್ಥಾನದಲ್ಲಿ ತೈವಾನ್, ಚೀನಾ, ನೆದರ್ಲ್ಯಾಂಡ್ಸ್ ಮತ್ತು ದಕ್ಷಿಣ ಕೊರಿಯಾದ ಕಂಪನಿಗಳು ಸ್ಥಾನ ಪಡೆದುಕೊಂಡಿವೆ.

46

ಮತ್ತೊಂದು ಮೈಲಿಗಲ್ಲು

ರಿಲಯನ್ಸ್ (RIL) 10 ಲಕ್ಷ ಕೋಟಿ ರೂಪಾಯಿ (ಸುಮಾರು $120 ಬಿಲಿಯನ್) ನಿವ್ವಳ ಮೌಲ್ಯ ದಾಟಿದ ಮೊದಲ ಭಾರತೀಯ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜನವರಿ-ಮಾರ್ಚ್ 2025 ರ ತ್ರೈಮಾಸಿಕದಲ್ಲಿ, ಆರ್‌ಐಎಲ್ ಸುಮಾರು 9 ಪ್ರತಿಶತದಷ್ಟು ಏಕೀಕೃತ ಆದಾಯದ ಬೆಳವಣಿಗೆಯೊಂದಿಗೆ 2.61 ಲಕ್ಷ ಕೋಟಿ ರೂ. ಲಾಭವನ್ನು ಗಳಿಸಿದೆ

56

ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಯ ಕಾರ್ಯಾಚರಣೆಯ ಆದಾಯ. 2,61,388 ಕೋಟಿ ರೂ. ತಲುಪಿದ್ದು, ಇದು ಹಣಕಾಸು ವರ್ಷ 24 ರ ಅದೇ ತ್ರೈಮಾಸಿಕದಲ್ಲಿ ರೂ. 2,36,533 ಕೋಟಿಗಳಿಂದ ಶೇ. 10.51 ರಷ್ಟು ಬೆಳವಣಿಗೆಯಾಗಿದೆ. ಜಿಯೋದ EBITDA ಕೂಡ ಶೇ. 17 ರಷ್ಟು ಭಾರಿ ಜಿಗಿತವನ್ನು ಕಂಡಿದ್ದು, 5G ನೆಟ್‌ವರ್ಕ್‌ನಲ್ಲಿ 191 ಮಿಲಿಯನ್ ಬಳಕೆದಾರರನ್ನು ಹೊಂದಿರುವ ವಿಶ್ವದ ಅತಿದೊಡ್ಡ ಡೇಟಾ ಕಂಪನಿಯಾಗಿದೆ.

66

ಇದಲ್ಲದೆ, ಜಿಯೋಹಾಟ್‌ಸ್ಟಾರ್ ವಿಲೀನದ ನಂತರ, ಇದು ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಾಧ್ಯಮ ಮತ್ತು ಮನರಂಜನಾ ಕಂಪನಿಯಾಗಿ ಹೊರಹೊಮ್ಮಿದೆ. ಪ್ರಾರಂಭವಾದ ಕೇವಲ ಹತ್ತು ವಾರಗಳಲ್ಲಿ, ಇದು ವಿಶ್ವದ ಅತಿದೊಡ್ಡ ಪಾವತಿಸಿದ ಬಳಕೆದಾರ ನೆಲೆಯ ಸ್ಥಾನವನ್ನು ಗಳಿಸಿದೆ.

Read more Photos on
click me!

Recommended Stories