RBI ₹100 ನೋಟುಗಳ ಬಗ್ಗೆ ಮಹತ್ವದ ಮಾಹಿತಿ ಬಿಡುಗಡೆ ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ವದಂತಿಗಳಿಗೆ ತೆರೆ ಎಳೆದಿದೆ. ಹಳೆಯ ₹100 ನೋಟುಗಳು ಚಾಲ್ತಿಯಲ್ಲಿವೆ ಮತ್ತು ಮಾನ್ಯವಾಗಿವೆ ಎಂದು RBI ಸ್ಪಷ್ಟಪಡಿಸಿದೆ.
ಹಳೆಯ ಮತ್ತು ಹೊಸ ₹100 ನೋಟುಗಳು ಎರಡೂ ಕಾನೂನುಬದ್ಧವಾಗಿ ಚಾಲ್ತಿಯಲ್ಲಿವೆ. ನಿಮ್ಮ ದೈನಂದಿನ ವ್ಯವಹಾರಗಳಲ್ಲಿ ಎರಡೂ ರೀತಿಯ ನೋಟುಗಳನ್ನು ಬಳಸಬಹುದು. ಯಾವುದೇ ಅಂಗಡಿಯವರು ಈ ನೋಟುಗಳನ್ನು ತೆಗೆದುಕೊಳ್ಳಲು ನಿರಾಕರಿಸಬಾರದು.