ಜನರಲ್‌ ಬೋಗಿ, ಸ್ಲೀಪರ್ ಕೋಚ್‌ ಸಂಖ್ಯೆ ಕಡಿತಗೊಳಿಸಿದ್ದೇ ರೈಲುಗಳಲ್ಲಿ ಜನದಟ್ಟಣೆಗೆ ಕಾರಣ? ರೈಲ್ವೆ ಸಚಿವರ ಸ್ಪಷ್ಟನೆ..

First Published Nov 17, 2023, 12:27 PM IST

ದೀಪಾವಳಿ ಹಬ್ಬದ ಸಮಯದಲ್ಲಿ ಟ್ರೈನ್‌ಗಳಲ್ಲಿ ಸಿಕ್ಕಾಪಟ್ಟೆ ಜನಸಂದಣಿ ಇತ್ತು. ಸೀಟು ಸಿಗದೆ ಅನೇಕರು ಪರದಾಡಿದ್ರು. ರೈಲುಗಳಲ್ಲಿ ಸ್ಲೀಪರ್ ಕೋಚ್‌ಗಳ ಸಂಖ್ಯೆ ಕಡಿಮೆ ಮಾಡಿರುವುದರಿಂದ ಹಾಗೂ ಪ್ರಯಾಣಿಕರು ನಾನ್-ಎಸಿ ಬರ್ತ್‌ಗಳನ್ನು ಆರಿಸಿಕೊಳ್ಳುವುದರಿಂದ ಸಮಸ್ಯೆಗಳಿಗೆ ಕಾರಣವಾಗುವ ವರದಿಗಳು ಸುಳ್ಳು. 

ದೀಪಾವಳಿ ಹಬ್ಬದ ಸಮಯದಲ್ಲಿ ಟ್ರೈನ್‌ಗಳಲ್ಲಿ ಸಿಕ್ಕಾಪಟ್ಟೆ ಜನಸಂದಣಿ ಇತ್ತು. ಸೀಟು ಸಿಗದೆ ಅನೇಕರು ಪರದಾಡಿದ್ರು. ರೈಲು ನಿಲ್ದಾಣಕ್ಕೆ ಹೋಗಿ ಟಿಕೆಟ್‌ ಸಿಗದೆ ಅನೇಕರು ವಾಪಸ್‌ ಹೋದ್ರು.

ಎಸಿ ಟಿಕೆಟ್‌ ಖಚಿತವಾದ ಪ್ರಯಾಣಿಕರೊಬ್ಬರು ಕೂಡ ಆ ರಶ್‌ನಲ್ಲಿ ರೈಲು ಹತ್ತಲಾಗದೆ ಊರಲ್ಲಿ ದೀಪಾವಳಿ ಹಬ್ಬ ಮಿಸ್‌ ಮಾಡಿಕೊಂಡ್ರು. ಇಂತಹ ಅನೇಕ ಉದಾಹರಣೆಗಳು ಸಂಭವಿಸಿದೆ.

ಈ ಹಿನ್ನೆಲೆ ಸಾಮಾನ್ಯ ಮತ್ತು ನಾನ್ ಎಸಿ ಸ್ಲೀಪರ್ ಕೋಚ್‌ಗಳ ಸಂಖ್ಯೆಯನ್ನು ರೈಲ್ವೆ ಇಲಾಖೆ ಕಡಿತಗೊಳಿಸಿದೆ ಎಂಬ ಆರೋಪ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿದೆ. ಆದರೆ, ಈ ವರದಿಗಳನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ತಳ್ಳಿಹಾಕಿದ್ದಾರೆ.

ಇದು ಸಂಪೂರ್ಣವಾಗಿ ಸುಳ್ಳು ಮತ್ತು ರೈಲುಗಳ ಸಂಯೋಜನೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದೂ ಅಶ್ವಿನಿ ವೈಷ್ಣವ್‌ ಹೇಳಿದ್ದಾರೆ. 

ರೈಲುಗಳಲ್ಲಿ ಸ್ಲೀಪರ್ ಕೋಚ್‌ಗಳ ಸಂಖ್ಯೆ ಕಡಿಮೆ ಮಾಡಿರುವುದರಿಂದ ಹಾಗೂ ಪ್ರಯಾಣಿಕರು ನಾನ್-ಎಸಿ ಬರ್ತ್‌ಗಳನ್ನು ಆರಿಸಿಕೊಳ್ಳುವುದರಿಂದ ಸಮಸ್ಯೆಗಳಿಗೆ ಕಾರಣವಾಗುವ ವರದಿಗಳು ಸುಳ್ಳು. 

ಹೊಸ ಎಲ್‌ಎಚ್‌ಬಿ ಕೋಚ್‌ಗಳನ್ನು ಪರಿಚಯಿಸಿದ ಸಮಯದಿಂದ ರೈಲಿನಲ್ಲಿ ಕೋಚ್‌ಗಳ ಪ್ರಮಾಣಿತ ಸಂಯೋಜನೆ ಇದೆ ಮತ್ತು ಎಲ್ಲಾ ರೈಲುಗಳು 22 ಕೋಚ್‌ಗಳನ್ನು ಹೊಂದಿವೆ. ರೈಲಿನಲ್ಲಿ ಸ್ಟಾಂಡರ್ಡ್ ಕೋಚ್ ಸಂಯೋಜನೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರೈಲ್ವೆ ಸಚಿವರು ಹೇಳಿದ್ದಾರೆ

ಪ್ರತಿ ರೈಲು 6 - 7 ಸ್ಲೀಪರ್ ಕೋಚ್‌, 4 ಜನರಲ್ ಕೋಚ್‌, ಒಂದು ಅಥವಾ ಶೂನ್ಯ AC 1st ಕ್ಲಾಸ್‌, ಒಂದು ಅಥವಾ ಎರಡು ಪ್ಯಾಂಟ್ರಿ ಕಾರುಗಳು, ಎರಡು 2AC ಕೋಚ್‌ಗಳು, 6 3AC ಕೋಚ್‌ಗಳು ಮತ್ತು ಒಂದು ಪವರ್ ಕಾರ್ ಅಥವಾ ಗಾರ್ಡ್ ಕೋಚ್ ಹೊಂದಿರುತ್ತದೆ ಎಂದೂ ಮಾಹಿತಿ ನೀಡಿದ್ದಾರೆ.

ಅಲ್ಲದೆ, ಏಪ್ರಿಲ್ ಮತ್ತು ಅಕ್ಟೋಬರ್ 2023 ರ ನಡುವೆ 390.2 ಕೋಟಿ ಜನರಲ್ಲಿ 95.3% ಸಾಮಾನ್ಯ ಮತ್ತು ಸ್ಲೀಪರ್ ಬೋಗಿ ರೈಲಿನಲ್ಲಿ ಪ್ರಯಾಣಿಸಿದ್ದಾರೆ. ಕೇವಲ 4.7% ಪ್ರಯಾಣಿಕರು ಹವಾನಿಯಂತ್ರಿತ ಬೋಗಿಗಳಲ್ಲಿ ಪ್ರಯಾಣಿಸಿದ್ದಾರೆ. 

ಹಾಗೂ, ಅಕ್ಟೋಬರ್ 1 ಮತ್ತು ಡಿಸೆಂಬರ್ 31 ರ ನಡುವೆ ಈ ಹಬ್ಬದ ಋತುವಿನಲ್ಲಿ ರೈಲ್ವೇ ಹೆಚ್ಚುವರಿ ರೈಲು ಪ್ರಯಾಣಗಳ ಸಂಖ್ಯೆಯನ್ನು ಗಮನಾರ್ಹವಾಗಿ ಹೆಚ್ಚಿಸಿದೆ. 

ಕಳೆದ ವರ್ಷ 2,614 ರಿಂದ ಈ ವರ್ಷ 6,754 ಹೆಚ್ಚುವರಿ ಟ್ರಿಪ್‌ಗಳಿಗೆ ಹೆಚ್ಚಿಸಿದೆ.ಇದು ಒಂದು ವರ್ಷದಲ್ಲಿ ಸುಮಾರು ಮೂರು ಪಟ್ಟು ಹೆಚ್ಚಳವಾಗಿದೆ ಎಂದೂ ಅಶ್ವಿನಿ ವೈಷ್ಣವ್‌  ಹೇಳಿದರು.

ನಾವು ಈಗಾಗಲೇ ಅಕ್ಟೋಬರ್ 1 ರಿಂದ 2,423 ಟ್ರಿಪ್‌ಗಳನ್ನು ನಿರ್ವಹಿಸಿದ್ದೇವೆ. ಪ್ರಸಕ್ತ ಹಬ್ಬದ ಋತುವಿನಲ್ಲಿ 36 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದು, ಕಳೆದ ಸೀಸನ್‌ಗೆ ಹೋಲಿಸಿದರೆ ಇದು ದುಪ್ಪಟ್ಟಾಗಿದೆ. ಗರಿಷ್ಠ ಪ್ರಯಾಣದ ಅವಧಿ ಪ್ರಾರಂಭವಾಗುವ ಮೊದಲು ಪ್ರತಿ ವರ್ಷ ನಡೆಸುವ ಅಧ್ಯಯನದ ಆಧಾರದ ಮೇಲೆ ಹೆಚ್ಚುವರಿ ರೈಲು ಪ್ರಯಾಣಗಳ ಸಂಖ್ಯೆಯನ್ನು ನಿರ್ಧರಿಸಲಾಗುತ್ತದೆ ಎಂದೂ ರೈಲ್ವೆ ಸಚಿವರು ಹೇಳಿದ್ದಾರೆ.

ಸೀಸನ್ ಪ್ರಾರಂಭವಾಗುವ ಮೂರು ತಿಂಗಳ ಮೊದಲು ಕಾಯ್ದಿರಿಸುವಿಕೆಗಳು ಮತ್ತು ಕಾಯುವ ಪಟ್ಟಿಯ ಟ್ರೆಂಡ್‌ ಮೇಲ್ವಿಚಾರಣೆ ಮಾಡಲಾಗುತ್ತದೆ. ಅದಕ್ಕೆ ಅನುಗುಣವಾಗಿ ಹೆಚ್ಚುವರಿ ರೈಲು ಟ್ರಿಪ್‌ಗಳನ್ನು ಯೋಜಿಸಲು ಕರೆ ತೆಗೆದುಕೊಳ್ಳಲಾಗಿದೆ ಎಂದೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಹೇಳಿದರು.
 

click me!