ಪ್ರಧಾನಿ ಸ್ವನಿಧಿ ಯೋಜನೆ ಪ್ರಮುಖವಾಗಿ ರಸ್ತೆ ಬದಿಯಲ್ಲಿ ಚಿಕ್ಕಪುಟ್ಟ ವ್ಯಾಪಾರ ಮಾಡುವವರಿಗಾಗಿ ತರಲಾಗಿದೆ. ಚಿಕ್ಕ ವ್ಯಾಪಾರಿಗಳಿಗೆ ಸಾಲದ ಸೌಲಭ್ಯ ನೀಡಲು ಬ್ಯಾಂಕ್ ಹಿಂದೇಟು ಹಾಕುತ್ತದೆ. ಇನ್ನು ಗ್ಯಾರೆಂಟಿ, ಶ್ಯೂರಿಟಿ ಸೇರಿದಂತೆ ಇತರ ದಾಖಲೆ ಒದಗಿಸಲು ಸಣ್ಣ ವ್ಯಾಪಾರಿಗಳು ವಿಫಲರಾಗುತ್ತಾರೆ. ಕಾರಣ ಬೀದಿ ಬದಿ ವ್ಯಾಪಾರಿಗಳು, ಸಣ್ಣ ವ್ಯಾಪಾರಿಗಳ ವಹಿವಾಟು ಬ್ಯಾಂಕ್ ಮೂಲಕ ಸಾಲ ಪಡೆಯುವ ಮಟ್ಟಕ್ಕೆ ಇರುವುದಿಲ್ಲ. ಆದರೆ ಪ್ರಧಾನಿ ಸ್ವನಿಧಿ ಯೋಜನೆ ಉಪಯುಕ್ತವಾಗಿದೆ.