ಪಾನ್ 2.0ಗೆ ಕೇಂದ್ರ ಸರ್ಕಾರ ಒಪ್ಪಿಗೆ, ಹಳೇ ಕಾರ್ಡ್ ಇರುತ್ತಾ? ಹೊಸದಾಗಿ ಮಾಡಿಸಬೇಕಾ?

First Published | Nov 26, 2024, 3:28 PM IST

ಕೇಂದ್ರ ಸರ್ಕಾರ ಪಾನ್ ಕಾರ್ಡ್ 2.0 ಯೋಜನೆಗೆ ಅನುಮೋದನೆ ನೀಡಿದೆ. ಹೆಚ್ಚು ಸುರಕ್ಷತೆ, ತೆರಿಗೆ ಪಾವತಿದಾರರು, ಉದ್ಯಮಿದಾರರು ಸೇರಿದಂತೆ ಎಲ್ಲರಿಗೂ ಸುಲಭ, ಸರಳ ಹಾಗೂ ಗರಿಷ್ಠ ಭದ್ರತೆಯ ಪಾನ್ ಕಾರ್ಡ್ 2.0 ಯೋಜನೆ ಇದಾಗಿದೆ. ಹೊಸ ಪಾನ್ ಕಾರ್ಡ್‌ನಿಂದ ಈಗಾಗಲೇ ಪಾನ್ ಕಾರ್ಡ್ ಇರುವವರು ಹೊಸದಾಗಿ ಮಾಡಿಸಿಕೊಳ್ಳಬೇಕಾ? ಅಥವಾ ಹಳೇ ಕಾರ್ಡ್ ಸಾಕಾ?  

PAN 2.0 ಯೋಜನೆ ಲಾಂಚ್

ತಿಂಗಳ ಸ್ಯಾಲರಿ, ಕೂಲಿ, ಆದಾಯ, ಉದ್ಯಮ ಸೇರಿದಂತೆ ಪ್ರತಿಯೊಬ್ಬರು ಪಾನ್ ಕಾರ್ಡ್ ಹೊಂದರುವುದು ಅತೀ ಅಗತ್ಯವಾಗಿದೆ. ಆದಾಯ ಇರುವ ವ್ಯಕ್ತಿಗಳು ಪಾನ್ ಕಾರ್ಡ್ ಹೊಂದಿರಲೇ ಬೇಕು.  ಇದೀಗ ಕೇಂದ್ರ ಸರ್ಕಾರ ಪಾನ್ ಕಾರ್ಡ್ 2.0 ಯೋಜನೆಗೆ ಅನುಮೋದನೆ ನೀಡಿದೆ. ಈ ಮೂಲಕ ಪಾನ್ ಕಾರ್ಡ್‌ನಲ್ಲಿ ಮಹತ್ವದ ಬದಲಾವಣೆ ಹಾಗೂ ಹೆಚ್ಚುವರಿ ಸುರಕ್ಷತೆ, ಸುಲಭ ಹಾಗೂ ಸರಳ ತೆರಿಗೆ ಪಾವತಿ ವ್ಯವಸ್ಥೆ ಸೇರಿದಂತೆ ಹಲವು ಪ್ರಯೋಜನಗಳನ್ನು ಈ ಮೂಲಕ ನೀಡುತ್ತಿದೆ. ಇದಕ್ಕಾಗಿ ಕೇಂದ್ರ ಕ್ಯಾಬಿನೆಟ್ ಬರೋಬ್ಬರಿ 1,435 ಕೋಟಿ ರೂಪಾಯಿ ಮೀಸಲಿಟ್ಟಿದೆ.  PAN 2.0 ಯೋಜನೆಯು ಎಲ್ಲಾ ಸರ್ಕಾರಿ ಡಿಜಿಟಲ್ ವ್ಯವಸ್ಥೆಗಳಲ್ಲಿ PAN ಸಂಖ್ಯೆಯನ್ನು ಸಾಮಾನ್ಯ ವ್ಯಾಪಾರ ಗುರುತಿಸುವಿಕೆಯನ್ನಾಗಿ ಮಾಡುವ ಗುರಿ ಹೊಂದಿದೆ.

CCEA ಒಪ್ಪಿಗೆ

ಕ್ಯಾಬಿನೆಟ್ ಆರ್ಥಿಕ ವ್ಯವಹಾರಗಳ ಸಮಿತಿ (CCEA) ಆದಾಯ ತೆರಿಗೆ ಇಲಾಖೆಯಡಿಯಲ್ಲಿ ಯೋಜನೆಗೆ ಅನುಮೋದನೆ ನೀಡಿದೆ. ಏನಿದು ಪಾನ್ ಕಾರ್ಡ್ 2.0 ಯೋಜನೆ. ಹೊಸ ಪಾನ್ ಕಾರ್ಡ್‌ನಿಂದ ಸದ್ಯ ಇರುವ ಪಾನ್ ಕಾರ್ಡ್ ಕಾರ್ಯನಿರ್ವಹಿಸುತ್ತಾ? ಪಾನ್ ಇರುವವರೂ ಹೊಸದಾಗಿ ಮಾಡಿಸಿಕೊಳ್ಳಬೇಕಾ ಅನ್ನೋ ಹಲವು ಪ್ರಶ್ನೆಗಳು ಎದ್ದಿದೆ. ಇದಕ್ಕೆ ಸಚಿವ ಅಶ್ವಿನಿ ವೈಷ್ಣವ್ ಸ್ಪಷ್ಟನೆ ನೀಡಿದ್ದಾರೆ. 

Latest Videos


ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಪ್ರಕಾರ, ಅಸ್ತಿತ್ವದಲ್ಲಿರುವ PAN ಸಂಖ್ಯೆಗಳು ಮಾನ್ಯವಾಗಿರುತ್ತವೆ.  ವರ್ಧಿತ ವೈಶಿಷ್ಟ್ಯಗಳೊಂದಿಗೆ ಹೊಸ ಕಾರ್ಡ್‌ಗಳನ್ನು ನೀಡಲಾಗುತ್ತದೆ. ಹೀಗಾಗಿ ಹಳೇ ಪಾನ್ ಕಾರ್ಡ್ ಇರುವವರು ಹೊಸ ಯೋಜನೆಯಿಂದ ಆತಂಕ ಪಡುವ ಅವಶ್ಯಕತೆ ಇಲ್ಲ. ಹಳೇ ಕಾರ್ಡ್ ಕಾರ್ಯನಿರ್ವಹಿಸುತ್ತದೆ ಎಂದಿದ್ದಾರೆ. 

ಅಪ್‌ಗ್ರೇಡ್ ಮಾಡಲಾದ PAN 2.0 ಕಾರ್ಡ್ QR ಕೋಡ್ ಸೇರಿದಂತೆ ಹೊಸ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ ಮತ್ತು ಇದನ್ನು ಉಚಿತವಾಗಿ ಒದಗಿಸಲಾಗುತ್ತದೆ. ಸದ್ಯ ಹಳೇ ಕಾರ್ಡ್ ಇರುವವರಿಗೂ ಹೊಸ ಕಾರ್ಡನ್ನು ಉಚಿತವಾಗಿ ನೀಡಲಾಗುತ್ತದೆ. ಹೀಗಾಗಿ ಹೊಸ ಕಾರ್ಡ್‌ಗಾಗಿ ಅರ್ಜಿ ಹಾಕುವುದು, ಶುಲ್ಕ ಪಾವತಿಸುವ ಅಗತ್ಯವಿಲ್ಲ. 

ಈ ಯೋಜನೆಯು PAN ಸೇವೆಗಳನ್ನು ಡಿಜಿಟಲೀಕರಣಗೊಳಿಸುತ್ತದೆ ಮತ್ತು ಸುವ್ಯವಸ್ಥಿತಗೊಳಿಸುತ್ತದೆ, ಬಳಕೆದಾರರ ಅನುಕೂಲಕ್ಕಾಗಿ ಪೇಪರ್‌ಲೆಸ್ ಆನ್‌ಲೈನ್ ಪ್ರಕ್ರಿಯೆಯನ್ನು ರಚಿಸುತ್ತದೆ. ಪಾನ್ ಕಾರ್ಡ್ ವ್ಯವಸ್ಥೆಯಲ್ಲಿ ಮತ್ತಷ್ಟು ಡಿಜಲೀಟಕರಣ ಹಾಗೂ ಸರ್ಕಾರದ ಎಲ್ಲಾ ದಾಖಲೆಗಳಲ್ಲೂ ಪಾನ್ ಕಾರ್ಡ್ ಮಾಹಿತಿ ಲಭ್ಯವಾಗಲಿದೆ. ಇದರಿಂದ ಅರ್ಹರಿಗೆ ಸೌಲಭ್ಯಗಳು ಸಿಗಲು ನೆರವಾಗಲಿದೆ.

PAN 2.0 ಡೇಟಾ ಸ್ಥಿರತೆ, ಪರಿಸರ ಪ್ರಕ್ರಿಯೆಗಳು ಮತ್ತು ಮೂಲಸೌಕರ್ಯ ಭದ್ರತೆಯನ್ನು ವೆಚ್ಚವನ್ನು ನಿರ್ವಹಿಸುವಾಗ ವರ್ಧಿಸುತ್ತದೆ. ಪಾನ್ 2.0 ಯೋಜನೆಯಿಂದ ಡೇಟಾ ಮಾಹಿತಿ, ತೆರಿಗೆ ಪಾವತಿ ವ್ಯವಸ್ಥೆ ಸೇರಿದಂತೆ ಪಾನ್ ಸಂಬಂದಿಸಿದ ಕೆಲಸಗಳು ಅತೀ ಸುಲಭವಾಗಿ ನಡೆಯಲಿದೆ. 

ಪ್ರಸ್ತುತ PAN ಸ್ಥಿತಿ

ಈ ಯೋಜನೆಯು ಇ-ಆಡಳಿತ ವರ್ಧನೆಗಳು ಮತ್ತು PAN/TAN ಸೇವೆಗಳನ್ನು ಮರುವಿನ್ಯಾಸಗೊಳಿಸುವುದು, ಅಸ್ತಿತ್ವದಲ್ಲಿರುವ ವ್ಯವಸ್ಥೆಗಳನ್ನು ಸಂಯೋಜಿಸುವುದರ ಮೇಲೆ ಕೇಂದ್ರೀಕರಿಸುತ್ತದೆ.

click me!