ಪೋಸ್ಟ್ ಆಫೀಸ್ ಯೋಜನೆಗಳು
ನಿಮ್ಮ ಹಣವನ್ನು ಹೂಡಿಕೆ ಮಾಡಿ ಉತ್ತಮ ಲಾಭ ಗಳಿಸಲು ಬಯಸಿದರೆ, ಪೋಸ್ಟ್ ಆಫೀಸ್ ಯೋಜನೆಯಲ್ಲಿ ಹಣ ಹೂಡಿ. ಇತರ ಪೋಸ್ಟ್ ಆಫೀಸ್ ಯೋಜನೆಗಳಂತೆ ಇದರಲ್ಲೂ ಹಣ ಹೂಡಲು ಯಾವುದೇ ಅಪಾಯವಿಲ್ಲ.
ಪೋಸ್ಟ್ ಆಫೀಸ್ ಉಳಿತಾಯ ಯೋಜನೆ
ನೀವು ಉಳಿಸಿದ ಹಣವನ್ನು ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ಒಮ್ಮೆ ಮಾತ್ರ ಠೇವಣಿ ಇಡಬೇಕು. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಉತ್ತಮ ಬಡ್ಡಿ ದೊರೆಯುತ್ತದೆ.
ಮಾಸಿಕ ಆದಾಯ ಯೋಜನೆ
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿದ ಹಣಕ್ಕೆ ಶೇ.7.4 ಬಡ್ಡಿ ಸಿಗುತ್ತದೆ. ಕೇವಲ ₹1000ಯಿಂದ ಈ ಯೋಜನೆಯಲ್ಲಿ ಹೂಡಿಕೆ ಆರಂಭಿಸಬಹುದು. ಈ ಯೋಜನೆಯ ಅವಧಿ 5 ವರ್ಷಗಳು. ಹೂಡಿಕೆದಾರರು ₹9 ಲಕ್ಷದವರೆಗೆ ಹೂಡಿಕೆ ಮಾಡಬಹುದು.
ಮಾಸಿಕ ₹5,000 ಆದಾಯ
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ₹9 ಲಕ್ಷ ಹೂಡಿಕೆ ಮಾಡಿದರೆ, ಗರಿಷ್ಠ ಲಾಭ ಗಳಿಸಬಹುದು. ಇದಕ್ಕೆ ವಾರ್ಷಿಕ ಶೇ.7.4 ಬಡ್ಡಿ ಸಿಗುತ್ತದೆ. ಇದರಿಂದ ಪ್ರತಿ ತಿಂಗಳು ₹5,550 ಲಾಭ ಸಿಗುತ್ತದೆ. ₹5 ಲಕ್ಷ ಹೂಡಿದರೆ, ಪ್ರತಿ ತಿಂಗಳು ₹3,084 ಲಾಭ ಸಿಗುತ್ತದೆ.