ಒಂದು ವಾರದಲ್ಲಿ 4 ಬಾರಿ ದರ ಏರಿಕೆ; ಪೆಟ್ರೋಲ್-ಡೀಸೆಲ್ ಸಾರ್ವಕಾಲಿಕ ಗರಿಷ್ಠ ಬೆಲೆ !

Published : May 14, 2021, 03:13 PM ISTUpdated : May 14, 2021, 03:19 PM IST

ಒಂದೆಡೆಯಿಂದ ಕೊರೋನಾ ಜನರ ಜೀವವನ್ನು ಹಿಂಡುತ್ತಿದೆ, ಮತ್ತೊಂದಡೆ ಬೆಲೆ ಏರಿಕೆಯಿಂದ ಜೀವನ ನಡೆಸುವುದೇ ಕಷ್ಟವಾಗಿದೆ. ಇದೀಗ ಒಂದೇ ವಾರದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ 4ನೇ ಬಾರಿಗೆ ಏರಿಕೆಯಾಗಿದೆ. ಈ ಮೂಲಕ ಗರಿಷ್ಠ ದರ ಏರಿಕೆಯಾಗಿದೆ. ಇಂದಿನ ದರ ಇಲ್ಲಿದೆ.

PREV
17
ಒಂದು ವಾರದಲ್ಲಿ 4 ಬಾರಿ ದರ ಏರಿಕೆ; ಪೆಟ್ರೋಲ್-ಡೀಸೆಲ್ ಸಾರ್ವಕಾಲಿಕ ಗರಿಷ್ಠ ಬೆಲೆ !

ದೇಶದಲ್ಲಿಂದು ಮತ್ತೆ ಪೆಟ್ರೋಲ್-ಡೀಸೆಲ್ ದರ ಏರಿಕೆಯಾಗಿದೆ. ಈ ಮೂಲಕ ಒಂದೇ ವಾರದಲ್ಲಿ ನಾಲ್ಕು ಬಾರಿ ಇಂಧನ ದರ ಏರಿಕೆಯಾಗಿದೆ. ಇಂದು(ಮೇ.14) ಪೆಟ್ರೋಲ್ ಬೆಲೆ 29 ಪೈಸೆ ಹಾಗೂ ಡೀಸೆಲ್ ಬೆಲೆ 34 ಪೈಸೆ ಹೆಚ್ಚಳವಾಗಿದೆ.

27

ಈ ದರ ಏರಿಕೆಯಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಂದು ಪೆಟ್ರೋಲ್ ಬೆಲೆ  92.34 ರೂಪಾಯಿ ಪ್ರತಿ ಲೀಟರ್‌ಗೆ, ಇನ್ನು ಡೀಸೆಲ್ ಬೆಲೆ 82.95 ರೂಪಾಯಿ ಪ್ರತಿ ಲೀಟರ್‌ಗೆ ಏರಿಕೆಯಾಗಿದೆ.

37

ಬೆಂಗಳೂರಿಲ್ಲಿ ಪೆಟ್ರೋಲ್ ಬೆಲೆ 95.11 ರೂಪಾಯಿಗೆ ಏರಿಕೆಯಾಗಿದ್ದರೆ, ಡೀಸೆಲ್ ಬೆಲೆ 87.94 ರೂಪಾಯಿಗೆ ಏರಿಕೆಯಾಗಿದೆ. ಈ ಮೂಲಕ ಕರ್ನಾಟಕದಲ್ಲಿ ಇಂಧನ ದರ ಶತಕದತ್ತ ಮುನ್ನಗ್ಗುತ್ತಿದೆ.

47

ರಾಜಸ್ಥಾನ, ಮಧ್ಯ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಕೆಲ ರಾಜ್ಯಗಳು ಹಾಗೂ ಪ್ರಮುಖ ನಗರಗಳಲ್ಲಿ ಈಗಾಗಲೇ ಇಂಧನ ಬೆಲೆ 100 ರೂಪಾಯಿ ಗಡಿ ದಾಟಿದೆ.

57

ಮುಂಬೈನಲ್ಲಿ ಒಂದು ಲೀಟರ್ ಪೆಟ್ರೋಲ್ ಈಗ. 98.65 ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ  90.11 ರೂಪಾಯಿ ಆಗಿದೆ.  
 
67

ರಾಜಸ್ಥಾನದ ಶ್ರೀ ಗಂಗನಗರ ಜಿಲ್ಲೆ ದೇಶದ ಅತ್ಯಂತ ದುಬಾರಿ ಇಂಧನ ದರ ಹೊಂದಿದ ಜಿಲ್ಲೆಯಾಗಿದೆ. ಪೆಟ್ರೋಲ್ ಬೆಲೆ 103.27 ರೂಪಾಯಿ ಆಗಿದ್ದು, ಡೀಸೆಲ್ ಬೆಲೆ 95.70 ರಷ್ಟಿದೆ.

77

ಒಂದೇ ವಾರದಲ್ಲಿ ಇದು ನಾಲ್ಕನೇ ಬೆಲೆ ಏರಿಕೆಯಾಗಿದ್ದರೆ, ಮೇ.04 ರಿಂದ ಇಲ್ಲೀವರೆಗೆ ಇದೀಗ 8 ಬಾರಿ ಇಂಧನ ಬೆಲೆ ಏರಿಕೆಯಾಗಿದೆ. ಪಂಚ ರಾಜ್ಯ ಚುನಾವಣೆ ಘೋಷಣೆಯಾದ ಬಳಿಕ ಇಂಧನ ದರ ಏರಿಕೆಗೆ ಬ್ರೇಕ್ ಬಿದ್ದಿತ್ತು. ಫಲಿತಾಂಶ ಪ್ರಕಟಗೊಂಡ ಬಳಿಕ ಮತ್ತೆ ಇಂಧನ ದರ ಏರಿಕೆ ಮುಂದುವರಿದಿದೆ.

click me!

Recommended Stories