ಬಂಪರ್‌ ಆಫರ್‌ ನೀಡಿದ ಓಯೋ, ಕಂಪನಿಗೆ ಹೆಸರು ಸೂಚಿಸಿ 3 ಲಕ್ಷ ಗೆಲ್ಲಿ!

Published : May 29, 2025, 05:41 PM IST

ಭಾರತದಲ್ಲಿ ಒಂದು ಸಣ್ಣ ಸ್ಟಾರ್ಟ್‌ಅಪ್ ಆಗಿ ಶುರುವಾದ OYO ಈಗ ಜಾಗತಿಕವಾಗಿ ಬೆಳೆದಿದೆ. ಭಾರಿ ಲಾಭ ಗಳಿಸುತ್ತಿರುವ OYO ಶೀಘ್ರದಲ್ಲೇ IPOಗೆ ಹೋಗಲು ಸಿದ್ಧವಾಗುತ್ತಿದೆ. ಈ ಹೊತ್ತಿನಲ್ಲಿ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

PREV
15
ರಿತೇಶ್ ಅಗರ್ವಾಲ್ ಪ್ರಕಟಣೆ

OYO ಸಂಸ್ಥಾಪಕ ರಿತೇಶ್ ಅಗರ್ವಾಲ್ ಒಂದು ಮಹತ್ವದ ಪ್ರಕಟಣೆ ಮಾಡಿದ್ದಾರೆ. ಕಂಪನಿಯ ಮೂಲ ಕಂಪನಿಗೆ (ಕಾರ್ಪೊರೇಟ್ ಬ್ರ್ಯಾಂಡ್) ಹೊಸ ಹೆಸರಿಡುವುದಾಗಿ ತಿಳಿಸಿದ್ದಾರೆ. ಆದರೆ, OYO Hotels, OYO Vacation Homes, OYO Workspaces ಹಾಗೆಯೇ ಮುಂದುವರಿಯುತ್ತವೆ. ಹೆಸರು ಬದಲಾಗುವುದು ಕೇವಲ OYO ಮೂಲ ಕಂಪನಿಗೆ ಮಾತ್ರ.

25
ಜಾಗತಿಕ ಬ್ರ್ಯಾಂಡ್ ಆಗುವ ಗುರಿ

OYO ಜಾಗತಿಕ ಬ್ರ್ಯಾಂಡ್ ಆಗಬೇಕೆಂಬ ಗುರಿಯೊಂದಿಗೆ ಮುನ್ನಡೆಯುತ್ತಿದೆ ಎಂದು ತಿಳಿದುಬಂದಿದೆ. ಜಾಗತಿಕ ಮಟ್ಟದಲ್ಲಿ ನಗರ ನಾವೀನ್ಯತೆ ಮತ್ತು ಆಧುನಿಕ ವಾಸಸ್ಥಳವನ್ನು ಮುನ್ನಡೆಸುವ ಮೂಲ ಕಂಪನಿಗೆ ಹೊಸ ಹೆಸರನ್ನು ಇಡುತ್ತಿರುವುದಾಗಿ ರಿತೇಶ್ ಅಗರ್ವಾಲ್  ಎಕ್ಸ್‌ನಲ್ಲಿ ತಿಳಿಸಿದ್ದಾರೆ.

“ಭಾರತದಲ್ಲಿ ಹುಟ್ಟಿದ OYO ಜಾಗತಿಕ ಬ್ರ್ಯಾಂಡ್ ಆಗಿ ಬೆಳೆಯಲು ಇದು ಸಕಾಲ. ಪ್ರಪಂಚಕ್ಕೆ ಸರಿಹೊಂದುವಂತೆ, ಜಾಗತಿಕ ದೃಷ್ಟಿಯಲ್ಲಿ ನಿಲ್ಲುವಂತೆ ನಾವು ಹೊಸ ಹೆಸರನ್ನು ಹುಡುಕುತ್ತಿದ್ದೇವೆ” ಎಂದು ಬರೆದಿದ್ದಾರೆ.

35
ಆಸಕ್ತರಿಗೆ ಆಹ್ವಾನ:

OYO ಹೊಸ ಹೆಸರನ್ನು ಸೂಚಿಸುವ ಅವಕಾಶವನ್ನು ಜನರಿಗೆ ನೀಡಿದೆ. ನೀವು ಸೂಚಿಸಿದ ಹೆಸರು ಅಂಗೀಕಾರವಾದರೆ ₹3 ಲಕ್ಷ ನಗದು ಬಹುಮಾನ ಸಿಗುತ್ತದೆ. ಜೊತೆಗೆ OYO ಸಂಸ್ಥಾಪಕರನ್ನು ಭೇಟಿಯಾಗುವ ಅವಕಾಶವೂ ಸಿಗುತ್ತದೆ ಎಂದು ರಿತೇಶ್ ಟ್ವೀಟ್‌ನಲ್ಲಿ ಬರೆದಿದ್ದಾರೆ.

45
ಹೆಸರು ಹೇಗಿರಬೇಕು?

ಹೊಸ ಹೆಸರು ಹೇಗಿರಬೇಕು ಎಂಬುದರ ಬಗ್ಗೆ ಕೆಲವು ಮಾರ್ಗಸೂಚಿಗಳನ್ನು ನೀಡಿದ್ದಾರೆ:

* ದಿಟ್ಟವಾಗಿರಬೇಕು

* ಒಂದೇ ಪದವಾಗಿರಬೇಕು

* ಜಾಗತಿಕ ಛಾಯೆ ಇರಬೇಕು

* ಮಾನವೀಯ ಸ್ಪರ್ಶದೊಂದಿಗೆ ನೆನಪಿನಲ್ಲಿ ಉಳಿಯುವಂತೆ ಇರಬೇಕು

* ಆತಿಥ್ಯವನ್ನು ಮೀರಿ ವಿಸ್ತರಿಸುವಂತೆ ವಿಶಾಲವಾದ ಭಾವನೆ ನೀಡಬೇಕು

55
IPO ಪ್ರಕ್ರಿಯೆ ಮೂರನೇ ಬಾರಿಗೆ ಆರಂಭ

ಇದರ ಜೊತೆಗೆ OYO ಮತ್ತೆ IPO (ಇನಿಷಿಯಲ್ ಪಬ್ಲಿಕ್ ಆಫರಿಂಗ್) ಪ್ರಕ್ರಿಯೆಯನ್ನು ಆರಂಭಿಸಿದೆ. OYO IPOಗೆ ಪ್ರಯತ್ನಿಸುತ್ತಿರುವುದು ಇದು ಮೂರನೇ ಬಾರಿ. ಪ್ರಸ್ತುತ ದೇಶೀಯ ಮತ್ತು ಅಂತರರಾಷ್ಟ್ರೀಯ ಬ್ಯಾಂಕುಗಳಿಂದ ಆಫರ್‌ಅನ್ನು  ಸ್ವೀಕರಿಸುತ್ತಿದೆ. 2026ರ ಆರಂಭದಲ್ಲಿ ಷೇರುಪೇಟೆಯಲ್ಲಿ ಪಟ್ಟಿ ಮಾಡಿಸಿಕೊಳ್ಳುವ ಗುರಿಯೊಂದಿಗೆ ಮುನ್ನಡೆಯುತ್ತಿದೆ.

ಇದರ ಭಾಗವಾಗಿ ಜೂನ್‌ನಲ್ಲಿ ಲಂಡನ್‌ನಲ್ಲಿ ಒಂದು ಮಹತ್ವದ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ. ಇದರಲ್ಲಿ OYO ಮಂಡಳಿ ಸದಸ್ಯರು ಮತ್ತು ಪ್ರಮುಖ ಷೇರುದಾರರಾದ ಸಾಫ್ಟ್‌ಬ್ಯಾಂಕ್ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

Read more Photos on
click me!

Recommended Stories