ಮದುವೆ ಸೀಸನ್ ಮುಗಿಯುತ್ತಿದ್ದಂತೆ ಕರ್ನಾಟಕದಲ್ಲಿ ಇಳಿಕೆಯಾದ ಚಿನ್ನದ ಬೆಲೆ

Published : May 29, 2025, 03:59 PM IST

ಮೇ ತಿಂಗಳು ಅಂತ್ಯಗೊಳ್ಳುತ್ತಿದೆ. ಮುಂಗಾರು ಮಳೆ ಅಬ್ಬರಿಸುತ್ತಿದೆ. ಮದುವೆ ಸಮಾರಂಭ, ಕಾರ್ಯಕ್ರಮಗಳು ಸೀಸನ್ ಮುಗಿಯುತ್ತಿದ್ದಂತೆ ಇತ್ತ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಪ್ರಮುಖವಾಗಿ ಕರ್ನಾಟಕದಲ್ಲಿ ಇಂದು(ಮೇ.29) ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ.

PREV
15

ಚಿನ್ನದ ಬೆಲೆ ಇದೀಗ ಪ್ರತಿ ದಿನ ಏರಿಳಿತ ಕಾಣುತ್ತಿದೆ. 1 ಲಕ್ಷ ರೂಪಾಯಿ ಗಡಿ ದಾಟಿ ದಾಖಲೆ ಬರೆದಿದ್ದ ಚಿನ್ನ ಬಳಿಕ ಹಂತ ಹಂತವಾಗಿ ಇಳಿಕೆಯಾಗಿತ್ತು. ಇದರಿಂದ ಹಲವರು ನಿಟ್ಟಿಸಿರು ಬಿಟ್ಟಿದ್ದರು. ಇದೀಗ ಚಿನ್ನದ ಮಾರುಕಟ್ಟೆ ಜನಸಾಮಾನ್ಯರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಿದೆ. ಮುಂಗಾರು ಮಳೆ ಅಬ್ಬರಿಸಲು ಆರಂಭಗೊಂಡಿದೆ. ಇತ್ತ ಮದುವೆ ಸೇರಿದಂತೆ ಇತರ ಕಾರ್ಯಕ್ರಮಗಳ ಸೀಸನ್ ಅಂತ್ಯಗೊಳ್ಳುತ್ತಿದೆ. ಇದರ ಬೆನ್ನಲ್ಲೇ ಚಿನ್ನದ ದರದಲ್ಲೂ ಇಳಿಕೆಯಾಗುತ್ತಿದೆ. ಮೇ.29 ರಂದು ಚಿನ್ನದ ದರ ಇಳಿಕೆಯಾಗಿದೆ.

25

ಕರ್ನಾಟಕದಲ್ಲಿ ಚಿನ್ನದ ದರ ಇಳಿಕೆಯಾಗಿದೆ. ದೇಶ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಮಹತ್ವದ ಬೆಳವಣಿಗೆ ಬೆನ್ನಲ್ಲೇ ಇಂದು ಚಿನ್ನದ ದರದಲ್ಲಿ ವ್ಯತ್ಯಾಸವಾಗಿದೆ. ಅಮೆರಿಕದ ಫೆಡರಲ್ ಕೋರ್ಟ್ ಡೋನಾಲ್ಡ್ ಟ್ರಂಪ್ ತೆರಿಗೆ ನೀತಿ ಕುರಿತು ಮಹತ್ವದ ಆದೇಶ ನೀಡಿದ ಬೆನ್ನಲ್ಲೇ ದೇಶದಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ. ಹೀಗಾಗಿ ಕರ್ನಾಟಕದಲ್ಲಿ ಇಂದು ಚಿನ್ನ ಖರೀದಿ ಮಾಡುವವರಿಗೆ ಇದರ ಲಾಭ ಸಿಗಲಿದೆ.

35

ಬೆಂಗಳೂರಿನಲ್ಲಿ ಇಂದು24 ಕಾರೆಟ್ ಚಿನ್ನದ ಬೆಲೆಯಲ್ಲಿ 10 ಗ್ರಾಂಗೆ 400 ರೂಪಾಯಿ ಕಡಿತಗೊಂಡಿದೆ. ಈ ಮೂಲಕ 24 ಕಾರೆಟ್ 10 ಗ್ರಾಂ ಚಿನ್ನಕ್ಕೆ ಬೆಂಗಳೂರಿನಲ್ಲಿ 97040 ರೂಪಾಯಿ ಆಗಿದೆ. ಇನ್ನು 22 ಕಾರೆಟ್ ಚಿನ್ನದ ಬೆಲೆಯಲ್ಲೂ 400 ರೂಪಾಯಿ ಇಳಿಕೆಯಾಗಿದೆ. ಇದೀಗ ರಾಜ್ಯದಲ್ಲಿ 10 ಗ್ರಾಂ 22 ಕಾರೆಟ್ ಚಿನ್ನದ ಬೆಲೆ 88950 ರೂಪಾಯಿ ಆಗಿದೆ. 19 ಕಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 330 ರೂಪಾಯಿ ಇಳಿಕೆಯಾಗಿದೆ. ಇದರೊಂದಿಗೆ 10 ಗ್ರಾಂ ಚಿನ್ನಕ್ಕೆ 72,780 ರೂಪಾಯಿ ಆಗಿದೆ.

45

ಕರ್ನಾಟಕದಲ್ಲಿ ಬೆಳ್ಳಿ ಬೆಲೆಯಲ್ಲೂ ಇಳಿಕೆಯಾಗಿದೆ. ಇದೀಗ ರಾಜ್ಯದಲ್ಲಿ 1 ಕೆಜಿ ಚಿನ್ನದ ಬೆಲೆ 99,900 ರೂಪಾಯಿ ಆಗಿದೆ. ಕರ್ನಾಟಕದಲ್ಲಿ ಇಳಿಕೆಯಾಗರುವ ಇಂದಿನ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಜಿಎಸ್‌ಟಿ, ಮೇಕಿಂಗ್ ಚಾರ್ಜಸ್ ಸೇರಿದಂತೆ ಇತರ ಯಾವುದೇ ಚಾರ್ಜಸ್ ಸೇರಿಸಿಲ್ಲ. ಇದು ಖರೀದಿಸುವ ಆಭರಣ, ಚಿನ್ನ, ಮೊತ್ತದ ಮೇಲೆ ಇತರ ಚಾರ್ಜಸ್ ಸೇರಿಸಲಾಗುತ್ತದೆ.

55

ಪ್ರಮುಖವಾಗಿ ಇಂದಿನ ಚಿನ್ನದ ಬೆಲೆ ಇಳಿಕೆ ಅಮೆರಿಕ ಮಾರುಕಟ್ಟೆಯಲ್ಲಾಗಿರುವ ತಲ್ಲಣ ಕಾರಣವಾಗಿದೆ. ಟ್ರಂಪ್ ತೆರಿಗೆ ನೀತಿ ವಿರುದ್ಧ ಫೆಡರಲ್ ಕೋರ್ಟ್ ಆದೇಶ ಹೊರಡಿಸಿತ್ತು. ಇದರಿಂದ ಚಿನ್ನದ ಆಮದು ಮೇಲಿನ ಸುಂಕ ಕಡಿತಗೊಳ್ಳಲಿದೆ. ಈ ಆದೇಶ ಹೊರಬಿದ್ದ ಬೆನ್ನಲ್ಲೇ ಚಿನ್ನದ ಬೆಲೆ ಇಳಿಕೆಯಾಗಿದೆ. ಇದು ಭಾರತ ಸೇರಿದಂತ ಇತರ ಚಿನ್ನ ಮಾರುಕಟ್ಟೆ ಮೇಲೂ ಪರಿಣಾಮ ಬೀರಿದೆ.

Read more Photos on
click me!

Recommended Stories