ಪ್ರವಾಸೋದ್ಯಮ ಬಿಟ್ಟರೆ ನೀಲಗಿರಿಯ ಮುಖ್ಯ ಉದ್ಯೋಗ ಕೃಷಿ. ನೀಲಗಿರಿಯಲ್ಲಿ ಬೆಳೆಯುವ ಕ್ಯಾರೆಟ್, ಆಲೂಗಡ್ಡೆ, ಎಲೆಕೋಸು, ಮೂಲಂಗಿ, ಬೀಟ್ರೂಟ್ ದೇಶದ ಹಲವು ಭಾಗಗಳಿಗೆ ಹೋಗುತ್ತವೆ. ಕ್ಯಾರೆಟ್ ಬೆಳೆ ಮುಖ್ಯ. ಚೆನ್ನೈ, ಮೆಟ್ಟುಪಾಳ್ಯಂ ಮಾರುಕಟ್ಟೆಗಳಿಗೆ ಊಟಿ ಕ್ಯಾರೆಟ್ ಹೋಗುತ್ತದೆ. ಕಿಲೋ 25 ರಿಂದ 35 ರೂ. ಇದ್ದ ಕ್ಯಾರೆಟ್ ಬೆಲೆ ಏಕಾಏಕಿ ಏರಿದೆ. ದೀಪಾವಳಿಗೆ ಕಿಲೋ 110 ರೂ. ಆಗಿದೆ. ರೈತರಿಗೆ ಖುಷಿ.