ಈ ಸೇವೆಗೆ ಯಾವುದೇ ಶುಲ್ಕವಿಲ್ಲ. ಆದರೆ ಮನೆಗೆ ಬಂದು ಸೇವೆ ನೀಡಿದ್ದಕ್ಕೆ ಪೋಸ್ಟ್‌ಮ್ಯಾನ್‌ಗೆ ಸರ್ವಿಸ್ ಚಾರ್ಜ್ ಕೊಡಬೇಕಾಗುತ್ತದೆ. ಆಧಾರ್ ATM ಬಳಸಲು, ಆಧಾರ್ ಲಿಂಕ್ ಆದ ಬ್ಯಾಂಕ್ ಖಾತೆ, ಬಯೋಮೆಟ್ರಿಕ್ ಕಡ್ಡಾಯ. ಆನ್‌ಲೈನ್ ಆಧಾರ್ ATM (AePS) ಸೇವೆ ಬಳಸಲು ಆಧಾರ್ ಕಾರ್ಡ್ ತೆಗೆದುಕೊಂಡು ಹೋಗುವ ಅವಶ್ಯಕತೆಯಿಲ್ಲ. ಆದರೆ ವ್ಯವಹಾರ ಯಶಸ್ವಿಯಾಗಲು ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಲಿಂಕ್ ಮಾಡಿರಬೇಕು.
ನೀವು ಹಣ ಡ್ರಾ ಮಾಡಿದ ನಂತರ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಹಣ ವರ್ಗಾವಣೆಯ SMS ಬರುತ್ತದೆ. ಈ ಸಂದೇಶವನ್ನು ಇಂಡಿಯನ್ ಪೋಸ್ಟಲ್ ಸರ್ವಿಸ್ ಮತ್ತು ನಿಮ್ಮ ಬ್ಯಾಂಕ್ ಕಳುಹಿಸುತ್ತದೆ.