ಅಂಬಾನಿ ಕುಟುಂಬ ಭಾರತದಲ್ಲಿ ಮಾತ್ರವಲ್ಲದೇ ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿಯೂ ಇದೆ.
ಮುಖೇಶ್ ಅಂಬಾನಿ ಬಳಿ ಕಾರಿನ ದೊಡ್ಡ ಸಂಗ್ರಹವೇ ಇದೆ. ವಿಶ್ವದ ಅತ್ಯಂತ ದುಬಾರಿ ಕಾರನ್ನು ಅವರು ಹೊಂದಿದ್ದಾರೆ.
ಮುಖೇಶ್ ಅಂಬಾನಿ ತಮ್ಮ ಪತ್ನಿ ನೀತಾರಿಗಾಗಿ ವಿಶ್ವದ ಅತ್ಯಂತ ದುಬಾರಿ ಕಾರನ್ನು ಖರೀದಿಸಿದ್ದಾರೆ. ಅವರು ಇನ್ನೂ ಅನೇಕ ದುಬಾರಿ ಕಾರುಗಳನ್ನು ಹೊಂದಿದ್ದರೂ, ಈ ಕಾರು ಜನರ ಗಮನ ಸೆಳೆದಿದೆ.
ನೀತಾ ಅಂಬಾನಿಯ ಹೊಸ ಕಾರು 'ಆಡಿ ಎ 9 ಕ್ಯಾಮೆಲಿಯನ್'. ಇದು ಆಡಿಯ ಸ್ಪೆಷಲ್ ಅಡಿಶನ್ ಆಗಿದ್ದು ಕೆಲವೇ ಯೂನಿಟ್‌ಗಳನ್ನು ಮಾತ್ರ ತಯಾರಿಸಲಾಗಿತ್ತು.
ಈ ಕಾರನ್ನು ಆರ್ಡರ್ ಮಾಡಿ ವಿದೇಶದಿಂದತರಿಸಿಲಾಗಿದೆ. ಇದರ ಬೆಲೆ 90 ಕೋಟಿಗಳಾಗಿದ್ದರೂ, ಭಾರತವನ್ನು ತಲಪುವ ವೆಚ್ಚವು ಸೇರಿ ಇದರ ಮೌಲ್ಯ 100 ಕೋಟಿ ಮುಟ್ಟಿದೆ.
ಮರ್ಸಿಡಿಸ್ ಬೆಂಜ್ ಎಸ್ ಕ್ಲಾಸ್, ಬೆಂಟ್ಲೆ ಕಾಂಟಿನೆಂಟಲ್ ಫ್ಲೈಯಿಂಗ್ ಸ್ಪರ್, ರೋಲ್ಸ್ ರಾಯ್ಸ್ ಫ್ಯಾಂಟಮ್ ಮತ್ತು ಬಿಎಂಡಬ್ಲ್ಯು 7 ಸಿರಿಸ್ ಇನ್ನೂ ಅನೇಕ ದುಬಾರಿ ಕಾರುಗಳು ಮುಖೇಶ್ ಅಂಬಾನಿ ಮತ್ತು ನೀತಾ ಅವರ ಗ್ಯಾರೇಜ್‌ನಲ್ಲಿದೆ.
ಇನ್ನೂ ಮುಖೇಶ್ ಅಂಬಾನಿ ಕಾರು ಡ್ರೈವರ್‌ಗೆ ನೀಡುವ ಸಂಬಳ ಎಷ್ಟು ಗೊತ್ತಾ?
ಮಾಧ್ಯಮ ವರದಿಗಳ ಪ್ರಕಾರ, ಮುಖೇಶ್ ಅಂಬಾನಿ ತಮ್ಮ ಚಾಲಕರಿಗೆ ವರ್ಷಕ್ಕೆ 24 ಲಕ್ಷ ರೂ ಸಂಬಳ ನೀಡಲಾಗುತ್ತದೆ. ಇಷ್ಟು ಸಂಬಳವನ್ನು ಭಾರತದಲ್ಲಿ ಕಂಪನಿಗಳಲ್ಲಿ ಕೆಲಸದಲ್ಲಿರುವರೂ ಪಡೆಯುವುದು ಕಷ್ಟ