ನಿರೀಕ್ಷೆಗೂ ಮೀರಿ ಕುಸಿದ ಚಿನ್ನದ ದರ, ಗ್ರಾಹಕರಿಗೆ ಸಂಭ್ರಮ: ಇಲ್ಲಿದೆ ಇಂದಿನ ಗೋಲ್ಡ್ ರೇಟ್!

First Published | Nov 24, 2020, 1:23 PM IST

ದೀಪಾವಳಿಗೆ ತೆರೆ, ಚಿನ್ನದ ದರವೂ ಇಳಿಕೆ| ಎರಡು ದಿನ ಕೊಂಚ ಏರಿದ್ದ ಚಿನ್ನದ ಬೆಲೆ ಮತ್ತೆ ಕುಸಿತ| ಹೀಗಿದೆ ನೋಡಿ ಇಂದು ನ.24ರ ಗೋಲ್ಡ್‌ ರೇಟ್

ಕೊರೋನಾ ಹಾವಳಿ ಹೆಚ್ಚಿದಾಗಿನಿಂದಲೂ ಚಿನ್ನದ ದರ ಗ್ರಾಹಕರನ್ನು ಕಂಗಾಲುಗೊಳಿಸಿದೆ. ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದ ಗೋಲ್ಡ್ ರೇಟ್ ಬಳಿಕ ಕೊಂಚ ಕುಸಿದಿತ್ತಾದರೂ ಹಾವೇಣಿ ಆಟ ಮುಂದುವರೆಸಿತ್ತು. ದೀಪಾವಳಿ ವೇಳೆಗೆ ಕಡಿಮೆಯಾಗಬಹುದೆಂದು ಭಾವಿಸಿದ್ದರೂ ಈ ನಿರೀಕ್ಷೆ ಹುಸಿಯಾಗಿತ್ತು.
ಕೊರೋನಾ ಕಾಲದಲ್ಲಿ ಉದ್ಯಮಗಳು ನೆಲ ಕಚ್ಚಿದಾಗ ಹೆಚ್ಚಿನ ಮಂದಿ ಚಿನ್ನದಲ್ಲಿ ಹಣ ಹೂಡಿಕೆ ಮಾಡಿದ್ದೇ ಬೆಲೆ ಏರಿಕೆಗೆ ಕಾರಣವಾಗಿತ್ತು.
Tap to resize

ಆದರೆ ದೀಪಾವಳಿ ಹಬ್ಬಕ್ಕೆ ತೆರೆ ಬಿದ್ದ ಬೆನ್ನಲ್ಲೇ ಚಿನ್ನದ ದರ ಕುಸಿದಿದ್ದು, ಗ್ರಾಹಕರಿಗೆ ಖುಷಿ ನೀಡಿದೆ.
ಇಂದು ಬೆಂಗಳೂರಿನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ 900 ರೂ. ಕುಸಿದು 46,200 ರೂಪಾಯಿ ಆಗಿದೆ.
ಇನ್ನು, 24 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರದಲ್ಲೂ 980 ರೂ. ಇಳಿಕೆಯಾಗಿ 50,400 ರೂಪಾಯಿ ಆಗಿದೆ.
ಇನ್ನು ಇತ್ತ ಬೆಳ್ಳಿ ದರದಲ್ಲೂ 800ರೂ ಇಳಿಕೆಯಾಗಿದ್ದು, ಒಂದು ಕೆ. ಜಿ. ಬೆಳ್ಳಿ ದರ 62,300ರೂ ಆಗಿದೆ.
ಒಂದು ವಾರದಲ್ಲಿ ದಾಖಲೆಯ ಇಳಿಕೆ: ದೀಪಾವಳಿ ಕೊನೆಗೊಂಡ ಮರುದಿನದಿಂದಲೇ ಚಿನ್ನದ ದರ ಇಳಿಕೆ ಕಾಣಲಾರಂಭಿಸಿದೆ. ಈ ಮೂಲಕ ಕಳೆದ ಒಂಭತ್ತು ದಿನಗಳಿಂದ 22 ಕ್ಯಾರೆಟ್ ಚಿನ್ನದ ದರ ಒಟ್ಟು 1800 ರೂ. ಇಳಿಕೆ ಕಂಡಿದೆ.
ಇನ್ನೂ ಏರಿಕೆಯಾಗಲಿದೆ ಚಿನ್ನದ ಬೆಲೆ: ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದ್ದಾರೆ. ಕೊರೋನಾ ಸೋಂಕು ಹರಡುವಿಕೆ ಇನ್ನೂ ನಿಂತಿಲ್ಲ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ.
ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಹೀಗಾಗಿ, ಚಿನ್ನ ಖರೀದಿ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದವರು ಚಿಂತಾಕ್ರಾಂತರಾಗಿದ್ದಾರೆ. ಚಿನ್ನ ಖರೀದಿ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ.

Latest Videos

click me!