'ನನ್ನ ಮಗ ನಿಖಿಲ್‌ ಕಾಮತ್‌ ಹೇಳಿದಂತೆ ಆಯ್ತು! ಬಂಗಾರ ಖರೀದಿಸೋವಾಗ ಇದನ್ನು ಫಾಲೋ ಮಾಡಿ': ರೇವತಿ ಕಾಮತ್

Published : Aug 03, 2025, 03:18 PM IST

“ಇಂದು ಬಂಗಾರದ ದರ ಗಗನಕ್ಕೇರಿರೋದು ಎಲ್ಲರಿಗೂ ಗೊತ್ತೇ ಇದೆ. ನನ್ನ ಮಗ ನಿಖಿಲ್‌ ಕಾಮತ್‌ ಈ ಹಿಂದೆ ಬಂಗಾರದ ದರ ಜಾಸ್ತಿ ಆಗಲಿದೆ ಅಂತ ಹೇಳಿದ್ದನ್ನು ಕೇಳಿಸ್ಕೊಂಡಿದ್ದೆ. ಈಗ ಅದೇ ಥರ ಆಗಿದೆ” ಎಂದು ರೇವತಿ ಕಾಮತ್‌ ಹೇಳಿದ್ದಾರೆ. 

PREV
15
ದಿ ಒರಿಜಿನಲ್‌ ಆಭರಣ ಮಳಿಗೆ

ಹೌದು, ಬೆಂಗಳೂರಿನಲ್ಲಿ ಉಡುಪಿಯ ದಿ ಒರಿಜಿನಲ್‌ ಆಭರಣ ಮಳಿಗೆ ಉದ್ಘಾಟನೆಗೊಂಡಿದೆ. ಆ ವೇಳೆ ಅತಿಥಿಯಾಗಿ ಭಾಗವಹಿಸಿದ್ದ ರೇವತಿ ಕಾಮತ್‌ ಅವರು ಈ ಬಗ್ಗೆ ʼಏಷಿಯಾನೆಟ್‌ ಸುವರ್ಣ ನ್ಯೂಸ್‌ʼ ಜೊತೆಗೆ ಮಾತನಾಡಿದ್ದಾರೆ.

25
ನಮ್ಮ ಸಂಸ್ಕೃತಿ ಸೊಗಡಿನ ಆಭರಣ

ರೇವತಿ ಕಾಮತ್‌ ಅವರು ಉಡುಪಿಯ ದಿ ಒರಿಜಿನಲ್‌ ಆಭರಣ ಮಳಿಗೆ ಈಗ ಬೆಂಗಳೂರಿಗೆ ಬಂದಿರೋದು ತುಂಬ ಖುಷಿ ಕೊಟ್ಟಿದೆ. ಇಲ್ಲಿನ ಡಿಸೈನ್‌ ನೋಡಿದಾಗ ನಮ್ಮ ಸಂಸ್ಕೃತಿ, ಸೊಗಡು ಎದ್ದು ಕಾಣುವುದು. ಇದು ನಿಜಕ್ಕೂ ಖುಷಿ ಕೊಟ್ಟಿದೆ ಎಂದು ಹೇಳಿದ್ದಾರೆ. 

35
ಬಂಗಾರ ಖರೀದಿಸುವುದು ಒಳ್ಳೆಯದು!

“ಬಂಗಾರದ ಆಭರಣಗಳು ನಿಜಕ್ಕೂ ಒಳ್ಳೆಯ ಹೂಡಿಕೆ. ನನ್ನ ಮಗ ಕಳೆದ ವರ್ಷವೇ ಬಂಗಾರದ ರೇಟ್‌ ಜಾಸ್ತಿ ಆಗತ್ತೆ ಅಂತ ಹೇಳಿದ್ದ. ಅದರಂತೆ ಹೆಚ್ಚಾಗಿದೆ. ಬಂಗಾರ ತಗೊಳ್ಳೋದು ನಿಜಕ್ಕೂ ಒಳ್ಳೆಯದು. ಸಣ್ಣ ಮೊತ್ತದಲ್ಲಿ ಬಂಗಾರ ತಗೊಂಡರೂ ಕೂಡ ನಾಳೆ ನಮಗೆ ಅದು ದುಪ್ಪಟ್ಟಾಗಿ ಸಿಗುವುದು” ಎಂದು ಅವರು ಹೇಳಿದ್ದಾರೆ.

45
ಗೋಲ್ಡ್‌ ಖರೀದಿಸುವಾಗ ಏನು ಮಾಡಬೇಕು?

“ನನ್ನ ಬಳಿ ಗೋಲ್ಡ್‌ ಕಲೆಕ್ಷನ್ಸ್‌ ಇದೆ. ಎಷ್ಟಿದೆ ಅಂತ ಮಾತ್ರ ನಾನು ಹೇಳಲ್ಲ. ಅದು ಸೀಕ್ರೇಟ್.‌ ನನ್ನ ಸೊಸೆ, ಮಗ ಜಾಸ್ತಿ ಗೋಲ್ಡ್‌ ಗಿಫ್ಟ್‌ ಕೊಡ್ತಾರೆ. ಬಂಗಾರ ತಗೊಳ್ಳುವವರಿಗೆ ನಾನು ಒಂದು ಸಲಹೆ ಕೊಡಲು ಬಯಸುತ್ತೇನೆ. ಬಂಗಾರದ ಆಭರಣ ತಗೊಳ್ಳುವಾಗ ವೇಸ್ಟೇಜ್‌ ಇರದಂತೆ ನೋಡಿಕೊಳ್ಳಿ. ಮಣಿಗಳು ಅಥವಾ ಬೇರೆ ವರ್ಕ್‌ ಇರದ ಬಂಗಾರದ ಡಿಸೈನ್‌ ನೀವು ಖರೀದಿಸಿ” ಎಂದು ಅವರು ಹೇಳಿದ್ದಾರೆ.

55
ಬಹುಮುಖ ಪ್ರತಿಭೆ ರೇವತಿ ಕಾಮತ್‌

ರೇವತಿ ಕಾಮತ್‌ ಅವರು ಉದ್ಯಮಿ, ಶಿಕ್ಷಣತಜ್ಞೆ, ಸಂಗೀಕಾರ್ತಿ ಕೂಡ ಹೌದು. ನಿಖಿಲ್‌ ಕಾಮತ್‌ ಅವರು ಜೆರೋಧಾ ಫೌಂಡರ್‌ ಆಗಿದ್ದು, ಸ್ಟೋಕ್‌ ಮಾರ್ಕೆಟ್‌ನಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ.

Read more Photos on
click me!

Recommended Stories